ಕೋಟದ ಮೂಡುಗಿಳಿಯಾರಿನಲ್ಲಿ ಅತೀ ಎತ್ತರದ ವಿವೇಕಾನಂದ ಪ್ರತಿಮೆ

ಉಡುಪಿ, ಫೆಬ್ರುವರಿ 01: ಸ್ವಾಮಿ ವಿವೇಕಾನಂದರ ಎತ್ತರದ ಪ್ರತಿಮೆ ಕನ್ಯಾಕುಮಾರಿಯಲ್ಲಿದೆ. ಆದರೆ ಅದನ್ನೂ ಮೀರಿಸುವ ಪ್ರಪಂಚದ ಅತೀ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಜ್ಞಾನಪೀಠ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ ಊರಲ್ಲಿ ತಲೆ ಎತ್ತಿದೆ.

ಹೌದು. ಸುತ್ತಲೂ ಹಸಿರು ಹಸಿರಾದ ಕೃಷಿ ಭೂಮಿ ಮತ್ತು ನಿಸರ್ಗದ ಮಧ್ಯ ಕೈಕಟ್ಟಿ ಮಂದಸ್ಮಿತರಾಗಿ ನೋಡುತ್ತಿರುವ ಸ್ವಾಮಿ ವಿವೇಕಾನಂದರ ಬೃಹತ್ ಮೂರ್ತಿ ಇಂದು ಲೋಕಾರ್ಪಣೆಗೊಂಡಿದೆ. ಈ ಸುಂದರ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ನೀವು ಉಡುಪಿಯ ಕೋಟದ ಮೂಡು ಗಿಳಿಯಾರಿಗೆ ಬರಬೇಕು. ಕೋಟ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ದಿಕ್ಕಿಗೆ ಸಾಗಿದರೆ ಮೂಡ ಗಿಳಿಯಾರು ಸಿಗುತ್ತದೆ. ಇದೇ ಊರಿನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಾಣಗೊಂಡ ಸರ್ವ ಕ್ಷೇಮ ಆಸ್ಪತ್ರೆಯ ಅಂಗಳದಲ್ಲಿದೆ ಈ ಪ್ರತಿಮೆ.

ಸಾಲಿಗ್ರಾಮ ಡಿವೈನ್ ಪಾರ್ಕ್‌ನ ಅಂಗ ಸಂಸ್ಥೆಯಾದ ಸರ್ವ ಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಯೋಗಬನದಲ್ಲಿನ 35 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಕಾಂಕ್ರಿಟ್ ಪ್ರತಿಮೆ ಗಿನ್ನೆಸ್ ದಾಖಲೆಯ ಪುಟ ಸೇರಲು ತಯಾರಾಗಿದೆ.

Tallest Statue Of Swami Vivekananda In Kota Of Udupi District

ರಾಂಚಿಯಲ್ಲಿ ನಿರ್ಮಾಣವಾದ ವಿವೇಕಾನಂದರ ಪ್ರತಿಮೆಯು 32 ಅಡಿ ಇದ್ದು, ಅದು ಈ ಹಿಂದೆ ಪ್ರಪಂಚದ ಎತ್ತರದ ವಿವೇಕಾನಂದರ ಪ್ರತಿಮೆ ಎನ್ನುವ ಹೆಗ್ಗಳಿಕೆ ಪಡೆದಿತ್ತು. ಉಳಿದಂತೆ ಸಾಲಿಗ್ರಾಮ ಡಿವೈನ್ ಪಾರ್ಕ್‌ನಲ್ಲಿರುವ ವಿವೇಕಾನಂದರ ಫೈಬರ್ ಪ್ರತಿಮೆ ಮತ್ತು ಮಲೇಷ್ಯಾದಲ್ಲಿರುವ ಪ್ರತಿಮೆ, ಎರಡು ಮತ್ತು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಪ್ರತಿಮೆಯ ತದ್ರೂಪು ಇದಾಗಿದೆ.

Tallest Statue Of Swami Vivekananda In Kota Of Udupi District

ಮುರ್ಡೇಶ್ವರದಲ್ಲಿ ಅತೀ ಎತ್ತರದ ಶಿವನ ವಿಗ್ರಹ ಮತ್ತು ಗದಗದಲ್ಲಿ ಅತೀ ಎತ್ತರದ ಬಸವನ ಪ್ರತಿಮೆ ನಿರ್ಮಿಸಿದ ಬೆಂಗಳೂರಿನ ಶ್ರೀಧರ ಮೂರ್ತಿ ತಂಡ ಈ ಪ್ರತಿಮೆ ನಿರ್ಮಿಸಿದೆ. ಕಾಂಕ್ರೀಟ್ ಪ್ರತಿಮೆಗೆ ಗಾಳಿ ಮಳೆಯಿಂದ ರಕ್ಷಣೆ ನೀಡುವ ಉದ್ದೇಶಕ್ಕೆ ಲೋಹದ ಹೊದಿಕೆ ಹಾಕಲಾಗಿದ್ದು, ಸುಮಾರು 40 ಮಂದಿ ಶಿಲ್ಪಿಗಳು ಆರು ತಿಂಗಳುಗಳ ಕಾಲ ಶ್ರಮವಹಿಸಿ ಈ ಪ್ರತಿಮೆ ಸಿದ್ಧಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+