ಜು.23 ಕ್ಕೆ ಕುಂದಾಪುರ ಬಸ್ರೂರಿನಲ್ಲಿ 'ಸಿಂಚನ' ಪುಸ್ತಕ ಬಿಡುಗಡೆ
ಉಡುಪಿ, ಜುಲೈ 21: ಶ್ರೀಕಾಶೀ ಮಠ ಸಂಸ್ಥಾನದ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಉಡುಪಿ ಜಿಲ್ಲೆ ಕುಂದಾಪುರದ ಬಸ್ರೂರಿನಲ್ಲಿರುವ ಶ್ರೀ ಭುವನೇಂದ್ರ ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ಸಿಂಚನ ಎಂಬ ಪುಸ್ತಕವೊಂದು ಪ್ರಕಟಿಸಲ್ಪಡುತ್ತಿದೆ.
ಜುಲೈ 23, ಭಾನುವಾರದಂದು ಪುಸ್ತಕವನ್ನು ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದಾರೆ.

ಈ ಪುಸ್ತಕ ಬಿಡುಗಡೆಯು ಶ್ರೀ ಸಂಸ್ಥಾನದ ಮೂರು ವಿದ್ಯಾ ಸಂಸ್ಥೆಗಳಾದ ಮಂಗಳೂರಿನ ಶ್ರೀ ಶ್ರೀನಿವಾಸ ನಿಗಮಾಗಮ ಪಾಠಶಾಲೆ, ಬಸ್ರೂರಿನ ಶ್ರೀ ಭುವನೇಂದ್ರ ಬಾಲಕಾಶ್ರಮ, ಕಾರ್ಕಳದ ಶ್ರೀಸುಕೃತೀಂದ್ರ ಬಾಲಕಾಶ್ರಮ ಇವುಗಳ ವಾರ್ಷಿಕೋತ್ಸವ ಸಮಾರಂಭದ ಶುಭಸಂದರ್ಭದಲ್ಲಿ ನಡೆಯಲಿದೆ.












Click it and Unblock the Notifications