• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಿಂದ ಉತ್ತರಪ್ರದೇಶಕ್ಕೆ ಹೊರಟ ಶ್ರಮಿಕ್ ರೈಲು

By ಉಡುಪಿ ಪ್ರತಿನಿಧಿ
|

ಉಡುಪಿ, ಮೇ 17: ಕೃಷ್ಣನಗರಿ ಉಡುಪಿಯಿಂದ ಉತ್ತರಪ್ರದೇಶಕ್ಕೆ ವಿಶೇಷ ಶ್ರಮಿಕ್ ರೈಲು ಇಂದು ಪ್ರಯಾಣ ಬೆಳೆಸಿತು. ಈ ಹಿನ್ನೆಲೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಕಾರ್ಮಿಕರು ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.

ಆದರೆ ಒಂದೂವರೆ ಸಾವಿರ ಪ್ರಯಾಣಿಕರಿಗೆ ಮಾತ್ರ ರೈಲಿನಲ್ಲಿ ಅವಕಾಶ ಇದ್ದಿದ್ದರಿಂದ ಉಳಿದ ಸಾವಿರದಷ್ಟು ವಲಸೆ ಕಾರ್ಮಿಕರ ಪ್ರಯಾಣಕ್ಕೆ ಅವಕಾಶ ಸಿಗದೆ ನಿರಾಸೆಗೊಂಡರು.ಇವರೆಲ್ಲ ಸೇವಾ ಸಿಂಧು ಮೂಲಕ ಅರ್ಜಿ ಹಾಕಿ ಬಂದಿದ್ದರು.

ಉಡುಪಿಯಲ್ಲಿ ಹೃದಯಾಘಾತದಿಂದ ಸತ್ತಿದ್ದ ವ್ಯಕ್ತಿಯಲ್ಲಿತ್ತು ಕೊರೊನಾ

ಇನ್ನಷ್ಟು ಕಾರ್ಮಿಕರು ಉಡುಪಿಯಿಂದ ಮರಳಿ ತಮ್ಮ ಊರಿಗೆ ಹೋಗಬೇಕಿರುವುದರಿಂದ ಜಿಲ್ಲಾಡಳಿತ ಎರಡನೇ ರೈಲು ವ್ಯವಸ್ಥೆಗೊಳಿಸುವ ಭರವಸೆ ನೀಡಬೇಕಾಯಿತು. ರೈಲ್ವೆ ನಿಲ್ದಾಣಕ್ಕೆ ಬಂದ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಒಂದು ಹಂತದಲ್ಲಿ ಹರಸಾಹಸ ಪಡಬೇಕಾಯಿತು.

ಉತ್ತರಪ್ರದೇಶದ ವಲಸೆ ಕಾರ್ಮಿಕರು ಇಂದು ಬೆಳಿಗ್ಗಿನಿಂದಲೇ ಬಂದು ಠಿಕಾಣಿ ಹೂಡಿದ್ದರು. ಇವರಿಗೆಲ್ಲ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಆಹಾರ ವಿತರಣೆ ಮಾಡಲಾಯಿತು.

English summary
Special train from Krishnanagiri Udupi to Uttar Pradesh It was in this backdrop that more than two and a half thousand workers came to the Indrali railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X