ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಸಂಸದೆ ಶೋಭಾ ಕಿಡಿ

Posted By:
Subscribe to Oneindia Kannada

ಉಡುಪಿ, ನವೆಂಬರ್ 25: ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು.

ಚಂಪಾ ಅವರೇ, ಅದೇನು ಸಾಹಿತ್ಯ ಸಮ್ಮೇಳನವೋ, ಕಾಂಗ್ರೆಸ್ ಸಮಾವೇಶವೋ?

ಉಡುಪಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಕನ್ನಡ ಸಾಹಿತ್ಯ ಸಮ್ಮೇಳನ ಕಾಂಗ್ರೆಸ್ ಸಮ್ಮೇಳನವಾಗಿ ಪರಿವರ್ತನೆಗೊಂಡಿದೆ ಎಂದು ಕಿಡಿಕಾರಿದರು.

Shobha Karandlaje Unhappy about 83rd Kannada Sahitya Sammelana

ಸಮ್ಮೇಳನದಲ್ಲಿ ಎಡಪಂಥೀಯ ವಿಚಾರಧಾರೆ ಹರಿಯಬಿಟ್ಟಿದ್ದಾರೆ. ಸಮ್ಮೇಳನ ದಲ್ಲಿ ಹಿಂದೂ ಧರ್ಮ ಸಂಸದ್ ಬಗ್ಗೆಯೂ ಟೀಕಿಸಲಾಗುತ್ತಿದೆ. ಸಮ್ಮೇಳನದಲ್ಲಿ ಕನ್ನಡ ನಾಡಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯದೆ ಕನ್ನಡ ಹೊರತಾದ ಚರ್ಚೆ ನಡೆಯುತ್ತಿದೆ ಇದನ್ನು ನಾವು ಆತಂಕದಿಂದ ನೋಡುವಂತಾಗಿದೆ ಎಂದು ಸಮ್ಮೇಳನಾಧ್ಯಕ್ಷ ಚಂಪಾ ಸೇರಿದಂತೆ ಎಲ್ಲರ ವಿರುದ್ಧ ಶೋಭಾ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸೆಕ್ಯೂಲರ್ ಪಕ್ಷಕ್ಕೇ ಮತನೀಡಿ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ್ ಪಾಟೀಲ್ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಹೇಳಿದ್ದರು. ಆದರೆ ಈ ಹೇಳಿಕೆ ಇದೀಗ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi-Chikmagalur MP Shobha Karandlaje expressed Unhappiness about 83rd All India Kannada Sahitya Sammelana in Mysuru. Kannada Sahitya Sammelana converted as a Congress convention said Shobha Karandlaje in press meet at Udupi on November 25.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ