ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ?

ಉಡುಪಿ, ಫೆಬ್ರವರಿ 09; ಕಾರವಾರ-ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲಿನ ಪ್ರಯಾಣದ ಅವಧಿ ಕಡಿತಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ರೈಲು ಬೆಳಗ್ಗೆ 8ಗಂಟೆಗೆ ಬೆಂಗಳೂರು ನಗರವನ್ನು ತಲುಪುತ್ತಿದೆ.

2020ರಲ್ಲಿ ಕಾರವಾರ-ಬೆಂಗಳೂರು ರೈಲು ಆರಂಭಗೊಂಡಿತ್ತು. ಪಡೀಲು ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ. ಈ ರೈಲಿಗೆ ಉತ್ತಮವಾದ ಸ್ಪಂದನೆ ಸಹ ವ್ಯಕ್ತವಾಗಿದೆ.

ಕಾರವಾರ, ಉಡುಪಿ, ಕುಂದಾಪುರ ಭಾಗದ ಜನರು ಈ ರೈಲಿನ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ರೈಲಿನ ಪ್ರಯಾಣದ ಅವಧಿ ಬಗ್ಗೆ ಅಸಮಾಧಾವಿದೆ.

 Shobha Karandlaje Demand For Cut Of Travel Time Of Bengaluru Karwar Train

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೈಋತ್ಯ ರೈಲ್ವೆಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ರೈಲು ಬೆಂಗಳೂರು ತಲುಪುವಾಗ ಬೆಳಗ್ಗೆ 8ಗಂಟೆಯಾಗುತ್ತಿದೆ. 7.15ಕ್ಕೆ ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ರೈಲಿನಲ್ಲಿ ಬಹುತೇಕ ಸೀಟುಗಳು ವೈಟಿಂಗ್ ಇರುತ್ತವೆ. ಇಲ್ಲಿನ ಭಾಗದವರಿಗೆ ಹೆಚ್ಚಿನ ಸೀಟುಗಳು ಸಿಗಬೇಕು ಅದಕ್ಕಾಗಿ ರೈಲನ್ನು ಗೋವಾ ತನಕ ಸಂಚಾರ ನಡೆಸದೇ ಕಾರವಾರಕ್ಕೆ ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾರವಾರ-ಬೆಂಗಳೂರು ರೈಲಿಗೆ ಫೆ.26ರಿಂದ ಫಸ್ಟ್ ಕ್ಲಾಸ್ ಎಸಿ ಬೋಗಿ ಜೋಡಣೆಯಾಗಲಿದೆ. ಬಳಿಕ ಕೈಗಾದ ಅಧಿಕಾರಿಗಳು ಹೆಚ್ಚಾಗಿ ರೈಲನ್ನು ಬಳಕೆ ಮಾಡುವ ನಿರೀಕ್ಷೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+