ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಮಸೀದಿ ಕಟ್ಟಡದಲ್ಲಿದ್ದ SDPI ಅಧ್ಯಕ್ಷನ ಅಕ್ರಮ ಹೋಟೆಲ್ ತೆರವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 26: ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಅಬ್ಬರಿಸಿದೆ. ನಗರದಲ್ಲಿ ಕಟ್ಟಿರುವ ಹಲವು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಉಡುಪಿ ನಗರಸಭೆ ಮಾಡಿದೆ.

ಉಡುಪಿ ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಕಳೆದ ಹಲವು ವರ್ಷಗಳಿಂದ ಅಕ್ರಮ ಕಟ್ಟಡದಲ್ಲಿ ಹೋಟೆಲ್ ವ್ಯವಹಾರ ನಿರ್ವಹಿಸುತ್ತಿದ್ದು, ನಗರಸಭೆ ಹಲವು ನೋಟಿಸ್ ನೀಡಿದ ಬಳಿಕ ಹೋಟೆಲ್ ತೆರವುಗೊಳಿಸಿದ ಕಾರಣ ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಬುಲ್ಡೋಜರ್‌ನಲ್ಲಿ ಹೋಟೆಲ್ ಕಟ್ಟಡ ನೆಲಸಮಗೊಳಿಸಿದೆ.

ರಾಜ್ಯದ 3ನೇ ಶ್ರೀಮಂತ ದೇವಸ್ಥಾನ ಕೊಲ್ಲೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ!ರಾಜ್ಯದ 3ನೇ ಶ್ರೀಮಂತ ದೇವಸ್ಥಾನ ಕೊಲ್ಲೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ!

ಉಡುಪಿ ನಗರದ ಜಾಮೀಯಾ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬುಲ್ಡೋಜರ್ ಘರ್ಜನೆ ಮಾಡಿದ್ದು, ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆಯ ಕಾರ್ಯಾಚರಣೆ ಮಾಡಿದೆ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಅವರ ಝರಾ ಹೋಟೆಲ್ ಅನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

Udupi: SDPI District Presidents Illegal Hotel Clearance At Mosque Building

ನಜೀರ್ ಅಹಮ್ಮದ್ ಅವರ ಹೋಟೆಲ್ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಅಕ್ರಮ ಕಟ್ಟಡದಲ್ಲಿದೆ. ಈ ಬಗ್ಗೆ ನಜೀರ್ ಅಹಮ್ಮದ್ ಅವರಿಗೆ ನಗರಸಭೆ ಹಲವು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳು ಇದೀಗ ಹೋಟೆಲ್ ತೆರವು ಮಾಡಿದ್ದಾರೆ.

ಹೋಟೆಲ್ ತೆರವು ಹಿನ್ನಲೆಯಲ್ಲಿ ನಜೀರ್ ಅಹಮ್ಮದ್ ಜೊತೆ ಅಧಿಕಾರಿಗಳು, ಪೊಲೀಸರು ಜೊತೆ ಮಾತುಕತೆ ಮಾಡಿದ್ದಾರೆ. ನಗರಸಭೆ ಸಿಬ್ಬಂದಿ, ಪೌರ ಕಾರ್ಮಿಕರಿಂದ ಅಂಗಡಿ ತೆರವು ಮಾಡಲಾಗಿದೆ. ಹೋಟೆಲ್ ಜೊತೆಗೆ ಕಟ್ಟಡದಲ್ಲಿರುವ ಝೈತರ್ ಆನ್ ಎಂಬ ಮಳಿಗೆಯೂ ತೆರವು ಮಾಡಲಾಗಿದೆ.

ಎಸ್‌ಡಿಪಿಐ ಜಿಲ್ಲಾಧ್ಯಕ್ಷನ ಅಕ್ರಮ ಕಟ್ಟಡ ತೆರವು ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿದೆ. ಹೋಟೆಲ್ ತೆರವು ಕಾರ್ಯಾಚರಣೆ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಈ ಹೋಟೆಲ್ ತೆರವು ಬಗ್ಗೆ ಕಳೆದ ಒಂದು ವರ್ಷದಿಂದ‌ ನೋಟಿಸ್ ನೀಡುತ್ತಿದ್ದೇವೆ. ಅಕ್ರಮ ಕಟ್ಟಡ ತೆರವು ಬಗ್ಗೆ ಮೂರು ತಿಂಗಳಿನಿಂದ ನಗರಸಭೆಯಲ್ಲಿ ಚರ್ಚೆಯನ್ನು ಮಾಡಲಾಗಿದೆ. ನೋಟಿಸ್ ನೀಡಿಯೇ ಅಕ್ರಮ ಕಟ್ಟಡ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

Udupi: SDPI District Presidents Illegal Hotel Clearance At Mosque Building

Recommended Video

ಕಾಲಿಗೆ ಒಂಚೂರು ಕೆಸರು ತಾಕಿಸಿಕೊಳ್ಳದೆ ರಸ್ತೆ ದಾಟ್ಬೇಕಾ? ಹಾಗಾದ್ರೆ ಈ ವಿಡಿಯೋ ನೋಡಿ | Oneindia Kannada

ಈ ವೇಳೆ ಕೇವಲ ಈ ಕಟ್ಟಡ ಮಾತ್ರನಾ? ಬೇರೆ ಅಕ್ರಮ ಕಟ್ಟಡಗಳನ್ನು ಏನು ಮಾಡುತ್ತೀರಿ? ಎಂದು ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಉಡುಪಿ ನಗರದ ಎಲ್ಲಾ ಅಕ್ರಮ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ.‌ ತೆರವುಗೊಳಿಸದಿದ್ದಲ್ಲಿ ಕಾರ್ಯಾಚರಣೆ ಮಾಡಿ ತೆರವು ಮಾಡುವುದಾಗಿ ಹೇಳಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಹೋರಾಟಕ್ಕೆ, ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ಎಸ್‌ಡಿಪಿಐ ಮತ್ತು ಸಿಎಫ್ಐ ನೇರ ಬೆಂಬಲ ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಟಾರ್ಗೆಟ್ ಮಾಡಲಾಗಿದೆ ಅಂತಾನೂ ಆರೋಪ ಮಾಡಲಾಗಿದೆ.

English summary
Udupi Municipal Council officials have cleared the illegal hotel of SDPI President Najeer Ahmed in the Udupi mosque building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X