ಎರಡು ಲಕ್ಷ ರೂ.ಮೌಲ್ಯದ ದೇವಿಯ ಬೆಳ್ಳಿಯ ಮುಖವಾಡ ಕದ್ದ ಖದೀಮರು
ಉಡುಪಿ, ಜುಲೈ.30: ಭಾನುವಾರ ರಾತ್ರಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ಬೆಳ್ಳಿಯ ಮುಖವಾಡ ಮತ್ತು ಗಣಪತಿ ಮುಖವಾಡಗಳನ್ನು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ದೇವಿಯ ಮುಖವಾಡದ ಮೌಲ್ಯ ಎರಡು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಳ್ಳತನ ಮಾಡೋ ಮೊದಲು ಅರ್ಚಕರ ಮನೆಗೆ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಬಳಿಕ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಂತರ ಸೈರಲ್ ಸದ್ದು ಕೇಳಿ ಅರ್ಚಕರು ಹೊರಗೆ ಬರಲು ನೋಡಿದ್ದಾರೆ.
ಆದರೆ ಅವರ ಮನೆ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದರಿಂದ ಅವರು ಬರಲು ಸಾಧ್ಯವಾಗಿಲ್ಲ. ನಂತರ ಸ್ಥಳೀಯರು ಬಂದು ಬಾಗಿಲು ತೆರೆದರು. ಎಲ್ಲರೂ ಸೇರಿ ಕಳ್ಳರ ಹುಡುಕಾಟ ನಡೆಸಿದರು.

ರಾತ್ರಿ ಹನ್ನೆರಡು ಗಂಟೆಗೆ ಕಳ್ಳತನ ನಡೆದ ಶಂಕೆ ವ್ಯಕ್ತವಾಗಿದೆ. ಗ್ರಾಮಾಂತರ ಠಾಣಾಧಿಕಾರಿ ಶ್ರೀಧರ್ ನಾಯಕ್ ಅವರು ರಾತ್ರಿ ಮೂರು ಗಂಟೆಗೆ ಸ್ಥಳಕ್ಕೆ ಶ್ವಾನದಳದ ಸಮೇತ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸುತ್ತಿದ್ದಾರೆ.

ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications