ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಸೇವೆ ಮಾಡಿದ್ರೆ ಹೆಂಡ್ತಿ ಡೈವೋರ್ಸ್ ಕೊಡಲ್ಲ; ದೇಶಪಾಂಡೆ

|
Google Oneindia Kannada News

ಉಡುಪಿ ಜೂನ್ 19: 'ನಾನು ಗೋಡಂಬಿ ತಿನ್ನೋಕೆ ಬಂದಿಲ್ಲ. ನನಗೆ ಉಡಾಫೆ ಉತ್ತರ ಕೊಡಬೇಡಿ' ಎಂದು ಅಧಿಕಾರಿಗಳ ವಿರುದ್ಧ ಗುಡುಗಿದ್ದು ಕಂದಾಯ ಸಚಿವ ಆರ್. ವಿ.ದೇಶಪಾಂಡೆ. ಮಂಗಳವಾರ ಉಡುಪಿಯಲ್ಲಿ ನಡೆದ ಬರ, ನೆರೆ ಪರಿಹಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವ ಆರ್.ವಿ.ದೇಶಪಾಂಡೆ ಗರಂ ಆದರು.

ಉಡುಪಿಯಲ್ಲಿ ಬರ, ನೆರೆ ಪರಿಹಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಮೂರು ತಾಲ್ಲೂಕು ಪಂ‌ಚಾಯತ್ ಇಒಗಳಿಗೆ ದೇಶಪಾಂಡೆ ಕ್ಲಾಸ್ ತೆಗೆದುಕೊಂಡ್ರು. ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನನಗೆ ಉಡಾಫೆ ಉತ್ತರ ಕೊಡಬೇಡಿ. ನಾನು ಸಭೆಗೆ ಸುಮ್ಮನೆ ಬಂದಿಲ್ಲ. ಟೀಂ ಮಾಡಿ ನಿಮ್ಮ ಕೆಲಸದ ಬಗ್ಗೆ ಸತ್ಯ ಹುಡುಕಿಸ್ತೇನೆ ಎಂದು ಕಿಡಿಕಾರಿದರು.

ಸರ್ಕಾರ ಸುಭದ್ರವಾಗಿದೆ. ನೀವ್ಯಾಕೆ ತಲೆ ಕೆಡಿಸ್ಕೋತೀರಿ?'ಸರ್ಕಾರ ಸುಭದ್ರವಾಗಿದೆ. ನೀವ್ಯಾಕೆ ತಲೆ ಕೆಡಿಸ್ಕೋತೀರಿ?'

ಚುನಾಯಿತ ಪ್ರತಿನಿಧಿಗಳಿಗೆ ಗೌರವ ಕೊಡೋದನ್ನು ಕಲಿಯಿರಿ ಎಂದು ಹೇಳಿದ ಅವರು, ನಿಮಗೆ ಶೋಕಾಸ್ ನೋಟಿಸ್ ಕೊಡಬೇಕಾಗುತ್ತೆ ಎಂದು ಉಡುಪಿ ನಗರಸಭೆ ಕಮಿಷನರ್ ಗೆ ಎಚ್ಚರಿಸಿದರು. ನೀರಿನ ಬರದ ಸಂದರ್ಭದಲ್ಲಿ ಉಡುಪಿ ನಗರಕ್ಕೆ ಯಾಕೆ ಟ್ಯಾಂಕರ್ ನೀರು ಕೊಟ್ಟಿಲ್ಲ? ಎಂದು ಕಮಿಷನರ್ ಆನಂದ್ ಕಲ್ಲೋಳಿಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

R V Deshpande slams Officials at udupi

ಕಚೇರಿಗೆ ಜನ ಬಂದಾಗ ಕೂರಿಸಿ ಮಾತಾಡಿಸಿ. ಎಲ್ಲಾ ಸರ್ಕಾರಿ ಕಚೇರಿಗಳಿಗೆ ನಾಲ್ಕು ಕುರ್ಚಿ ಹೆಚ್ಚು ಖರೀದಿಸಿ. ಜನ ಇದ್ರೆ ನಾವು, ನೀವು ಇರ್ತಿವಿ. ರಾತ್ರಿ 7- 8 ಗಂಟೆಯವರೆಗೆ ಕೆಲಸ ಮಾಡಿ. ಜನಸೇವೆ ಮಾಡಿದ್ರೆ ನಿಮಗೆ ನಿಮ್ ಹೆಂಡ್ತಿ ಡೈವೋರ್ಸ್ ಕೊಡಲ್ಲ. ಜನರ ಸೇವೆ ಮಾಡಿದ್ರೆ ಪುಣ್ಯ ಬರುತ್ತೆ. ಮಧ್ಯಾಹ್ನದ ನಂತರ ವಾಚ್ ನೋಡೋದನ್ನು ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

 ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ

ಅಧಿಕಾರಿ, ಸಿಬ್ಬಂದಿಗೆ ಸರ್ಟಿಫಿಕೇಟ್ ಕೊಡಿ. ಕೆಟ್ಟದ್ದಕ್ಕೂ ಒಳ್ಳೇದಕ್ಕೂ ಸರ್ಟಿಫಿಕೇಟ್ ಕೊಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

English summary
Addressing District administration officials in Udupi, revenue minister R V Deshpande slammed officials and warned them to do public service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X