ಉಡುಪಿ ತಾಲ್ಲೂಕು ಅರಣ್ಯಾಧಿಕಾರಿ-ಶಾಸಕ ನಡುವೆ ಜಟಾಪಟಿ
ಉಡುಪಿ, ಫೆಬ್ರವರಿ 24: ಬ್ರಹ್ಮಾವರ ವ್ಯಾಪ್ತಿಯ ಕುಂಜಾಲು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮತ್ತು ಅರಣ್ಯಾಧಿಕಾರಿ ನಡುವೆ ಜಟಾಪಟಿ ನಡೆದಿದೆ.
ಇಂದು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ರಘುಪತಿ ಭಟ್ ಮತ್ತು ಹೆಬ್ರಿ ವಲಯಾಧಿಕಾರಿ ಮುನಿರಾಜು ಅವರ ನಡುವಿನ ಮಾತಿನ ಚಕಮಕಿ ಸಾಕ್ಷಿಯಾಯಿತು.
ಈ ಸಂದರ್ಭ ಅರಣ್ಯಾಧಿಕಾರಿ ಅವರು ಅಗೌರವ ತೋರಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅರಣ್ಯ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದರು. ನಾನು ಅಗೌರವ ತೋರಿಲ್ಲ, ನಾನು ಸರ್ಕಾರಿ ಇಲಾಖೆಯ ಅಧಿಕಾರಿ, ನೀವು ಗೌರವ ಕೊಟ್ಟು ಮಾತನಾಡಿ ಎಂದು ಅರಣ್ಯಾಧಿಕಾರಿ ಶಾಸಕರಿಗೆ ಹೇಳಿದರು.

ಅಧಿಕಾರಿಯ ಈ ಮಾತಿಗೆ ಮತ್ತಷ್ಟು ಕೆರಳಿದ ಶಾಸಕರು ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗುಡುಗಿದರು. ನಂತರ ಅಧಿಕಾರಿಗಳ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಮುನಿರಾಜ್ ಅಧಿಕಾರಿಗಳ ಸಾಲಿನಲ್ಲಿ ಕುಳಿತ ನಂತರ ಶಾಸಕರು ಹಾಗೂ ಅಧಿಕಾರಿಯ ಜಟಾಪಟಿ ಮುಂದುವರಿಯಿತು.












Click it and Unblock the Notifications