ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುವೆ: ಪ್ರಮೋದ್ ಮಧ್ವರಾಜ್

|
Google Oneindia Kannada News

ಉಡುಪಿ, ಮಾರ್ಚ್ 23: ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಯಾರೆಂದು ಈಗಾಗಲೇ ಸ್ಪಷ್ಟ ಗೊಂಡಿದೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಿದ್ದಾರೆ. ಆದರೆ ಯಾವ ಚಿಹ್ನೆಯಡಿ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಈ ನಡುವೆ ಪ್ರಮೋದ್ ಮಧ್ವರಾಜ್ ಉಡುಪಿಗೆ ಕಳೆದ ರಾತ್ರಿ ಉಡುಪಿಗೆ ಆಗಮಿಸಿದರು. ಉಡುಪಿ ಚಿಕ್ಕಮಗಳೂರು ಮೈತ್ರಿ ಹೊಂದಾಣಿಕೆಯ ಜೆಡಿಎಸ್ ಟಿಕೆಟ್ ಪಡೆದು ಉಡುಪಿಗೆ ಆಗಮಿಸಿದ್ದ ಪ್ರಮೋದ್ ಮಧ್ವರಾಜ್ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.

ಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂ ಉಡುಪಿ-ಚಿಕ್ಕಮಗಳೂರು : ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಬಿಫಾರಂ

ಮೈತ್ರಿಯ ಸಂಕೇತವಾಗಿ ಕಾಂಗ್ರೆಸ್- ಜೆಡಿಎಸ್ ಚಿಹ್ನೆಯ ಶಾಲು ಧರಿಸಿ ಮಧ್ವರಾಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಒಂದೇ ಶಾಲಿನಲ್ಲಿ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿರುವರುವ ಪ್ರಮೋದ್ ಶಾಲು ಗಮನ ಸೆಳೆಯಿತು.

Pramod Madhwaraj to contest with JD(S) ticket

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್ , ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18 ರ ವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಯ್ತು ಏಂದು ಅವರು ಸ್ಪಷ್ಟನೆ ನೀಡಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ? ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ?

ಉಡುಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿ ಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸ್ತೇನೆ. ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ ಎಂದು ಹೇಳಿದ ಅವರು ಮಾರ್ಚ್‌ 25 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿಉಡುಪಿ - ಚಿಕ್ಕಮಗಳೂರು ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ . ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದು ಅವರು ಹೇಳಿದರು .

English summary
Former minister Pramod Madhwaraj’s candidature on JD(S) ticket from Udupi – Chikmagalur Lok Sabha constituency was confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X