ಕೂಲಿ ಕಾರ್ಮಿಕರಿಗೆ ಮಾತ್ರ ಅಂತರ್ಜಿಲ್ಲೆ ಪ್ರಯಾಣಕ್ಕೆ ಅವಕಾಶ; ಉಡುಪಿ ಡಿಸಿ ಸ್ಪಷ್ಟನೆ
ಉಡುಪಿ, ಮೇ 02: ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆ ನೀಡಿದ್ದು, ರಾಜ್ಯದೊಳಗೆ ಓಡಾಟ ನಡೆಸಲು ಎಲ್ಲರಿಗೂ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Recommended Video
ಜಿಲ್ಲೆಯಿಂದ ಜಿಲ್ಲೆಯ ನಡುವೆ ಓಡಾಟಕ್ಕೆ ಅವಕಾಶ ಇಲ್ಲ. ಕೂಲಿ ಕಾರ್ಮಿಕರಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆರೋಗ್ಯದ ಸಮಸ್ಯೆ ಇದ್ದರೆ ತಾಲೂಕು ಕಚೇರಿಯಲ್ಲಿ ಪಾಸ್ ಕೊಡುತ್ತೇವೆ. ಪಾಸ್ ಕೊಡ್ತೇವೆ ಅಂತ ಜಿಲ್ಲಾಧಿಕಾರಿ -ತಾಲೂಕು ಕಚೇರಿಗೆ ಮುಗಿಬೀಳಬೇಡಿ ಎಂದು ಮನವಿ ಮಾಡಿದ್ದಾರೆ. ಹೊರರಾಜ್ಯಕ್ಕೆ ಹೋಗುವ ಕಾರ್ಮಿಕರು, ಪ್ರವಾಸಿಗರು ಆನ್ ಲೈನ್ ಮೂಲಕ ಅರ್ಜಿ ಹಾಕಬೇಕು ಎಂದು ಮಾಹಿತಿ ನೀಡಿದರು.
ಹೊರರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಕೂಡಾ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬೇಕು. sevasindhu.karnataka.gov.in ಗೆ ಅರ್ಜಿ ಹಾಕಬೇಕು. ಅರ್ಜಿ ಬಂದ ನಂತರ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುವುದು. ಆಯಾ ರಾಜ್ಯಗಳ ಜೊತೆ ಮಾತಾಡಿ, ಯಾವ ರೀತಿ ಕಳಿಸಬೇಕು ಅಥವಾ ಕರೆಸಿಕೊಳ್ಳಬೇಕು ಅಂತ ನಿರ್ಧರಿಸ್ತೇವೆ ಎಂದು ಹೇಳಿದ್ದಾರೆ.

ಮೇ 17 ವರೆಗೆ ಉಡುಪಿಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇರುತ್ತದೆ. ಯಾರೂ ಜಿಲ್ಲೆ ಯಿಂದ ಜಿಲ್ಲೆಗೆ ಓಡಾಡುವಂತಿಲ್ಲ ಸಹಕರಿಸಿ ಎಂದು ಜಿಲ್ಲಾಧಿಕಾರಿ ಜಿ.ಜಗಧೀಶ್ ಹೇಳಿದ್ದಾರೆ.












Click it and Unblock the Notifications