ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರು ಶಬರಿಮಲೆಗೆ ಹೋದರೆ ನಮ್ಮ ಆಕ್ಷೇಪ ಇಲ್ಲ: ಪೇಜಾವರ ಶ್ರೀ

|
Google Oneindia Kannada News

ಉಡುಪಿ, ಅಕ್ಟೋಬರ್. 14: ಶ್ರೀ ಕ್ಷೇತ್ರ ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿವಾದವನ್ನೇ ಸೃಷ್ಟಿಸಿದೆ. ಈ ಕುರಿತು ಮೊದಲ ಬಾರಿಗೆ ಉಡುಪಿಯ ಪೇಜಾವರ ಶ್ರೀ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಬರಿಮಲೆಗೆ ಮಹಿಳೆಯರು ಹೋದರೆ ನಮಗೇನೂ ಆಕ್ಷೇಪ ಇಲ್ಲ. ಮಹಿಳೆಯರು ನಮ್ಮಲ್ಲಿ ಕೃಷ್ಣದೇವರ ದರ್ಶನಕ್ಕೆ ಬರುತ್ತಾರೆ. ಶಿವನ ದೇವಸ್ಥಾನಕ್ಕೆ, ಅಷ್ಟೇ ಏಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಮಹಿಳೆಯರಿಗೆ ಪ್ರವೇಶ ಇದೆ. ಈ ವಿಚಾರದಲ್ಲಿ ನಾನು‌ ಮಧ್ಯ ಪ್ರವೇಶಿಸುವುದಿಲ್ಲ.

Pejawar Swamiji Says We have no objection if women go to Sabarimala

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ

ಶಬರಿಮಲೆ ಕ್ಷೇತ್ರದ ಸಂಪ್ರದಾಯ ಬೇರೆಯೇ ಇದೆ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯ ಇದೆ. ಅರ್ಚಕರು, ಭಕ್ತರು, ರಾಜರಿದ್ದಾರೆ. ಶಬರಿಮಲೆ ವಿಚಾರವನ್ನು ಅವರೇ ನೋಡುತ್ತಾರೆ. ಮತ್ತೊಂದು ದೇವಾಲಯದ ಸಂಪ್ರದಾಯದ ಬಗ್ಗೆ ನಾವು ಮಾತನಾಡೋದು ಸರಿಯಲ್ಲ ಎಂದು ಪೇಜಾವರ ಶ್ರೀ ಪ್ರತಿಕ್ರಿಯಿಸಿದರು.

English summary
Udupi Pejawar Swamiji Said that We have no objection if women go to Sabarimala.Here is short news about pejawar statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X