ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!

By ಸುರಾ, ಕಮಲಶಿಲೆ
|
Google Oneindia Kannada News

ಈ ರಸ್ತೆ ನೋಡಿ ಎಲ್ಲೋ ಪಾಕ್ ಆಕ್ರಮಿತ ಕಾಶ್ಮೀರದ್ದು ಅಂದುಕೊಳ್ಳಬೇಡಿ. ನಮ್ಮದೇ ರಾಜ್ಯದ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾಗಿರುವ ಬೈಂದೂರು ತಾಲೂಕಿನಿಂದ 32 ಕಿಲೋಮೀಟರ್ ಸಾಗಿದರೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿರುವ ಯಡಮೊಗ್ಗೆ ಗ್ರಾಮದ ದುಸ್ಥಿತಿ ಇದು.

ಈ ರಸ್ತೆಯ ಫೋಟೋ ಮತ್ತು ವೀಡಿಯೋಗಳನ್ನು ಸರಿಯಾಗಿ ನೋಡಿ. ವೀಡಿಯೋ ನೋಡಿ,ಫೋಟೋ ನೋಡಿದ್ರೆನೆ ಬೆಚ್ಚಿ ಬೀಳೋ ಪರಿಸ್ಥಿತಿ ಇದೆ. ಇನ್ನು ಈ ರಸ್ತೆಯಲ್ಲಿ ದಿನಾ ಸಂಚರಿಸುವವರ ಪಾಡು ಹೇಗಿರಬೇಡ ಹೇಳಿ? ಬಸುರಿ ಹೆಂಗಸರನ್ನೇನಾದರೂ ಈ ರಸ್ತೆಯಲ್ಲಿ ಕರೆದುಕೊಂಡು ಹೋದರೆ ಹೆರಿಗೆಗೆ ಆಸ್ಪತ್ರೆ ತಲುಪುವುದೇ ಬೇಡ!

ಸೇತುವೆ ನೋಡಿದ್ರೆ ಈಗ ಬೀಳುತ್ತೋ ಅಥವಾ ಆಮೇಲೆ ಬೀಳುತ್ತೋ ಅನ್ನೋ ಪರಿಸ್ಥಿತಿ. ಈ ಸೇತುವೆ ನಿರ್ಮಾಣ ಗೊಂಡು 50 ವರ್ಷಗಳಿಗೂ ಹೆಚ್ಚಾಗಿದೆ. ನಿರ್ಮಸಿದ್ದು ಬಿಟ್ಟರೆ ಅದರ ನಂತರ ಇದರ ದುರಸ್ತಿ ಕಾರ್ಯವೇ ಆಗಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದ್ರೂ ರಸ್ತೆ ನಿರ್ಮಾಣ ಕಾರ್ಯ ಒಂದು ಬಾರಿಯೂ ಆಗಿಲ್ಲ.

ಪಾಲಿಕೆ ಮಾಡದ ಕೆಲಸವನ್ನು‌ ತಾವೇ ಮಾಡಿ ಮುಗಿಸಿದ ಸ್ಥಳೀಯರುಪಾಲಿಕೆ ಮಾಡದ ಕೆಲಸವನ್ನು‌ ತಾವೇ ಮಾಡಿ ಮುಗಿಸಿದ ಸ್ಥಳೀಯರು

ತೀರಾ ಕುಗ್ರಾಮ ಒಂದೆಡೆಯಾದರೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಲ್ಲಿರುವ ಗ್ರಾಮ ಯಡಮೊಗ್ಗೆ.

ಪ್ರತಿ ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆ ಸರಿ ಮಾಡಿ, ರಸ್ತೆ ರಿಪೇರಿ ಮಾಡಿಕೊಡಿ ಎಂದು ಇಲ್ಲಿನ ಗ್ರಾಮಸ್ಥರು ಅದೆಷ್ಟು ಬಾರಿ ಅಧಿಕಾರಿಗಳ ಕಾಲು ಹಿಡ್ಕೊಂಡಿದ್ದಾರೋ ಆ ದೇವರಿಗೇ ಗೊತ್ತು. ಇವತ್ತು, ನಾಳೆ, ಕೇಂದ್ರ ಸರ್ಕಾರ, ರಾಜ್ಯಸರ್ಕಾರ ಅಂತ ಅಡಗೋಲಜ್ಜಿ ಕಥೆ ಹೇಳಿ ಗ್ರಾಮಸ್ಥರನ್ನು ವಾಪಾಸ್ ಕಳಿಸಲಾಗುತ್ತಿದೆ.

ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!

ರಸ್ತೆ ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಹಣ ಗುಳುಂ ಸ್ವಾಹ!

ಓಟು ಕೇಳುವ ಸಂದರ್ಭದಲ್ಲಿ ಮಾತ್ರವೇ ಈ ಊರಿನಲ್ಲಿ ಪ್ರತ್ಯಕ್ಷವಾಗುವ ರಾಜಕಾರಣಿಗಳು ಆಮೇಲೆ ಮುಖ ಸಹ ಹಾಕೋದಿಲ್ಲ. ಇಲ್ಲಿನ ರಸ್ತೆಗಳ ನಿರ್ಮಾಣ ಕಾರ್ಯಕ್ಕಾಗಿ ಸಿಆರ್ ಎಫ್ ನ ಹಣ ಬಿಡುಗಡೆಗೊಂಡಿರೋದು ಎಷ್ಟು ಗೊತ್ತಾ? ಬರೋಬ್ಬರಿ 2,138.69 ಕೋಟಿ ರುಪಾಯಿಗಳು. ಆದರೆ ಅಧಿಕಾರಿಗಳನ್ನು ಕೇಳಿದ್ರೆ 2 ಕೋಟಿ ಬಿಡುಗಡೆಯಾಗಿದೆ. ಈ ಸಲ ನಿಮ್ಮ ರಸ್ತೆನಾ ಹೈವೇ ತರಹ ಮಾಡಿಕೊಡ್ತೀವಿ ಅಂತ ಬಂಡಲ್ ಬಡಾಯಿ ಬಿಡ್ತಾ ಇದ್ದಾರೆ. ಇಂತಹ ಸುಳ್ಳು ಕಥೆಗಳನ್ನು ಗ್ರಾಮಸ್ಥರು ಇದೀಗ ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಹಣ ಎಲ್ಲಿ ಹೋಯ್ತೋ.ಅದ್ಯಾವ್ಯಾವ ಅಧಿಕಾರಿಯ ಹೊಟ್ಟೆ ತುಂಬಿಸ್ತೋ , ಯಾರ್ಯಾರು ಗುಳುಂ ಸ್ವಾಹ ಮಾಡಿದ್ರೋ ಆ ದೇವರಿಗೇ ಗೊತ್ತು. ಗ್ರಾಮಸ್ಥರು ಮಾತ್ರ ದಿನಾ ಈ ರಸ್ತೆಯಲ್ಲಿ ಓಡಾಡುವಾಗ ಜೀವ ಕೈಯಲ್ಲಿ ಹಿಡ್ಕೊಂಡಿರ್ತಾರೆ.

ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ

ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ

ಹೊಸಂಗಡಿಯಿಂದ ಯಡಮೊಗ್ಗೆ ಮೂಲಕ ಕಮಲಶಿಲೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 10 ಕಿಲೋಮೀಟರ್ ಇದೆ. ಎಂಎಲ್ಎ ಸುಕುಮಾರ್ ಶೆಟ್ರು ಇಲ್ಲಿಗೆ ಕಾಲಿಟ್ಟಿದ್ದು ಎಲೆಕ್ಷನ್ ಸಮಯದಲ್ಲಿ. ಇನ್ನು ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಈ ಸೇರುವ ಈ ಜಾಗಕ್ಕೆ ಇಲ್ಲಿಂದ ಆಯ್ಕೆಯಾದ ಎಂಪಿ ರಾಘವೇಂದ್ರ ಅವರು ಕಾಲಿಟ್ಟಿದ್ದು ಕೂಡ ಎಲೆಕ್ಷನ್ ಸಮಯದಲ್ಲಿ ಮಾತ್ರ. ಈ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿರುವ ಅಧಿಕಾರಿಗಳು ಇತ್ತ ಕಡೆ ತಲೆ ಹಾಕಿದ ದಾಖಲಾತಿಯೇ ಇಲ್ಲ.

ಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆ

ಗ್ರಾಮಸ್ಥರೇ ಸ್ವತಃ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ

ಗ್ರಾಮಸ್ಥರೇ ಸ್ವತಃ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ

ಹಾಳಾಗಿರೋ ಸೇತುವೆ, ಹೊಂಡ ಬಿದ್ದಿರೋ ರಸ್ತೆಗಾಗಿ ಗ್ರಾಮಸ್ಥರೇ ಸ್ವತಃ ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಆದರೆ ಈ ಬಾರಿಯ ಮಳೆಯಿಂದ ಅವರು ಮಾಡಿದ ಕೆಲಸವೆಲ್ಲಾ ಪುನಃ ಶಿಥಿಲವಾಗಿದೆ. ಸೇತುವೆಯ ಪಿಲ್ಲರ್ ಗೆ ಅಳವಡಿಸಿದ ಶಿಲೆಗಲ್ಲುಗಳು ಕುಬ್ಜಾ ನದಿಯ ರಭಸಕ್ಕೆ ಕೊಚ್ಚಿ ಹೋಗಿದೆ. ಸ್ಲ್ಯಾಬ್ ಮೇಲ್ಬಾಗದಲ್ಲಿ ದೊಡ್ಡ ಹೊಂಡ ಬಿದ್ದಿದೆ. ಸ್ವಲ್ಪ ಯಾಮಾರಿದ್ರೆ ಖಂಡಿತ ಕುಬ್ಜಾ ನದಿಯಲ್ಲಿ ಕೊಚ್ಚಿ ಹೋಗಬೇಕಾಗುತ್ತದೆ.

ರಸ್ತೆ ರಸ್ತೆ ಇಲ್ಲದೆ ಸಂಚಾರಕ್ಕೆ ಪರದಾಡುತ್ತಿರುವ ಜನರು

ರಸ್ತೆ ರಸ್ತೆ ಇಲ್ಲದೆ ಸಂಚಾರಕ್ಕೆ ಪರದಾಡುತ್ತಿರುವ ಜನರು

ಪ್ರತಿ ದಿನ ಸರಿಯಾದ ರಸ್ತೆ ಇಲ್ಲದೆ ಸಂಚಾರಕ್ಕೆ ಪರದಾಡುತ್ತಿರುವ ಜನರ ಗೋಳನ್ನು ಆದಷ್ಟು ಬೇಗ ಸಂಬಂಧಪಟ್ಟವರು ಪರಿಹರಿಸಬೇಕಾಗಿದೆ. ಸರ್ಕಾರವೇ ಬಿಡುಗಡೆಗೊಳಿಸಿರುವ ಹಣ ಎಲ್ಲಿ ಹೋಗಿದೆ ಎಂದು ತಿಳಿಯಬೇಕಾಗಿದೆ. ಹೀಗೆ ಕೋಟಿ ಕೋಟಿ ಹಣ ನುಂಗಣ್ಣರ ಪಾಲಾಗದೆ ಜನರ ಸೇವೆಗೆ ಬಳಕೆಯಾಗಬೇಕಾಗಿದೆ.

ರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು; ಎಲ್ಲೆಲ್ಲೂ ಶ್ಲಾಘನೆರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು; ಎಲ್ಲೆಲ್ಲೂ ಶ್ಲಾಘನೆ

English summary
Shivamogga- Udupi district border roads, bridges are in pathetic condition, especially Yedamogge village which is tagged as Naxal hit area is suffering with lack of basic facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X