• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿವಾದವಿಲ್ಲದ ಜಾಗದಲ್ಲಿ ರಾಮಮಂದಿರ ನಿರ್ಮಿಸಿ: ವಿದ್ಯಾಧೀಶ ಸ್ವಾಮೀಜಿ ಒತ್ತಾಯ

|

ಉಡುಪಿ, ನವೆಂಬರ್. 15:ಶ್ರೀ ಕೃಷ್ಣನ ಊರು ಉಡುಪಿಯಿಂದಲೂ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯ ಕೇಳಿ ಬರುತ್ತಿದೆ. ದೇಶದಲ್ಲಿ ಯಾವ ಸರ್ಕಾರ ಬಂದರೂ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದು ಪರ್ಯಾಯ ಪೀಠಾಧೀಶ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು ನಮ್ಮದು ಪ್ರಜಾಪ್ರಭುತ್ವ ಸರಕಾರ. ಭಾರತದ ಪ್ರಜೆಗಳೇ ಪ್ರಭುಗಳು. ಜನರೇ ದೇಶವನ್ನು ಆಳುವವರು ಪ್ರಜೆಗಳ ಮನಸ್ಸಲ್ಲಿರೋದು ಪಾರ್ಲಿಮೆಂಟ್ ನಲ್ಲಿ ಚರ್ಚೆಯಾಗಬೇಕು.

ಮುಂದುವರಿದ ಸಿ ಎಂ ಇಬ್ರಾಹಿಂ ವಾಕ್ ಲಹರಿ: ಈ ಬಾರಿ ರಾಮಮಂದಿರ, ಕರಸೇವೆ

ನಮ್ಮ ದೇಶವನ್ನು ಶ್ರೀ ರಾಮ ಆಳಿದರು. ಪೂಜ್ಯನೀಯರಿಗೊಂದು ಮಂದಿರ ಆಗಲೇಬೇಕು. ಯಾರದೂ ವಿವಾದವಿಲ್ಲದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಶ್ರೀ ರಾಮನ ಭಕ್ತರು ತಮ್ಮ ಅನಿಸಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಅಯೋಧ್ಯೆ ವಿವಾದ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮಂದಿರ ನಿರ್ಮಾಣದ ಸಂಕಲ್ಪವಾಗಿತ್ತು. ದೇಶದ ಸಂಸದ್ ನಲ್ಲಿ ಮಸೂದೆ ಮಾಡುವವರು ಜನರು. ಪ್ರಜೆಗಳಿಗೆ ಬೇಕಾದ ಮಸೂದೆ ಜಾರಿಯಾಗಲಿ. ಸಹಿ ಅಭಿಯಾನದಲ್ಲಿ ಹಿಂದೂ ಬಾಂಧವರು ಕೈಜೋಡಿಸಬೇಕು.

ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಬೆಂಗಳೂರಲ್ಲಿ ವಿಎಚ್‌ಪಿ ರ‍್ಯಾಲಿ

ಚುನಾವಣೆ, ರಾಮಮಂದಿರ ನಿರ್ಮಾಣ ಕಾಲ ಒಟ್ಟಾಗಿದೆ. ಸುಪ್ರೀಂ ಕೋರ್ಟ್ ಜನರ ಅಭಿಪ್ರಾಯ ಕೇಳಬೇಕು ಎಂದು ಶ್ರೀಗಳು ಒತ್ತಾಯಿಸಿದರು.

English summary
Udupi Paryaya pitadish Palimaru shree said that in Janagraha meeting which ever government comes to power Ram Mandir should built
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X