ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಭದ್ರ ಸರಕಾರಕ್ಕಾಗಿ ಉಡುಪಿಯಲ್ಲಿ ಪಲಿಮಾರು ಶ್ರೀಗಳ ಪ್ರಾರ್ಥನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 1: ರಾಜ್ಯದಲ್ಲಿ ಸುಭದ್ರ ಸರಕಾರ ಬರಲಿ ಎಂದು ಆ ಭಗವಂತನನ್ನು ಪ್ರಾರ್ಥನೆ ಮಾಡಿದ್ದೇವೆ ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಶನಿವಾರ ಹೇಳಿದರು.

ಹನುಮ ಜಯಂತಿ ಹಿನ್ನೆಲೆಯಲ್ಲಿ ಶನಿವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಹನುಮನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಕೃಷ್ಙಮಠದಲ್ಲಿ ಹನುಮನಿಗೆ ಸ್ವರ್ಣ ಸಮರ್ಪಿಸಿದ ಪರ್ಯಾಯ ಶ್ರೀಗಳಾದ ವಿದ್ಯಾಧೀಶ ತೀರ್ಥರು, ಹನುಮ ಜಯಂತಿ ದಿನದ ಪ್ರಯುಕ್ತ ಎಲ್ಲರಿಗೂ ಶುಭವನ್ನು ಕೋರಿದರು.

ಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆಉಡುಪಿ ಅಷ್ಟಮಠಗಳ ಭಿನ್ನಾಭಿಪ್ರಾಯ ಮತ್ತೊಂದು ಮಜಲಿಗೆ

ಜೇನು ಅಭಿಷೇಕ ಮತ್ತು ಸಾವಿರ ವಾಯುಸ್ತುತಿ ಪಾರಾಯಣ ಮೂಲಕ ಪೂಜೆಯನ್ನು ಸಲ್ಲಿಸಿದರು. ನಾಡಿನ ಜನೆತೆಗೆ ಒಳಿತಾಗಲು ಈ ಪೂಜೆಯನ್ನು ಮಾಡಿದ್ದು, ಈ ಮೂಲಕ ಮುಂದಿನ ದಿನ ಎಲ್ಲರಿಗೂ ಶುಭವಾಗಲಿದೆ ಎಂದು ಪರ್ಯಾಯ ಶ್ರೀಗಳು ತಿಳಿಸಿದ್ದಾರೆ.

Palimaru seer offered prayer for stable government in Karnataka

ರಾಜ್ಯ ವಿಧಾನಸಭೆ ಚುನಾವಣೆಯು ನಡೆಯಲಿದ್ದು, ಜನತೆಗೆ ಸಂತೋಷದ ಸುದ್ದಿ ಸಿಗಲಿದೆ ಎಂದರು. ವಿಶೇಷ ಪೂಜೆ ಸಲ್ಲಿಸಿ, ಸುಭದ್ರ ಸರಕಾರ ಬರಲಿ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಠದಲ್ಲಿ ಸ್ವರ್ಣ ಗೋಪುರ ನಿರ್ಮಿಸಬೇಕೆಂಬ ಸಂಕಲ್ಪಯಿದ್ದು, ಅದಕ್ಕಾಗಿ ಕೆಲಸ- ಕಾರ್ಯಗಳು ಆರಂಭವಾಗಿವೆ. ಶನಿವಾರ ಸ್ವರ್ಣ ನಾಣ್ಯಗಳ ಮೂಲಕ ಶ್ರೀಗಳು ಪೂಜೆ ಸಲ್ಲಿಸಿ, ಗೋಪುರದ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಠಕ್ಕೆ ಬರುವ ಭಕ್ತಾದಿಗಳಿಗೆ ಹನುಮ ಜಯಂತಿ ಪ್ರಸಾದವನ್ನು ನೀಡಿದರು.

English summary
Palimaru seer Vidyadheesha teertha offered prayer at Udupi Krishna mutt for stable government in Karnataka on Saturday, on the occasion of Hanuma jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X