• search
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಂದಾಪುರ ದುರ್ಗಾಂಬ ಟ್ರಾವೆಲ್ಸ್ ಮಾಲೀಕ ರಸ್ತೆ ಅಪಘಾತದಲ್ಲಿ ವಿಧಿವಶ

|

ಉಡುಪಿ, ಸೆ 14: ರಾಜ್ಯದ ಪ್ರಮುಖ ಖಾಸಗಿ ಬಸ್ ಸಂಸ್ಥೆಗಳಲ್ಲಿ ಒಂದಾದ ಶ್ರೀದುರ್ಗಾಂಬ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ, ಶುಕ್ರವಾರ (ಸೆ 14) ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ವಿಧಿವಶರಾಗಿದ್ದಾರೆ.

ತಮಿಳುನಾಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುನಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುನಿಲ್ ತಮ್ಮ ಮಿಟ್ಸುಬಿಸಿ ಪಜೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಕುಂದಾಪುರ ಮೂಲದ ದುರ್ಗಾಂಬಾ ಟ್ರಾವೆಲ್ಸ್, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ವಿವಿದೆಡೆಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಮುಂಬೈ ಮುಂತಾದ ಕಡೆ ಬಸ್ ಸೇವೆಯನ್ನು ಒದಗಿಸುತ್ತಿತ್ತು.

ಇದಲ್ಲದೇ, ಸಿಟಿ ಬಸ್ ಸೇವೆಯನ್ನು ಕೂಡಾ, ಉಡುಪಿ ಮತ್ತು ಕುಂದಾಪುರ ನಗರದಲ್ಲಿ ನೀಡುತ್ತಿತ್ತು.

ಜಿಲ್ಲೆಯ ಪ್ರಸಿದ್ದ ಕಮಲಶಿಲೆ ದೇವಾಲಯದ ಆಡಳಿತ ಮೊಕೇಸ್ತರರಾದ ಸಚ್ಚಿದಾನಂದ ಚಾತ್ರರ ಪುತ್ರರಾಗಿರುವ ಸುನಿಲ್, ಬಸ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿಗೆ ತೆರಳಿದ್ದರು ಎನ್ನುವ ಮಾಹಿತಿಯಿದೆ.

ಮೃತರು (41) ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. (ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಉಡುಪಿ ಸುದ್ದಿಗಳುView All

English summary
Sunil Chatra, owner of the well-known transport company, Sri Durgamba Transit Private Limited, died on spot in a road accident in Tamil Nadu on Friday, September 14.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more