ಮಾವಿನ ಹಣ್ಣಿನಿಂದ ಕೇವಲ ಜ್ಯೂಸ್ ಮಾತ್ರ ಅಲ್ಲ, ಈ 4 ರೆಸಿಪಿಗಳನ್ನೂ ಟ್ರೈ ಮಾಡಿ

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಸುವಾಸನೆ ಎಲ್ಲೆಡೆ ಹರಡಿರುತ್ತದೆ. "ಹಣ್ಣುಗಳ ರಾಜ" ಎಂದೇ ಪ್ರಸಿದ್ಧವಾಗಿರುವ ಮಾವಿನ ಹಣ್ಣು ಕೇವಲ ರುಚಿಗಷ್ಟೇ ಅಲ್ಲ, ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲು ಕೂಡ ಅತ್ಯುತ್ತಮವಾಗಿದೆ.

ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಮಾವಿನ ರಸ, ಮ್ಯಾಂಗೋ ಶೇಕ್ ಅಥವಾ ಚಟ್ನಿ ನೆನಪಿಗೆ ಬರುತ್ತದೆ. ಆದರೆ ಮಾವಿನ ಹಣ್ಣಿನಿಂದ ಇನ್ನೂ ಹಲವು ವಿಭಿನ್ನ ಮತ್ತು ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಇತ್ತೀಚಿನ ದಿನಗಳಲ್ಲಿ ಜನರು ಹೊಸ ರೀತಿಯ ಆಹಾರಗಳನ್ನು ಹೆಚ್ಚು ಇಷ್ಟಪಡುತ್ತಿರುವ ಹಿನ್ನೆಲೆಯಲ್ಲಿ, ಮಾವಿನ ಹಣ್ಣಿನ ಈ ವಿಶೇಷ ರೆಸಿಪಿಗಳು ಮನೆಯವರಿಗೂ ಮತ್ತು ಅತಿಥಿಗಳಿಗೂ ಖಂಡಿತ ಇಷ್ಟವಾಗುತ್ತದೆ.

Mango

1. ಮ್ಯಾಂಗೋ ಪುಲಾವ್

ಬೇಸಿಗೆಯ ವಿಶೇಷ ರುಚಿಕರ ಮತ್ತು ಸುಲಭವಾಗಿ ಮಾಡಬಹುದಾದ ಅಕ್ಕಿಯ ಖಾದ್ಯವಿದು. ಮಾವಿನ ಹಣ್ಣಿನಿಂದ ಪುಲಾವ್ ಮಾಡುವುದು ಹೊಸ ಅನುಭವ ಕೂಡ ಆಗಿದೆ. ಬಾಸ್ಮತಿ ಅಕ್ಕಿ, ಮಾವಿನ ಹಣ್ಣಿನ ತುಂಡುಗಳು, ಸ್ವಲ್ಪ ಮಸಾಲೆ ಮತ್ತು ಡ್ರೈಫ್ರೂಟ್ಸ್ ಬಳಸಿ ತಯಾರಿಸುವ ಈ ಖಾದ್ಯವಿದು. ಸಿಹಿ, ಹುಳಿ ಹಾಗೂ ಖಾರದ ರುಚಿಯ ಸಮತೋಲನವನ್ನು ನೀಡುತ್ತದೆ.

ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿ ಉಪ್ಪಿನಕಾಯಿ: ಸರಿಯಾದ ಅಳತೆಯಲ್ಲಿ ಮಾಡಿದರೆ ರುಚಿ ಡಬಲ್‌
ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿ ಉಪ್ಪಿನಕಾಯಿ: ಸರಿಯಾದ ಅಳತೆಯಲ್ಲಿ ಮಾಡಿದರೆ ರುಚಿ ಡಬಲ್‌

2. ಮ್ಯಾಂಗೋ ಸಾಲ್ಸಾ

ಹಗುರವಾದ ಮತ್ತು ಆರೋಗ್ಯಕರ ಸ್ನ್ಯಾಕ್ ಬೇಕೆಂದರೆ ಮ್ಯಾಂಗೋ ಸಾಲ್ಸಾ ಉತ್ತಮ ಆಯ್ಕೆ. ಸಣ್ಣ ತುಂಡುಗಳಾಗಿ ಕತ್ತರಿಸಿದ ಮಾವಿನ ಹಣ್ಣು, ಈರುಳ್ಳಿ, ಟೊಮೆಟೊ, ಹಸಿಮೆಣಸು ಮತ್ತು ನಿಂಬೆ ರಸವನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದು ನಾಚೋಸ್ ಅಥವಾ ಇತರ ತಿಂಡಿಗಳ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.

3. ಮ್ಯಾಂಗೋ ಪಾಸ್ತಾ

ಮಾವಿನ ಹಣ್ಣಿನ ಸಿಹಿಯು ಇಟಾಲಿಯನ್ ಶೈಲಿಗೆ ರುಚಿಯನ್ನು ಸೇರಿಸಿದ ಮ್ಯಾಂಗೋ ಪಾಸ್ತಾ ಈಗ ಟ್ರೆಂಡ್ ಆಗಿದೆ. ಮ್ಯಾಂಗೋ ಸಾಸ್ ತಯಾರಿಸಿ ಅದನ್ನು ಪಾಸ್ತಾ ಜೊತೆ ಮಿಶ್ರಣ ಮಾಡಲಾಗುತ್ತದೆ. ಮಕ್ಕಳು ಮತ್ತು ದೊಡ್ಡವರು ಎರಡೂ ಈ ವಿಶೇಷ ರುಚಿಯನ್ನು ಇಷ್ಟಪಡುತ್ತಾರೆ.

ಮಾವು ನೈಸರ್ಗಿಕವಾಗಿ ಹಣ್ಣಾಗಿದೆಯೇ ಅಥವಾ ರಾಸಾಯನಿಕ ಬಳಸಲಾಗಿದೆಯೇ? ಈ ರೀತಿ ಕಂಡುಕೊಳ್ಳಿ
ಮಾವು ನೈಸರ್ಗಿಕವಾಗಿ ಹಣ್ಣಾಗಿದೆಯೇ ಅಥವಾ ರಾಸಾಯನಿಕ ಬಳಸಲಾಗಿದೆಯೇ? ಈ ರೀತಿ ಕಂಡುಕೊಳ್ಳಿ

4. ಮ್ಯಾಂಗೋ ಕುಲ್ಫಿ

ಬೇಸಿಗೆಯ ಬಿಸಿಲಿನಲ್ಲಿ ತಣ್ಣನೆಯ ಮ್ಯಾಂಗೋ ಕುಲ್ಫಿ ಸವಿಯುವುದೇ ಬೇರೆ ಮಜಾ. ಮನೆಯಲ್ಲೇ ಸುಲಭವಾಗಿ ಕೇವಲ 3-4 ಪದಾರ್ಥಗಳನ್ನು ಬಳಸಿ ರುಚಿಕರವಾದ, ಕೆನೆಭರಿತ ಮ್ಯಾಂಗೋ ಕುಲ್ಫಿ ತಯಾರಿಸುವ ಆರೋಗ್ಯಕರ ಡೆಸರ್ಟ್ ಆಗಿದೆ. ಇದನ್ನು ತಯಾರಿಸುವುದು ಬಹಳ ಸುಲಭ. ಮಾವಿನ ಹಣ್ಣಿನ ಹೋಳುಗಳನ್ನು, ಹಾಲಿನ ಕೆನೆ ಮತ್ತು ಮಂದಗೊಳಿಸಿದ ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ, ಐಸ್‌ಕ್ರೀಮ್ ಅಚ್ಚುಗಳಿಗೆ ಹಾಕಬೇಕು. ಇದನ್ನು ಕನಿಷ್ಠ 7-8 ಗಂಟೆಗಳ ಕಾಲ ಫ್ರೀಜ್ ಮಾಡಿದರೆ ಸಾಕು ತಂಪು ತಂಪಾದ ಬೇಸಿಗೆಯ ವಿಶೇಷ ತಿನಿಸು 'ಮ್ಯಾಂಗೋ ಕುಲ್ಫಿ' ಸಿದ್ಧವಾಗುತ್ತದೆ.

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಕೇವಲ ಹಣ್ಣಾಗಿ ಮಾತ್ರವಲ್ಲ, ಹಲವು ವಿಭಿನ್ನ ಮತ್ತು ರುಚಿಕರವಾದ ಖಾದ್ಯಗಳನ್ನು ತಯಾರಿಸಲು ಸಹ ಉಪಯೋಗವಾಗುತ್ತದೆ. ಈ ರೆಸಿಪಿಗಳನ್ನು ಮನೆಯಲ್ಲೇ ಟ್ರೈ ಮಾಡಿದರೆ ಕುಟುಂಬದವರಿಂದ ಖಂಡಿತ ಮೆಚ್ಚುಗೆ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+