Bengaluru Heat Wave: ಮೈ ಸುಡುವ ಬಿಸಿಲಿಗೆ ಜನ ಸುಸ್ತೋ ಸುಸ್ತು, ಮಳೆ ಬರುತ್ತಾ? ಹವಾಮಾನ ವರದಿ
ಬೆಂಗಳೂರು: ಬಿಸಿಲ ಬೇಗೆಗೆ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನರಿಗೆ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಮಳೆ, ತಂಪು ವಾತಾವರಣ ಮನಸ್ಸಿನ ಮುದ ನೀಡುತ್ತಿತ್ತು. ಆದರೆ ಇತ್ತೀಚೆಗೆ ಪರಿಸ್ಥಿತಿ ಬದಲಾಗಿದೆ. ಮಳೆ ಮಾಯವಾಗಿದ್ದು, ಉರಿಬಿಸಿಲಿನ ಝಳ, ಮೈಸುಡುವ ತಾಪಮಾನಕ್ಕೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಬೈಕ್ ಸವಾರರಂತೂ ಇನ್ನಿಲ್ಲದ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಬೇಸಿಗೆ ಬಿಸಿಲ ನಡುವೆ ಕಳೆದ ವಾರ ಮತ್ತು ಏಪ್ರಿಲ್ ತಿಂಗಳಾಂತ್ಯದಲ್ಲಿ ಉತ್ತಮ ಮಳೆ ಆಗಿ ಬೆಂಗಳೂರು ಕೂಲ್ ಆಗಿತ್ತು. ಸಂಜೆ ಮತ್ತು ರಾತ್ರಿ ಅಲ್ಲಲ್ಲಿ ಹಗುರ ಮಳೆ ಆಗಿದ್ದರಿಂದ ವಾತಾವರಣ ಹಿತವಾಗಿತ್ತು. ಆದರೆ ಇದೀಗ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ನಗರದಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಉಷ್ಣಅಲೆ (Heat Wave) ಸೃಷ್ಟಿಯಾಗಿದೆ. ಇದೇ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಪರೀತ ಬಿಸಿಲಿಗೆ ಜನ ಪರದಾಡುವಂತಾಗಿದೆ. ಬೆಳಗ್ಗೆ 9 ಗಂಟೆ ನಂತರ ಮತ್ತು ಸಂಜೆ ಸುಮಾರು 5 ಗಂಟೆವರೆಗೆ ನಗರದಲ್ಲಿ ಬಿಸಿಲು ಕಂಡು ಬರುತ್ತದೆ. ಮಧ್ಯಾಹ್ನ ಹೊತ್ತು ಬೆಂಗಳೂರು ಟ್ರಾಫಿಕ್‌ನಲ್ಲಿ ತಿರುಗಾಡುವವರಂತೂ ಹೆಲ್ಮೆಟ್ ತೆಗೆಯುವಂತಿಲ್ಲ. ಹಾಗಯೇ ಬಿಡುವಂತೆಯೂ ಇಲ್ಲ. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಾಗ ಹೆಲ್ಮೆಟ್ ಒಳಗೆ ಬೆವರು, ಝಳಕ್ಕೆ ಒಂದು ರೀತಿಯ ಹಿಂಸೆ ಅನುಭವಿಸುತ್ತಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದರೆ ಪೊಲೀಸರ ಭಯ. ಒಟ್ಟಾರೆ ಬೇಸಿಗೆ ಯಾವಾಗ ಕಳೆಯುತ್ತೋ ಎಂದು ಕಾಯುವಂತಾಗಿದೆ.
ಮುಂದಿನ 48 ಗಂಟೆ ಇದೇ ವಾತಾವರಣ, ನಂತರ ಮಳೆ ಸಂಭವ
ನಗರದಲ್ಲಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಎಚ್‌ಎಲ್ ವಿಮಾನ ನಿಲ್ದಾಣ, ಯಲಹಂಕ ಭಾಗದಲ್ಲೂ ಉಷ್ಣ ಅಲೆಯು (Heat Wave) ಕಂಡು ಬರುತ್ತಿದೆ. ನಗರಾದ್ಯಂತ ಮೇ 14ರವರೆಗೂ ಶುಷ್ಕ ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಬೆಂಗಳೂರಿಗೆ 2 ದಿನ ಮಳೆ ಮುನ್ಸೂಚನೆ
ಬಿಸಿಲಿಗೆ ಬೇಯುತ್ತಿರುವ ಬೆಂಗಳೂರು ಜನರು ಯಾವಾಗ ಮಳೆ ಬರುತ್ತೋ ದೇವರೇ...ಎನ್ನುತ್ತಿದ್ದಾರೆ. ಅವರಿಗೆ ಖುಷಿಯ ಸಂಗತಿ ಎಂಬಂತೆ ಇಂದು ಮಂಗಳವಾರದ (ಮೇ 12) ಹವಾಮಾನ ವರದಿ ಪ್ರಕಾರ, ಮೇ 14 ಮತ್ತು 15 ರಂದು ಎರಡು ದಿನ ನಗರದಲ್ಲಿ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಆಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ ಸುಮಾರು 30-40 ಕಿಲೋ ಮೀಟರ್ ವೇಗದಲ್ಲಿ ಬಿಸಲಿದೆ ಎಂದು ಮುನ್ನೆಚ್ಚರಿಕೆ ಕೊಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಉಷ್ಣ ಅಲೆ
ರಾಜ್ಯದ ಇತರ ಭಾಗದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗರಿಷ್ಠ ತಾಪಮಾನದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡು ಬರಲಿದೆ. ಮೈಸುಡುವ ಬಿಸಿಲು ಈಗಾಗಲೇ ಇದ್ದು, ಅದು ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಉಷ್ಣ ಅಲೆ ಬೇರೆ ಬೇರೆ ಭಾಗಗಳಿಗೂ ವಿಸ್ತರಣೆ ಆಗಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
🚨ತಾಪಮಾನ ಎಚ್ಚರಿಕೆ🚨
— Karnataka State Natural Disaster Monitoring Centre (@KarnatakaSNDMC) May 12, 2026
☀️🔥#Maximum#Temperature #warning for North Interior #Karnataka ☀️🔥@KarnatakaVarthe #KSNDMC #KarnatakaWeather #WeatherUpdate #BeatTheHeat #prevention #Staysafe #Precautions #StayHydrated pic.twitter.com/T282D4FeTm














Click it and Unblock the Notifications