ಮಣಿಪಾಲದಲ್ಲಿ ಬೈಕ್ ಮೇಲೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಕಳೆದ ವಾರ, ಗೋವಾ ಪೊಲೀಸ್‌ನ ಅಪರಾಧ ವಿಭಾಗ ಮತ್ತು ಮಾದಕ ದ್ರವ್ಯ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು ಏಳು ಜನರ ಮೇಲೆ ಪ್ರಕರಣ ದಾಖಲಿಸಿತ್ತು.
ಉಡುಪಿ, ಫೆಬ್ರವರಿ. 23: ಉಡುಪಿಯ ಮಣಿಪಾಲದಲ್ಲಿ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆರೋಪಿಯನ್ನು ಇಕ್ಬಾಲ್ ಶೇಖ್ (32) ಎಂದು ಗುರುತಿಸಲಾಗಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿ ಬಳಿಯಿದ್ದ ಒಟ್ಟು 36 ಗ್ರಾಂ ಗಾಂಜಾ, ಪ್ಲಾಸ್ಟಿಕ್ ಕವರ್‌ಗಳಲ್ಲಿ ಇದ್ದ 0.36 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ವೈ ಫೈ ರೂಟರ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲುಗಳ ಒಟ್ಟು ಮೌಲ್ಯ ಅಂದಾಜು 44,700 ರೂಪಾಯಿ ಎನ್ನಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಳೆದ ವಾರ, ಗೋವಾ ಪೊಲೀಸ್‌ನ ಅಪರಾಧ ವಿಭಾಗ ಮತ್ತು ಮಾದಕ ದ್ರವ್ಯ ನಿಗ್ರಹ ದಳದ ಜಂಟಿ ಕಾರ್ಯಾಚರಣೆಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು ಏಳು ಜನರ ಮೇಲೆ ಪ್ರಕರಣ ದಾಖಲಿಸಿತ್ತು. ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಗೋವಾದ ವಾಗಟರ್ ಬೀಚ್‌ನಲ್ಲಿ ಶನಿವಾರ ನಡೆದ ತಪಾಸಣೆಯಲ್ಲಿ ಎಲ್ಲ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ರಾಜ್ಯದ ಇಬ್ಬರು ಆರೋಪಿಗಳನ್ನು ಸಂದೇಶ್ ಎಸ್ ನಾಯ್ಕ್ (28) ಮತ್ತು ಎಂ ವಿಜಯ ಶಂಕರ್ (24) ಎಂದು ಗುರುತಿಸಲಾಗಿದೆ. ಪ್ರಕರಣದ ಇತರ ಆರೋಪಿಗಳು ಕೇರಳ ಮತ್ತು ಗುಜರಾತ್‌ನವರಾಗಿದ್ದು, ಎಲ್ಲರೂ ಪ್ರವಾಸಕ್ಕೆಂದು ಗೋವಾಗೆ ಬಂದಿದ್ದರು. SOTAKO ಯಂತ್ರದ ಸಹಾಯದಿಂದ ತಪಾಸಣೆಯನ್ನು ಮಾಡಲಾಗಿದ್ದು, ಆರೋಪಿಗಳು ಪಾಸಿಟಿವ್ ಬಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.












Click it and Unblock the Notifications