ಶಯನೀ ಏಕಾದಶಿ ವಿಶೇಷ, ಪೇಜಾವರ ಶ್ರೀಗಳಿಂದ ನೃತ್ಯ ಸೇವೆ

ಉಡುಪಿ, ಜುಲೈ 6: ಶಯನೀ ಏಕಾದಶಿಯಾದ ಬುಧವಾರ ಉಡುಪಿಯಲ್ಲಿ ಅಪರೂಪದ ಸನ್ನಿವೇಶಕ್ಕೆ ಭಕ್ತರು ಸಾಕ್ಷಿಯಾದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೃಷ್ಣ ಮಠದಲ್ಲಿ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲಿಟ್ಟು 'ಡಂಗುರವ ಸಾರಿ ಹರಿಯ' ಎಂಬ ದಾಸರ ಪದಕ್ಕೆ ಹೆಜ್ಜೆ ಹಾಕುವ ಮೂಲಕ ದೇವರಿಗೆ ನೃತ್ಯ ಸೇವೆ ಸಲ್ಲಿಸಿದರು.

ಕೃಷ್ಣನಿಗೆ ರಾತ್ರಿ ಪೂಜೆ ಸಲ್ಲಿಸಿದ ನಂತರ ಸೂರ್ಯವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆದವು. ಆ ನಂತರ ದೇವರ ಎದುರಿನ ಮಂಟಪದಲ್ಲಿ ಇಬ್ಬರೂ ಯತಿಗಳು ಮಂಗಳಾರತಿ ಮಾಡಿದರು. ಅದಾದ ಮೇಲೆ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲೆ ಇಟ್ಟುಕೊಂಡು ದಾಸರ ಪದಕ್ಕೆ ನೃತ್ಯ ಮಾಡಿ ಸೇವೆ ಸಲ್ಲಿಸಿದರು.

Nrutya seva to god from Pejawar Seer in Udupi

ಆ ನಂತರ ಪ್ರದಕ್ಷಿಣೆ ಹಾಕಿದರು. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯವರೆಗೆ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು. ಈ ಮಧ್ಯದ ಎಂಟು ಏಕಾದಶಿಗಳಂದು ಈ ರೀತಿಯ ಆಚರಣೆ ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+