ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ: ಶಾಸಕ ಕೆ. ರಘುಪತಿ ಭಟ್ ಸಂದರ್ಶನ

ಉಡುಪಿ ಭಾಗದಲ್ಲಿ ಚುನಾವಣಾ ಬಿಸಿ ಯಾವ ರೀತಿ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್ ಅವರು 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗವನ್ನು ಲೇಖನದಲ್ಲಿ ಮುಂದುವರಿಸಲಾಗಿದೆ.

By ಬಾಲರಾಜ್ ತಂತ್ರಿ
|
Google Oneindia Kannada News

ಚುನಾವಣಾ ವರ್ಷದಲ್ಲಿ ಮೂರೂ ಪಕ್ಷಗಳು ಅಧಿಕಾರಕ್ಕೇರುವ ನಿಟ್ಟಿನಲ್ಲಿ ಇನ್ನಿಲ್ಲದ ಮೊದಲ ಹಂತದ ಕಸರತ್ತನ್ನು ಆರಂಭಿಸಿದೆ. ಜಾತ್ಯತೀತ ಜನತಾದಳ (ಜೆಡಿಎಸ್) ಈಗಾಗಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾಗಿದೆ.

Recommended Video

Raghupati Bhat: Udupi MLA ಕೆ. ರಘುಪತಿ ಭಟ್ ಸಂದರ್ಶನ *Interview | OneIndia Kannada

ಕಾಂಗ್ರೆಸ್ ಕೂಡಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಮೊದಲ ಹಂತದ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸುವುದಾಗಿ ಹೇಳಿದೆ. ಆದರೆ, ಬಿಜೆಪಿಯಲ್ಲಿ ಪಟ್ಟಿ ಪ್ರಕಟವಾಗುವ ನಿಟ್ಟಿನಲ್ಲಿ ಯಾವುದೇ ಹೇಳಿಕೆಗಳು ರಾಜ್ಯದ ನಾಯಕರುಗಳಿಂದ ಹೊರಬೀಳುತ್ತಿಲ್ಲ. ಕಾರಣ, ಎಲ್ಲಾ ಅಂತಿಮ ನಿರ್ಧಾರ ಹೊರಬೀಳುವುದು ದೆಹಲಿಯಿಂದ.

Parashuram Theme Park: ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್, ಸಚಿವ ಸುನಿಲ್ ಕುಮಾರ್ ಸಂದರ್ಶನ
ಕಳೆದ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಬಿಜೆಪಿ ಆಲ್ಮೋಸ್ಟ್ ಕ್ಲೀನ್ ಸ್ವೀಪ್ ಮಾಡಿತ್ತು. ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಐದು ಕ್ಷೇತ್ರಗಳನ್ನಿ ಬಿಜೆಪಿ ಗೆದ್ದಿತ್ತು. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಅದೇ ವಿಶ್ವಾಸದಲ್ಲಿದೆ. ಉಡುಪಿ ಭಾಗದಲ್ಲಿ ಚುನಾವಣಾ ಬಿಸಿ ಯಾವ ರೀತಿ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್ ಅವರು 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದಭಾಗ ಇಂತಿದೆ:

ಪ್ರ: ಕಳೆದ ಐದು ವರ್ಷದ ಅವಧಿಯಲ್ಲಿ ಉಡುಪಿ ಕ್ಷೇತ್ರದ ಅಭಿವೃದ್ದಿ ವಿಚಾರದ ಬಗ್ಗೆ?
ರಘುಪತಿ ಭಟ್: ಈ ಅವಧಿ ಅತ್ಯಂತ ಸಂಕಷ್ಟದ ಅವಧಿಯಾಗಿತ್ತು, ಆರ್ಥಿಕವಾಗಿ ಕೊರೊನಾ ಕಾರಣದಿಂದಾಗಿ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಎದುರಾಗಿತ್ತು.

ಈ ಕಷ್ಟದ ನಡುವೆಯೂ 2,779 ಕೋಟಿ ರೂಪಾಯಿಯಷ್ಟು ಅನುದಾನವನ್ನು ಶಾಸಕರ ನಿಧಿಯಿಂದ ಮಂಜೂರು ಮಾಡಿಸಿಕೊಂಡು ಕ್ಷೇತ್ರಕ್ಕೆ ವಿನಿಯೋಗಿಸಿದ್ದೇನೆ. ಈ ವಿಚಾರದಲ್ಲಿ ನನಗೆ ಸಂಪೂರ್ಣ ತೃಪ್ತಿಯಿದೆ.

 ಶಾಸಕ ರಘುಪತಿ ಭಟ್ ವಿಶೇಷ ಸಂದರ್ಶನ

ಶಾಸಕ ರಘುಪತಿ ಭಟ್ ವಿಶೇಷ ಸಂದರ್ಶನ

ಪ್ರ: ಹಾಲೀ ಅವಧಿಯಲ್ಲಿ ಏನೇನು ಅಭಿವೃದ್ದಿ ಮಾಡಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದೀರೋ ಅದೆಲ್ಲಾ ಮುಗಿದಿದೆಯಾ?

ರಘುಪತಿ ಭಟ್: 2018ರಲ್ಲಿ ನಾನು ಶಾಸಕನಾದರೆ ಏನೇನು ಕೆಲಸವನ್ನು ಮಾಡುತ್ತೇನೆ ಎಂದು ಪ್ರಣಾಳಿಕೆಯನ್ನು ಸಿದ್ದ ಪಡಿಸಿಕೊಂಡಿದ್ದೆ ಮತ್ತು ಅದರಲ್ಲಿ ಹೆಚ್ಚಿನದ್ದನ್ನು ಮುಗಿಸಿದ್ದೇನೆ. ಅದರಲ್ಲಿ ಪ್ರಮುಖವಾಗಿ, ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆ, ಮಿಷನ್ ಕಂಪೌಂಡಿನಿಂದ ರಸ್ತೆ ಅಗಲೀಕರಣ, ಬ್ರಹ್ಮಾವರ - ಸೀತಾನದಿ ರಸ್ತೆಗೆ ಎಂಬತ್ತು ಕೋಟಿ ಟೆಂಡರ್ ಆಗಿದೆ.

ಬ್ರಹ್ಮಾವರದಿಂದ ಸಂತೆಕಟ್ಟೆಗೆ ಹೋಗುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಹಲವು ಅಭಿವೃದ್ದಿ ಕೆಲಸಗಳು ನಡೆದಿವೆ. ಶುದ್ದೀಕರಿಸಿದ ಕುಡಿಯುವ ನೀರಿನ ಯೋಜನೆ, ವಾರಾಹಿ ಬಲ್ಕ್ ನೀರನ್ನು ಕೊಡುವ ಯೋಜನೆಯ ಕೆಲಸ ಈಗಾಗಲೇ ನಡೆಯುತ್ತಿದೆ.

 ಶಾಸಕರ ಅನುದಾನದ ವಿಚಾರದಲ್ಲಿ ಭಟ್ ಸ್ಪಷ್ಟನೆ

ಶಾಸಕರ ಅನುದಾನದ ವಿಚಾರದಲ್ಲಿ ಭಟ್ ಸ್ಪಷ್ಟನೆ

ಪ್ರ: ಶಾಸಕರ ಅನುದಾನದ ವಿಚಾರದಲ್ಲಿ ಸರಕಾರದಿಂದ ಸರಿಯಾಗಿ ಹಣ ಬಿಡುಗಡೆಯಾಗಿದೆಯೇ?

ರಘುಪತಿ ಭಟ್: ಯಾವ ಅವಧಿಯಲ್ಲೂ ಬರದಷ್ಟು ಹಣ ಬಿಡುಗಡೆಯಾಗಿದೆ, ಅತಿಹೆಚ್ಚು 2,749 ಕೋಟಿ ಅಂದರೆ ಅದು ಸಣ್ಣ ಮೊತ್ತವಲ್ಲ. ಹಾಲೀ ವರ್ಷದಲ್ಲಿ ನೀರಾವರಿಗಾಗಿಯೇ ಐನೂರು ಕೋಟಿ ಬಿಡುಗಡೆಯಾಗಿದೆ. ಸ್ವರ್ಣಾ ನದಿಗೆ ಬ್ಯಾರೇಜ್ ಹಾಕಿ ನೀರುವಂತದ್ದು, ಮಣಿಪಾಲದ ಮಳ್ಳಪಳ್ಳಕ್ಕೆ ನೀರು ತುಂಬಿಸುವ ಕೆಲಸ, ಹಾವಂಜೆ ಉಪ್ಪುಂದ ಕಾರ್ಯಕ್ಕೂ ಟೆಂಡರ್ ಪ್ರಕ್ರಿಯೆ ಮುಗಿದಿದೆ.

ಹಂದಾಡಿಯಲ್ಲಿ ಉಪ್ಪುನೀರು ತಡೆಗಟ್ಟಲು ಎರಡು ಡ್ಯಾಂಗಳನ್ನು ಮಾಡುವ ಕೆಲಸಕ್ಕೂ ಹಣ ಬಿಡುಗಡೆಯಾಗಿದೆ. ಇಷ್ಟು ಅನುದಾನ ಯಾವ ಕಾಲಕ್ಕೂ ಉಡುಪಿ ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳಬಹುದಾಗಿದೆ.

 ನಿಮಗೆ ಟಿಕೆಟ್ ಸಿಗುವ ಭರವಸೆ ಇದೆಯಾ?

ನಿಮಗೆ ಟಿಕೆಟ್ ಸಿಗುವ ಭರವಸೆ ಇದೆಯಾ?

ಪ್ರ: ಚುನಾವಣಾ ವರ್ಷದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ?

ರಘುಪತಿ ಭಟ್: ಕಾಂಗ್ರೆಸ್ಸಿನವರು ಯಾವುದೇ ಪುರಾವೆಯಿಲ್ಲದೇ, ಗಾಳಿಯಲ್ಲಿ ಮಾತನಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರ ಯಾರ ಕಾಲದಲ್ಲಿ ಹೆಚ್ಚಾಗಿತ್ತು ಎನ್ನುವುದು ಜನಸಾಮಾನ್ಯರಿಗೆ ಗೊತ್ತಿರುವ ವಿಚಾರ. ರಾಜ್ಯ ಸರಕಾರದ ವಿರುದ್ದ ಮಾಡುತ್ತಿರುವ ಆರೋಪಗಳು ಆಧಾರ ರಹಿತ.

ಪ್ರ: ಮುಂದಿನ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಸಿಗುವ ಭರವಸೆ ಇದೆಯಾ?

ರಘುಪತಿ ಭಟ್: ಖಂಡಿತವಾಗಿಯೂ ಇದೆ, ಯಾಕೆಂದರೆ ಮೂರು ಬಾರಿ ನಾನು ಅಸೆಂಬ್ಲಿಗೆ ಸ್ಪರ್ಧಿಸಿದ್ದೆ, ಮೂರೂ ಬಾರಿಯೂ ಗೆದ್ದಿದ್ದೇನೆ. ಬಾಲ್ಯದಿಂದಲೂ ನಾನು ಬಿಜೆಪಿಯ ಕಾರ್ಯಕರ್ತ. ಪಂಚಾಯತಿಯ ಸ್ಥಾನೀಯ ಸದಸ್ಯನಾಗಿ ಕೆಲಸ ನಿರ್ವಹಿಸಿ ಈ ಹಂತಕ್ಕೆ ಬಂದಿದ್ದೇನೆ. 226 ಬೂತ್ ಗಳ ಪೈಕಿ ಒಂದರಲ್ಲೂ ಆಬ್ಸೆಂಟ್ ಇಲ್ಲದೇ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೇನೆ. ಹಾಗಾಗಿ, ಟಿಕೆಟ್ ಸಿಗುವ ವಿಶ್ವಾಸವಿದೆ.

 ಪ್ರಮೋದ್ ಮಧ್ವರಾಜ್ ಕೂಡಾ ಟಿಕೆಟ್ ಆಕಾಂಕ್ಷಿನಾ?

ಪ್ರಮೋದ್ ಮಧ್ವರಾಜ್ ಕೂಡಾ ಟಿಕೆಟ್ ಆಕಾಂಕ್ಷಿನಾ?

ಪ್ರ: ಉಡುಪಿಯವರೇ ಆದ ಬಲಪಂಥೀಯ ಲೇಖಕರ ಹೆಸರು ಬಿಜೆಪಿ ಟಿಕೆಟಿಗೆ ಕೇಳಿ ಬರುತ್ತಿದೆಯಲ್ಲವೆ?

ರಘುಪತಿ ಭಟ್: ನನಗೆ ಆ ರೀತಿ ಅನಿಸುತ್ತಿಲ್ಲ, ಲೋಕಸಭೆಗೆ ಮೋದಿಯವರ ಹೆಸರಿನಲ್ಲಿ ಹಿಂದೆ ನಡೆದಿದೆ. ಆದರೆ, ವಿಧಾನಸಭೆ ಟಿಕೆಟಿಗೆ ಅವರು ಅಪೇಕ್ಷೆ ಪಡುತ್ತಾರೆ ಎಂದು ನನಗನಿಸುವುದಿಲ್ಲ. ನನ್ನ ಬಗ್ಗೆ ಅಸಮಾಧಾನವಿರುವ ಕಿಡಿಗೇಡಿಗಳು ಈ ಸುದ್ದಿಯನ್ನು ಹರಡಿಸಿರಬಹುದು.

ಪ್ರ: ಪ್ರಮೋದ್ ಮಧ್ವರಾಜ್ ಕೂಡಾ ಟಿಕೆಟ್ ಆಕಾಂಕ್ಷಿನಾ?
ರಘುಪತಿ ಭಟ್: ಇಲ್ಲ ಅವರು ಯಾವುದೇ ಟಿಕೆಟಿನ ಅಪೇಕ್ಷೆ ಪಟ್ಟು ಬಿಜೆಪಿಗೆ ಸೇರಿದ್ದಲ್ಲ. ನಾನು ಯಾವುದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ ಎಂದು ನನ್ನ, ಲಾಲಾಜಿ ಮೆಂಡನ್, ಯಶಪಾಲ್ ಸುವರ್ಣ ಅವರ ಮುಂದೆ ಹೇಳಿದ್ದಾರೆ. ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ನನ್ನ ಹೆಸರನ್ನು ಪರಿಗಣಿಸಬಹುದು ಎಂದು ಪ್ರಮೋದ್ ಅವರು ಹೇಳಿದ್ದಾರೆ. ನಮ್ಮ ಪಕ್ಷಕ್ಕೆ ಅವರು ಬಂದಿದ್ದರಿಂದ, ಅವರ ಉತ್ತಮ ಸಹಕಾರ ಇರಲೇ ಬೇಕಲ್ಲವೇ..

 ಯಡಿಯೂರಪ್ಪನವರ ನಾಯಕತ್ವ ಮುಂದಿನ ಚುನಾವಣೆಯಲ್ಲಿ ಎಷ್ಟು ಅವಶ್ಯಕ

ಯಡಿಯೂರಪ್ಪನವರ ನಾಯಕತ್ವ ಮುಂದಿನ ಚುನಾವಣೆಯಲ್ಲಿ ಎಷ್ಟು ಅವಶ್ಯಕ

ಪ್ರ: ಯಡಿಯೂರಪ್ಪನವರ ನಾಯಕತ್ವ ಮುಂದಿನ ಚುನಾವಣೆಯಲ್ಲಿ ಎಷ್ಟು ಅವಶ್ಯಕ?

ರಘುಪತಿ ಭಟ್: ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು, ಹಾಗಾಗಿಯೇ ಅವರಿಗೆ ಪಕ್ಷದ ಉನ್ನತ ಸಂಸದೀಯ ಮಂಡಳಿಯ ಸ್ಥಾನವನ್ನು ನೀಡಲಾಗಿದೆ. ಅವರ ನಾಯಕತ್ವದಿಂದ ಬಿಜೆಪಿ ಇನ್ನಷ್ಟು ಬಲಗೊಳ್ಲಲಿದೆ.

ಪ್ರ: ರಘುಪತಿ ಭಟ್ ಅವರಿಗೆ ಉಡುಪಿಯಲ್ಲಿ ಪ್ರಬಲ ಪ್ರತಿಸ್ಪರ್ಧಿ ಇಲ್ಲ ಎನ್ನುವ ಮಾತಿದೆ?

ರಘುಪತಿ ಭಟ್: ಇದನ್ನು ನಾವು ಹೇಳಲು ಬರುವುದಿಲ್ಲ, ಎದುರಾಳಿ ಯಾರು ಎನ್ನುವುದು ನಮಗಿನ್ನೂ ಗೊತ್ತಿಲ್ಲ. ಮುಂಚೆ ಆದರೆ, ಪ್ರಮೋದ್ ಮಧ್ವರಾಜ್ ನಮ್ಮ ಎದುರಾಳಿ ಎಂದು ತಿಳಿದಿರುತ್ತಿತ್ತು. ನಮ್ಮ ಬೂತ್ ಮಟ್ಟದ ಸಂಘಟನೆ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ. ನಾನು ಸಂಘದ ಸ್ವಯಂಸೇವಕ. ಉಡುಪಿಯ ಅಭಿವೃದ್ದಿಯ ವಿಚಾರದಲ್ಲಿ ಇನ್ನಷ್ಟು ಕನಸುಗಳನ್ನು ಹೊಂದಿದ್ದೇನೆ.

ವಿ.ಎಸ್.ಆಚಾರ್ಯ ಅವರ ಗರಡಿಯಲ್ಲಿ ಪಳಗಿದವನು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಉಡುಪಿಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಜನತೆಯ ಸಹಕಾರ ಬೇಕು.

English summary
No Rivals To BJP In Udupi: Interview of Udupi MLA K Raghupati Bhat. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X