ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಯಾರೇ ಪ್ರಚಾರ ಮಾಡಲಿ, ನಿಖಿಲ್ ಗೆದ್ದೇ ಗೆಲ್ತಾರೆ:ಸಿಎಂ

|
Google Oneindia Kannada News

ಉಡುಪಿ, ಏಪ್ರಿಲ್ 04: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಘಟಾನುಘಟಿಗಳು ಪ್ರಚಾರ ಮಾಡಲಿ ನಿಖಿಲ್ ಗೆಲ್ಲುವಲ್ಲಿ ಸಂಶಯವೇ ಬೇಡ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಜೆ ಕುಂದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಪರ ಯಶ್ ಹಾಗೂ ದರ್ಶನ್ ಅವರ ಅಬ್ಬರದ ಪ್ರಚಾರದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯಾವುದೇ ಅಪಪ್ರಚಾರ ನಡೆದ್ರು ನಿಖಿಲ್ ಗೆಲ್ತಾರೆ. ಮಂಡ್ಯದಲ್ಲಿ ದೊಡ್ಡಮಟ್ಟದ ಮಾರ್ಜಿನ್ ನಲ್ಲಿ ಗೆಲ್ತೇವೆ. ಅದಕ್ಕೆ ಯಾವುದೇ ರೀತಿಯಲ್ಲಿ ಸಂಶಯ ಬೇಡ ಎಂದು ಹೇಳಿದರು.

ಕನ್ನಡ ಸುದ್ದಿವಾಹಿನಿಗಳ ಬಗ್ಗೆ ಕಿಡಿಕಾರಿದ ಅವರು, ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆ.ಮಂಡ್ಯ ಚುನಾವಣೆಗೆ ಪ್ರಚಾರ ನೀಡ್ತಾ ಇದ್ದಾರೆ.ಬೇಜಾರಾದ್ರೆ ಹಾಸನ, ತುಮಕೂರು ತೋರಿಸ್ತಾರೆ ಎಂದು ವ್ಯಂಗ್ಯವಾಡಿದರು.

 ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್ ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್

ಪ್ರಧಾನಿ ಮೋದಿ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಈ ಬಾರಿ ಮೋದಿ ಅಲೆಯಿಲ್ಲ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಏನು? ಬಿಜೆಪಿ ನಾಯಕರು ಕೀಳುಮಟ್ಟದ ಮಾತುಗಳನ್ನು ಆಡುತ್ತಾರೆ. ಬಿಜೆಪಿಯಿಂದ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ.ಈ ಬಾರಿಯ ಚುನಾವಣೆಯಲ್ಲಿ ಕರಾವಳಿಯ ಮೂರು ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಾಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದೆ ಓದಿ...

 ಮೋದಿ ಹೆಸರಲ್ಲಿ ವೋಟು ಕೇಳ್ತಾರೆ

ಮೋದಿ ಹೆಸರಲ್ಲಿ ವೋಟು ಕೇಳ್ತಾರೆ

ಬಿಜೆಪಿ ಅವರು ನರೇಂದ್ರ ಮೋದಿ ಹೆಸರಲ್ಲಿ ವೋಟು ಕೇಳ್ತಾರೆ. ಬಿಜೆಪಿಯವರಲ್ಲಿ ಮಾತನಾಡಲು ಏನು ಬಂಡವಾಳ ಇಲ್ಲ. ಮಾತಿನಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ.ಬಿಜೆಪಿ ಅವರು ಯುವಕರ ದಾರಿ ತಪ್ಪಿಸುತ್ತಿದ್ದಾರೆ. ನಿರುದ್ಯೋಗಿ ಯುವಕರು ಈ ಬಾರಿ ಮೋದಿಗೆ ಮತ ಹಾಕಲ್ಲ. ಚುನಾವಣೆಯಲ್ಲಿ ಬಿಜೆಪಿ ಸೋಲು ಸ್ವೀಕಾರ ಮಾಡಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

 ನಾಯಕರ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು

 ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ

ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ

ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈಶ್ವರಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅವರ ನಾಯಕರ ಹೇಳಿಕೆಗಳಲ್ಲೇ ಗೊಂದಲ ಇದೆ. ಅವರು ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.

 ನಾನು ಜಾತಿ ವ್ಯಾಮೋಹಕ್ಕೆ ಒಳಗಾಗಲ್ಲ

ನಾನು ಜಾತಿ ವ್ಯಾಮೋಹಕ್ಕೆ ಒಳಗಾಗಲ್ಲ

ಶಿವರಾಮೇಗೌಡ ಸುಮಲತಾ ನಾಯ್ಡು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಜಾತಿ ವ್ಯಾಮೋಹಕ್ಕೆ ಒಳಗಾಗಲ್ಲ.ನಾನು ಯಾರನ್ನೂ ಜಾತಿ ಆಧಾರದಲ್ಲಿ ನೋಡಿಲ್ಲ. ಜಾತಿ ವಿಚಾರದಲ್ಲಿ ಯಾರೇ ಮಾತನಾಡಿದರೂ ತಪ್ಪು ಎಂದರು.

 ಸುದ್ದಿ ವಾಹಿನಿ ಸರ್ವೆಗಳು ಸುಳ್ಳು

ಸುದ್ದಿ ವಾಹಿನಿ ಸರ್ವೆಗಳು ಸುಳ್ಳು

ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವ ಸರ್ವೆಗಳು ಸುಳ್ಳು. ಬಿಜೆಪಿ ಅವರು 550 ಕೋಟಿ ಮಾಧ್ಯಮದವರಿಗೆ ಜಾಹೀರಾತು ಕೊಟ್ಟಿದ್ದಾರೆ. ವಾಸ್ತವ ಪರಿಸ್ಥಿತಿ ನ್ಯೂಸ್ ಚಾನೆಲ್ ಗಳಲ್ಲಿ ಬರ್ತಾ ಇಲ್ಲ. ಇದರ ಬಗ್ಗೆ ಮೇ 23 ಕ್ಕೆ ಮಾತನಾಡುತ್ತೇನೆ. ರಾಜ್ಯದಲ್ಲಿ 20ರಿಂದ 22 ಸೀಟು ಗೆಲ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

English summary
CM Kumaraswamy expressed his confidence about his son Nikil win in upcoming election. He said who ever campaign in Mandya Nikil will win by huge margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X