• search

ಹೈವೇ ಆಯ್ತು ಡೈವೇ: ಆಮೆಗತಿ ಕಾಮಗಾರಿಗೆ ಜನ ಆದ್ರು ಹೈರಾಣಾ

By ಉಡುಪಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಉಡುಪಿ, ಜೂನ್. 26: ಸುರತ್ಕಲ್ ಕುಂದಾಪುರ ಹೈವೇ 66 ಡೈ ವೇ ಯಾಗುತ್ತಿದೆ. ಜನ ನಿತ್ಯ ಪ್ರಾಣ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನವಯುಗ ಕಂಪೆನಿ ಹೈವೇ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸುತ್ತಿರುವುದೇ ಇದಕ್ಕೆ ಕಾರಣ.

  ಈ ಕಂಪೆನಿ ಕಳೆದ ಆರು ವರ್ಷಗಳಿಂದ ಉಡುಪಿಯಲ್ಲಿ ಫ್ಲೈಓವರ್, ಅಂಡರ್ ಪಾಸ್ ಕಾಮಗಾರಿ ನಡೆಸುತ್ತಿದ್ದು, ಆಮೆಗತಿಯ ಕಾಮಗಾರಿಗೆ ಜನ ಹೈರಾಣಗೊಂಡಿದ್ದಾರೆ. ಕಿರಿದಾದ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ಸಂಚಾರದಿಂದ ಟ್ರಾಫಿಕ್ ಕಿರಿಕಿರಿ ನಿತ್ಯ ತಪ್ಪಿದ್ದಲ್ಲ.

  ಅನುಮೋದನೆ ಸಿಕ್ಕಿರುವ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ?

  ಮುಂಬೈನ ಪನ್ವೇಲ್ ನಿಂದ ಕನ್ಯಾಕುಮಾರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಉಡುಪಿಯಿಂದ ಹಾದು ಹೋಗುತ್ತದೆ. ಮಂಗಳೂರಿನ ತಲಪಾಡಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದವರೆಗೂ ಈ ಹೆದ್ದಾರಿ ಚತುಷ್ಪದಗೊಳಿಸುವ ಗುತ್ತಿಗೆಯನ್ನು ನವಯುಗ ಕನ್ಸ್ಟ್ರಕ್ಷನ್ ಕಂಪೆನಿ 2010ರಲ್ಲಿ ಒಪ್ಪಂದ ಪಡೆದಿತ್ತು.

  National Highway 66 is becoming to die way

  ಆದರೆ 674 ಕೋಟಿ ರೂ ವೆಚ್ಚದ ಕಾಮಗಾರಿ ಆರಂಭಿಸಿ 8 ವರ್ಷಗಳೇ ಕಳೆದ್ರೂ ಇನ್ನೂ ಪೂರ್ತಿಯಾಗಿಲ್ಲ. ಉಡುಪಿಯ ಕುಂದಾಪುರದ ಶಾಸ್ತ್ರೀ ಸರ್ಕಲ್ ನಲ್ಲಿ ಮತ್ತು ಕರಾವಳಿ ಬೈಪಾಸ್ ನಲ್ಲಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಿ ಆರು ವರ್ಷ ಕಳೆಯಿತು. ಆದ್ರು ಪೂರ್ತಿಯಾಗಿಲ್ಲ.

  ಮಳೆ ಬಂದರೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿ ಕೆರೆಯಾಗಿ ಬಿಡುತ್ತೆ. ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕುಂದಾಪುರ ಎ.ಸಿ ಭೂಬಾಲನ್ ನವಯುಗ ಕಂಪೆನಿಗೆ ನಿಧಾನಗತಿಯ ಕಾಮಗಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

  ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಅಡಿಯಲ್ಲಿ ಸೆಕ್ಷನ್ 133 ಪ್ರಕಾರ ಪಬ್ಲಿಕ್ ನ್ಯೂಸೆನ್ಸ್ ನಡೆಯುತ್ತಿದೆ ಎಂದು ಕಂಪೆನಿಗೆ ನೋಟಿಸ್ ಜಾರಿಯಾಗಿದೆ.

  ಆದರೆ ಕಂಪೆನಿ ಮಾತ್ರ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ಬಳಸಿ ಕಾಮಗಾರಿ ನಡೆಸುತ್ತಿದೆ. ಪ್ರಾರಂಭದಲ್ಲಿ ಹೆದ್ದಾರಿ ಅಗಲೀಕರಣ ಕೆಲಸವನ್ನು ನವಯುಗ ಕಂಪೆನಿ ಚುರುಕಿನಿಂದ ನಡೆಸಿದರೂ ಬಳಿಕ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಗುತ್ತಿಗೆ ಅವಧಿಯನ್ನು ವಿಸ್ತರಿಸುತ್ತಾ ಬಂದಿದೆಯೇ ಹೊರತು ಕಾಮಗಾರಿಯನ್ನು ಪೂರ್ತಿಗೊಳಿಸಿಲ್ಲ.

  ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರ ಸೇವೆಗೆ ಅಂಡರ್ ಪಾಸ್, ಫ್ಲೈಒವರ್ ಲಭ್ಯವಾಗಲಿ ಅನ್ನುವ ನೀರೀಕ್ಷೆ ಜನರದ್ದಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Surathkal Kundapur National Highway 66 is becoming to die way. This is because the Navayuga Company is slowly conducting highway work.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more