ಉಡುಪಿ; ಬೀಚ್‌ನಲ್ಲಿ ನಮಾಜ್, ಪ್ರಕರಣ ಸುಖಾಂತ್ಯ ,ವಿಡಿಯೋ ವೈರಲ್

ಉಡುಪಿ, ಮಾರ್ಚ್ 15; ಉಡುಪಿ ಜಿಲ್ಲೆಯ ಪಡುಬಿದ್ರೆ ಬೀಚ್‌ನಲ್ಲಿ ಯುವಕನೊಬ್ಬ ನಮಾಜ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಅದು ಸುಖಾಂತ್ಯಗೊಂಡಿದೆ. ಆದರೆ, ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಭಾನುವಾರ ಪಡುಬಿದ್ರೆ ಬೀಚ್‌ನಲ್ಲಿ ವಯೋವೃದ್ಧರು ನಮಾಜು ಮಾಡುತ್ತಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬಂದಿ ಇಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ಮಾಡುವಂತಿಲ್ಲ ,ಈ ಬಗ್ಗೆ ನಾವು ಸೂಚನಾ ಫಲಕ ಕೂಡಾ ಹಾಕಿದ್ದೇವೆ ಎಂದು ಹೇಳಿದ್ದಾರೆ.

ಆದರೆ, ಅಲ್ಲಿಗೆ ಆಗಮಿಸಿದ್ದ ಯುವಕನೊಬ್ಬ ತಾನು ಕೂಡ ನಮಾಜ್ ಮಾಡಿದ್ದಾನೆ. ಇದನ್ನು ಕೂಡ ಅಲ್ಲಿಯ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಇದು ಬ್ಲೂ ಫ್ಲಾಗ್ ಬೀಚ್, ಇಲ್ಲಿ ಯಾವುದೇ ಧರ್ಮದ ಆಚರಣೆಗಳಾಗಲಿ ಅಥವಾ ಪ್ರಾರ್ಥನೆಯಾಗಲಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

Namaz In Udupi Padubidri Beach Video Goes Viral

ಈ ಸಂಬಂಧ ಕೆಲ ಹೊತ್ತು ಎರಡೂ ಕಡೆ ಸಣ್ಣ ವಾಗ್ವಾದ ನಡೆದಿದೆ. ಕೊನೆಗೆ ನಮಾಜ್ ಮಾಡಿದ ವ್ಯಕ್ತಿ ತಾನು ಆ ಫಲಕ ಗಮನಿಸಲಿಲ್ಲ. ಕ್ಷಮಿಸಿ ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ.

ನಮಾಜ್ ಮಾಡುವ ವಿಡಿಯೋವನ್ನು ಯಾರೋ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಮನಾರ್ಹ ಸಂಗತಿ ಎಂದರೆ ಕರಾವಳಿಯ ಬಹುತೇಕ ಬೀಚ್‌ಗಳಲ್ಲಿ ವರ್ಷಪೂರ್ತಿ ಪಿಂಡ ಪ್ರಧಾನಗಳು, ಹೋಮ-ಹವನಗಳು ನಡೆಯುತ್ತಿರುತ್ತವೆ.

ಇದು ಅತ್ಯಂತ ಸಾಮಾನ್ಯ. ಆದರೆ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರೆ ಬೀಚ್‌ನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ನಡೆಸುವಂತಿಲ್ಲ ಎಂಬ ಸೂಚನಾ ಫಲಕ ಹಾಕಲಾಗಿದೆ. ಇದನ್ನು ಗಮನಿಸಿದ ವ್ಯಕ್ತಿ ಅಲ್ಲಿ ನಮಾಜ್ ಮಾಡಿ, ಬಳಿಕ ಕ್ಷಮೆ ಕೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+