ಉಡುಪಿ: ಮುಸ್ಲಿಂ ವ್ಯಕ್ತಿಯ ಮೇಲೆ ಹಿಂದೂ ಯುವಕರಿಂದ ಹಲ್ಲೆ ಆರೋಪ

Posted By:
Subscribe to Oneindia Kannada

ಉಡುಪಿ, ಜನವರಿ 05: ಹಿಂದೂ ಸಂಘಟನೆಗೆ ಸೇರಿದ ಕೆಲ ಸದಸ್ಯರು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ವರದಿಯಾಗಿದೆ.

ಕಾರ್ಕಳದ ಬಂಗ್ಲೆಗುಡ್ಡೆ ಸಮೀಪ ಗುರುವಾರ ಸಂಜೆ ಮೊಹಸಿನ್ ಎಂಬುವರ ಮೇಲೆ ಹಿಂದೂ ಸಂಘಟನೆಗಳ ಕೆಲವು ಯುವಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

Muslim man allegedly beaten by Hindu organization members

ಗಾಯಗೊಂಡಿರುವ ಮೊಹಸಿನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ದುಷ್ಕರ್ಮಿಗಳು ಬಳಸಿದ ವಾಹನದ ಸಂಖ್ಯೆಯನ್ನು ಗಾಯಾಳು ಮೊಹಸಿನ್ ನೀಡಿದ್ದಾರೆ. ಅದರ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮ ಕೈಹೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಬಜರಂಗದಳ ಸಂಘಟನೆಯ ಮುಖಂಡರೊಬ್ನರಿಗೆ ಸೇರಿದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Udupi's Karkala Muslim man Mohasin allegedly beaten by Hindu organization members on Thursday evening. Mohasin is now out of danger. He gave basic information about attackers, police investigating the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ