ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಆತುರದ ನಿರ್ಧಾರದಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ: ಮಾಜಿ ಸಿಎಂ ವೀರಪ್ಪ ಮೊಯಿಲಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 31: "ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ನಷ್ಟ ಐವತ್ತು ಸಾವಿರ ಕೋಟಿ ಅಲ್ಲ, ಸುಮಾರು 5 ಲಕ್ಷ ಕೋಟಿ. ಐಎಎಸ್ ಅಧಿಕಾರಿಗಳ ನಿಯೋಗ ಬಂದು ಅಧ್ಯಯನ ನಡೆಸಿದರೆ ಪ್ರಯೋಜನ ಇಲ್ಲ. ತಜ್ಞರ ಸಮಿತಿ‌ ಮಾಡಬೇಕು. ಇವತ್ತಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ" ಎಂದು ದೂರಿದ್ದಾರೆ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೇಗಿತ್ತು, ಈಗ ಅಧೋಗತಿ: ಸಿದ್ದರಾಮಯ್ಯ ವಾಗ್ದಾಳಿಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹೇಗಿತ್ತು, ಈಗ ಅಧೋಗತಿ: ಸಿದ್ದರಾಮಯ್ಯ ವಾಗ್ದಾಳಿ

ಉಡುಪಿಯ ಡಿಸಿಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮೊಯಿಲಿ, "ಪ್ರಧಾನಿಯವರು ಅ.7ಕ್ಕೆ ಬರುತ್ತಾರೆ ಎಂದಿದ್ದಾರೆ. ಅವರೇ ಬಂದು ಪರಿಹಾರ ಘೋಷಣೆ ಮಾಡಬೇಕು ಅಂತ ಏನಿದೆ? ಪರಿಹಾರ ಘೋಷಣೆಗೆ ಕಾಯುವುದು ಸರಿಯಲ್ಲ. ಗೃಹ ಸಚಿವರು ರಾಷ್ಟ್ರೀಯ ವಿಪತ್ತು ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಹಾಗಿದ್ದರೂ ಪರಿಹಾರ ಘೋಷಣೆ ಮಾಡಲು ವಿಳಂಬ ಯಾಕೆ? ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರವಾಹವನ್ನು ಸಹಜವಾಗಿ ತೆಗೆದುಕೊಂಡಿದೆ. ರಾಜ್ಯದಲ್ಲೂ ಸಿಎಂ ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರ ವಿಶ್ವಾಸ ಪಡೆದಿಲ್ಲ" ಎಂದು ಆರೋಪಿಸಿದರು.

ಶಶಿ ತರೂರ್, ಜೈರಾಮ್ ರಮೇಶ್ ವಿರುದ್ಧ ಹುಲಿಯಂತೆ ಅಬ್ಬರಿಸಿದ ಮೊಯಿಲಿಶಶಿ ತರೂರ್, ಜೈರಾಮ್ ರಮೇಶ್ ವಿರುದ್ಧ ಹುಲಿಯಂತೆ ಅಬ್ಬರಿಸಿದ ಮೊಯಿಲಿ

ಇದೇ ಸಂದರ್ಭ ದೇಶದ ಆರ್ಥಿಕ ಪರಿಸ್ಥಿತಿ ಕುರಿತೂ ಮಾತನಾಡಿದ ಅವರು, "ಬ್ಯಾಂಕ್ ವಿಲೀನ ಪ್ರಕ್ರಿಯೆ ಆರ್ಥಿಕ ತುರ್ತು ಪರಿಸ್ಥಿತಿ. ಇದು ಪ್ರಧಾನಿ‌ ಮೋದಿಯ ಆತುರದ ನಿರ್ಧಾರದಿಂದಾದದ್ದು. ಪ್ರತಿಯೊಂದನ್ನೂ ರಾತ್ರಿ ನಿರ್ಧಾರ ಮಾಡ್ತಾರೆ, ಬೆಳಿಗ್ಗೆ ಘೋಷಣೆ ಮಾಡ್ತಾರೆ. ಕಾಶ್ಮೀರ ವಿಚಾರದಲ್ಲೂ ಪ್ರಧಾನಿ ಆತುರದ ನಿರ್ಧಾರ ಮಾಡಿದ್ದಾರೆ. ಬಡ ಜನರಿಗೆ ಸೇವೆ ಕೊಡುವ ಉದ್ದೇಶದಿಂದ ಆರಂಭವಾದ ಬ್ಯಾಂಕ್ ಗಳನ್ನು ಜನರಿಂದ ದೂರ ಕೊಂಡೊಯ್ಯಲಾಗುತ್ತಿದೆ. ಇನ್ನು ದೊಡ್ಡ ಉದ್ಯಮಿಗಳಿಗೆ ಸಾಲ ಕೊಡಲು ದೊಡ್ಡ ಬ್ಯಾಂಕ್ ಮಾಡಿದಾರೆ ಅಷ್ಟೆ. ಈಗ ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿದೆ" ಎಂದರು.

Modi Is Responsible For Economic Emergency In Country Said Veerappa Moily

"ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಅಂತ ಕೇಂದ್ರ ಸರ್ಕಾರ ಹೀಗೆಲ್ಲಾ ಮಾಡುತ್ತಿದೆ. ಆದರೆ ದೇಶದ ಅಭಿವೃದ್ಧಿಗೆ ಈ ಧೋರಣೆಯೇ ಮಾರಕ. ಕೇಂದ್ರದ ವೈಫಲ್ಯವನ್ನು ಜನರಿಗೆ ತಲುಪಿಸಲು ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ಸಕ್ರಿಯ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಮುಂದಾಗಬೇಕು. ಈಗ ಇಡಿ ಮೂಲಕ ಹೆದರಿಸುವ ಕೆಲಸ ಈಗ ಆಗ್ತಿದೆ. ಚಿದಂಬರಂ ಅವರನ್ನು ಒಳಗೆ ಹಾಕಿದಾರೆ. ಡಿಕೆಶಿಯನ್ನೂ ಒಳಗೆ ಹಾಕ್ತಾರೆ. ಆದರೆ ಪ್ರಜಾಪ್ರಭುತ್ವ ಹಿತರಕ್ಷಣೆಗೆ ಕಾಂಗ್ರೆಸ್ ನಾಯಕರು ಹೆದರಬಾರದು" ಎಂದು ಎಚ್ಚರಿಕೆ ನೀಡಿದರು.

English summary
"Modi is responsible for economic emergency in country" Said former cm and congress leader Veerappa Moily in udupi. He also demanded flood relief for state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X