ಮಾನಸಿಕ ಅಸ್ವಸ್ಥನಿಂದ ಮೂವರ ಮೇಲೆ ಹಲ್ಲೆ, ಬಾಲಕಿ ಸ್ಥಿತಿ ಗಂಭೀರ

ಉಡುಪಿ, ಮೇ 02 : ಇಲ್ಲಿನ ಕೆಂದಿಂಜೆ ಬೋಳ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಮಾನಸಿಕ ಅಸ್ಪಸ್ಥನೊಬ್ಬ ಓರ್ವ ಬಾಲಕಿ ಸೇರಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಏಕಾಏಕಿ ಮನೆಯೊಳಗೆ ನುಗ್ಗಿ ರೋಹಿಣಿ(60), ಸಪ್ನ(40), ಮಾನ್ವಿ(9) ಎನ್ನುವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ. ನಿದ್ರೆಯಲ್ಲಿದ್ದ ಮಾನ್ವಿ ಎಂಬಾಕೆಯ ತಲೆಗೆ ಕಬ್ಬಿಣದ ಹಾರೆಯಿಂದ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಮಾನ್ವಿ, ನಗರದ ಕೆಎಂಸಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸೋಮವಾರ ಬೆಳಿಗ್ಗೆ ಕೆದಿಂಜೆ ಬೋಳ ಕ್ರಾಸ್ ಪರಿಸರದಲ್ಲಿ ಬಾಗಿಲು ತೆರದುಕೊಂಡಿದ್ದ ಮನೆಯೊಂದಕ್ಕೆ ಮಾನಸಿಕ ಅಸ್ವಸ್ಥ ಏಕಾಏಕಿ ಪ್ರವೇಶಕ್ಕೆ ಮುಂದಾಗಿದ್ದನು. ಆ ಸಂದರ್ಭದಲ್ಲಿ ಅಕ್ಷೇಪ ವ್ಯಕ್ತಪಡಿಸಿದ ಸ್ವಪ್ನಾ ಎಂಬ ಯುವತಿಯ ಮೇಲೆರಗಿ ಹಲ್ಲೆ ಮಾಡಿದ್ದಾನೆ.

Mentally unsound man enters house and attacks family Udupi

ಬಳಿಕ ಹತ್ತಿರದಲ್ಲಿದ್ದ ಹಾರೆಯೊಂದಿಗಿಗೆ ಮನೆಯೊಳಕ್ಕೆ ನುಗ್ಗಿ ಮನೆಯ ಕೋಣೆಯಲ್ಲಿ ನಿದ್ರಿಸುತ್ತಿದ್ದ ಮಾನ್ವಿ ಎಂಬಾಕೆಯ ತಲೆಗೆ ಹಾರೆಯಿಂದ ಮಾರಾಣಾಂತಿಕವಾಗಿ ಹೊಡೆದಿದ್ದಾನೆ. ಇದನ್ನು ತಡೆಯಲು ಬಂದಿದ್ದ ರೋಹಿಣಿ ಮೇಲೂ ಹಲ್ಲೆ ನಡೆಸಿದ್ದಾನೆ.

ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಚೆಲ್ಲಾಪಿಲಿ ಗೊಳಿಸಿ ಕೊಣೆಯೊಂದರಲ್ಲಿ ಕುಳಿತ್ತಿದ್ದನು. ಇದನ್ನು ಕಂಡು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಮಾನಸಿಕ ಅಸ್ಪಸ್ಥ ವ್ಯಕ್ತಿಯನ್ನು ಕಟ್ಟಿ ಹಾಕಿ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ಬಂದ ಗ್ರಾಮಾಂತರ ಪೊಲೀಸರು ಆರೋಪಿಯಾಗಿರುವ ಮಾನಸಿಕ ಅಸ್ಪಸ್ಥ ವ್ಯಕ್ತಿಯನ್ನು ವಶಕ್ಕೆ ತೆಗೆದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯಾರೀತ ಮಾನಸಿಕ ಅಸ್ವಸ್ಥ?

ಹಲ್ಲೆ ನಡೆಸಿದ ಮಾನಸಿಕ ಆರೋಪಿ ಮೂಲತಃ ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಲೀಲಾಧರ ಯಾನೆ ಉಮೇಶ್ (40) ಎಂದು ತಿಳಿದು ಬಂದಿದೆ.

ಎಸ್ಎಸ್ಎಲ್ ಸಿ ವರೆಗೆ ಕಲಿತು ಬೈಕ್ ಮೆಕಾನಿಕ್ ಆಗಿದ್ದ ಉಮೇಶ್ ಕಳೆದ 10 ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕಾಗಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿತ್ತಿದ್ದಂತೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆ ಸಂದರ್ಭದಲ್ಲಿ ಮಾನಸಿಕ ಆಸ್ವಸ್ಥಗೊಂಡು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹಲವು ಭಾರೀ ಚಿಕಿತ್ಸೆ ಪಡೆದಿದ್ದನು.

ನಾಲ್ಕು ವರ್ಷಗಳ ಹಿಂದೆ ಕೌಟುಂಬಿಕ ಆಸ್ತಿ ಹಂಚಿಕೆಯಾದ ಬಳಿಕ ಸಹೋದರ ಹಾಸಕನ ರುಕ್ಮಣಿ ಎಂಬವರ ಮನೆಯಲ್ಲಿ ನೆಲೆಸಿದ್ದ ಆತ ಕಳೆದ ಎರಡು ತಿಂಗಳ ಹಿಂದೆ ಮನೆಗೆ ಹೋಗಿ ಬರುತ್ತೇನೆಂದು ಹೊರಟು ಹೋದವನು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+