• search
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೋಕ ಕಲ್ಯಾಣಾರ್ಥವಾಗಿ ಸಂಚಾರ: ಉಡುಪಿಯಲ್ಲಿ ಮಾನಸಿಕ ಅಸ್ವಸ್ಥೆ

|

ಉಡುಪಿ, ಫೆ 18: ಮಾನಸಿಕ ಆಘಾತ ಮತ್ತು ಶೋಷಣೆಗೆ ಒಳಪಟ್ಟವಳಂತೆ ಮೆಲ್ನೋಟಕ್ಕೆ ಕಾಣುವ ಯುವತಿಯೋರ್ವಳನ್ನು ನಗರದ ಸಾಮಾಜಿಕ ಕಾರ್ಯಕರ್ತರು ಆಶ್ರಮವೊಂದಕ್ಕೆ ಸೇರಿಸಿದ್ದಾರೆ.

ಭಕ್ತಿ ಮಾರ್ಗ ಚಿಂತನೆಯ ಮಾತುಗಳನ್ನು ಆಡುವ ಯುವತಿ, ತನ್ನ ಜೊತೆಯಲ್ಲಿ ಅವಧೂತ ಸಾಧುಸಂತರ ಫೋಟಗಳನ್ನು ಧಾರ್ಮಿಕ ಗ್ರಂಥಗಳನ್ನು, ಬಟ್ಟೆ ಬರೆಗಳನ್ನು ಜೊತೆಯಲ್ಲಿ ತಂದಿದ್ದಾಳೆ. ಶ್ರೀಕೃಷ್ಣನ ಭಕ್ತೆ ಎನ್ನುವ ಈಕೆ, ಗುರು ಆಜ್ಞೆಯ ಮೆರೆಗೆ ಲೋಕ ಕಲ್ಯಾಣರ್ಥಾವಾಗಿ ಸಂಚಾರಕ್ಕೆ ಬಂದಿದ್ದೇನೆ ಎನ್ನುತ್ತಿದ್ದಾಳೆ.

ಅಸಹಾಯಕ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಪತ್ತೆಯಾದ ದೆಹಲಿ ಮೂಲದ ಯುವತಿಯನ್ನು, ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದಲ್ಲಿ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ, ತಾರಾನಾಥ್ ಮೇಸ್ತರು ಜೊತೆಗೊಡಿ ಕಾನೂನು ಪ್ರಕ್ರಿಯೆ ನೆಡೆಸಿ ಒದಗಿಸಿದ್ದಾರೆ.

Mentally illness lady in Udupi admitted in Sai Sevashrama in Manjeshwara (Kerala)

ಸುಮಾರು 35ರ ವಯಸ್ಸಿನ ಹಿಂದಿ ಭಾಷೆ ಮಾತನಾಡುವ ಯುವತಿಯೊರ್ವಳು ಉಡುಪಿಯ ಪೇಜಾವರ ಮಠಕ್ಕೆ ಬಂದಿದ್ದಳು. ತನಗೊಂದು ಆಶ್ರಯ ಬೇಕು. ಭಕ್ತಿ ಮಾರ್ಗದಲ್ಲಿ ನಾನು ದಿನ ಕಳೆಯುತ್ತಿದ್ದೆನೆ. ಈ ಹಿಂದೆ ನಾನು ದೆಹಲಿಯ ಆಶ್ರಮವೊಂದರಲ್ಲಿ ಆಧ್ಯಾತ್ಮ ಬದುಕು ಸಾಗಿಸುತ್ತಿದ್ದೆ.

ರಾಜೇಶ್ ಕಾಮತ್ ಎನ್ನುವ ಉಡುಪಿ ಮೂಲದ ವ್ಯಕ್ತಿ ದೆಹಲಿಯ ಆಶ್ರಮದಲ್ಲಿ ಪರಿಚಯವಾಗಿದ್ದ, ಮದುವೆಯೂ ನಡೆಯಿತು. ಆತ ನನ್ನಿಂದ ದೂರವಾದ.ಆತನ ಸ್ವಷ್ಟ ವಿಳಾಸ ಗೊತ್ತಿಲ್ಲ. ಆತನ ಹುಡುಕಾಡುತ್ತ ಉಡುಪಿಗೆ ಬಂದೆ ಎಂದೂ ಯುವತಿ ಗೊಂದಲದ ಹೇಳಿಕೆ ನೀಡಿದ್ದಾಳೆ.

ಯುವತಿಗೆ ಮೊದಲು ತಾತ್ಕಾಲಿಕವಾಗಿ ನಗರದ ಕೊರಂಗ್ರಪಾಡಿ ಕಾರುಣ್ಯ ಆಶ್ರಮದಲ್ಲಿ ಆಶ್ರಯ ನೀಡಲಾಯಿತು. ಕಾರಣ್ಯ ಆಶ್ರಮ ಮಾಂಸಹಾರ ಉಟೋಪಚಾರದ ವ್ಯವಸ್ಥೆಯ ಆಶ್ರಮವಾಗಿತ್ತು. ಹಾಗಾಗಿ ಈ ಆಶ್ರಮ ಒಗ್ಗುತ್ತಿಲ್ಲವೆಂದು ಕಾರಣ ನೀಡಿದ್ದಳು.

Mentally illness lady in Udupi admitted in Sai Sevashrama in Manjeshwara (Kerala)

ಯುವತಿಯ ಮನೋಸ್ಥಿತಿ ಅರ್ಥ ಮಾಡಿಕೊಂಡ ಸೇವಾಶ್ರಮದ ಸಮಾಜಸೇವಕರು, ಯುವತಿಗೆ ಯೋಗ್ಯವಾದ ಮಂಜೇಶ್ವರದ ದೈಗುಳಿಯಲ್ಲಿರುವ ಶ್ರೀ ಸಾಯಿ ಸೇವಾಶ್ರಮವನ್ನು ಗುರುತಿಸಿದ್ದಾರೆ. ಆಶ್ರಮದ ಸಂಚಾಲಕರಲ್ಲಿ ಮನವಿ ಮಾಡಿಕೊಂಡು ಆಕೆಯನ್ನು ಆಶ್ರಮಕ್ಕೆ ದಾಖಲಿಸಿದ್ದಾರೆ. ಉಡುಪಿ ಪರ್ಯಾಯ ಪಲಿಮಾರು ಮಠ ಈಕೆಗಾಗಿ ಆಶ್ರಮಕ್ಕೆ ಎಂಟು ಮೂಟೆ ಅಕ್ಕಿಯನ್ನು ಒದಗಿಸಿದೆ.

ಯುವತಿ ತನ್ನ ಹೆಸರು ರಿಂಕು ಶರ್ಮ, ತಂದೆ ರಾಮ್ ಸುರೀಟ್ ಸಿಂಗ್, ತಾಯಿ ಲಾಲ್ ಮತಿ ದೇವಿ, ಬ್ಯೂಟಿ ಪಾರ್ಲರ್ ವೃತ್ತಿಯನ್ನು ದೆಹಲಿಯಲ್ಲಿ ಮಾಡಿ ಕೊಂಡಿದ್ದೆನೆ ಎಂದು ಅಸ್ವಷ್ಟ ಮಾಹಿತಿ ನೀಡಿದ್ದಾಳೆ. ಬಲ್ಲವರು ವಾರಸುದಾರರಿಗೆ ಮಾಹಿತಿ ರವಾನಿಸಬಹುದು. ಸಂಬಂಧಿಕರು ಉಡುಪಿ ನಗರ ಮಹಿಳಾ ಠಾಣೆಯನ್ನು ಸಂಪರ್ಕಿಸ ಬಹುದೆಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಉಡುಪಿ ಚಿಕ್ಕಮಗಳೂರು ರಣಕಣ
  • Shobha Karandlaje
    ಶೋಭಾ ಕರಂದ್ಲಾಜೆ
    ಭಾರತೀಯ ಜನತಾ ಪಾರ್ಟಿ
  • Pramod Madhavraj
    ಪ್ರಮೋದ್ ಮಧ್ವರಾಜ್
    ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi based mentally illness lady in Udupi admitted in Sai Sevashrama in Manjeshwara (Kerala). Lady said, for Loka Kalyana she came to Udupi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more