ಉಡುಪಿಯ ಮಟ್ಟುಗುಳ್ಳ ಕೃಷಿಕರಿಗೆ ಉಪ್ಪು ನೀರ ಶಾಪ!

ಉಡುಪಿ, ಏಪ್ರಿಲ್ 12; ಉಡುಪಿಯ ಅಪರೂಪದ ಬೆಳೆಗೆ ಈಗ ಉಪ್ಪು ನೀರು ಶಾಪವಾಗಿ ಪರಿಣಮಿಸಿದೆ. ಹೊರ ದೇಶಕ್ಕೂ ರಫ್ತಾಗುವ ಬಹು ಬೇಡಿಕೆಯ ಮಟ್ಟು ಗುಳ್ಳ, ಗಿಡ ಸಹಿತ ಮಣ್ಣಲ್ಲೇ ಕೊಳೆತು ಹೋಗುತ್ತಿದೆ.

ಉಡುಪಿ ಜಿಲ್ಲೆಯ ಹೊರವಲಯದ ಮಟ್ಟು ಪ್ರದೇಶದಲ್ಲಿ ಬೆಳೆಯುವ 'ಮಟ್ಟು ಗುಳ್ಳ' ಪೇಟೆಂಟ್ ಪಡೆದ ತರಕಾರಿ. ಕರಾವಳಿ ಮಾತ್ರವಲ್ಲದೇ ದೇಶ ವಿದೇಶದಲ್ಲಿ ಮಟ್ಟುಗುಳ್ಳಕ್ಕೆ ವಿಶೇಷ ಬೇಡಿಕೆ ಇದೆ. ಆದರೆ ಈಗ ಕರಾವಳಿಯ ಹೆಮ್ಮೆಯ ಮಟ್ಟುಗುಳ್ಳದ ಗಿಡಗಳು ಸತ್ತು, ಗುಳ್ಳಗಳು ಕೊಳೆತು ಹೋಗುತ್ತಿವೆ.

ಮಟ್ಟುಗುಳ್ಳ ಕೊಳೆತು ಹೋಗಲು ಮುಖ್ಯ ಕಾರಣ ಉಪ್ಪುನೀರು. ಹೌದು, ಪಕ್ಕದಲ್ಲೇ ಹರಿಯುವ ಪಿನಾಕಿನಿ ನದಿಯ ಉಪ್ಪು ನೀರು ಬೆಳೆಗಳತ್ತ ಹರಿದು ಗುಳ್ಳ ಬೆಳದ ಪ್ರದೇಶಗಳಿಗೆ ನುಗ್ಗಿವೆ. ಕಳೆದ ಸಲ ಸುರಿದ ಭಾರೀ ಮಳೆಗೆ ಗುಳ್ಳದ ಗಿಡಗಳು ಕೊಳೆತು ಹೋಗಿದ್ದವು.

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುರಿದ ಮಳೆಗೆ ಪಿನಾಕಿನಿ ತುಂಬಿ ಹರಿದಿತ್ತು. ಆಗ ಸುಮಾರು 62 ರೈತರು 40 ಎಕರೆ ಪ್ರದೇಶದಲ್ಲಿ ನೆಟ್ಟಿದ್ದ ಮಟ್ಟುಗುಳ್ಳ ಸಸಿಗಳಿಗೆ ನೀರಿನಲ್ಲಿ ಅವೃತವಾಗಿದ್ದವು. ಗಿಡಗಳು ಕೊಳೆತು ನಾಟಿ ಮಾಡಿದ ಗಿಡ ಹೇಗಿದೆ? ಎಂದು ನೋಡಲು ಸಹ ಸಿಕ್ಕಿರಲಿಲ್ಲ.

ಕಷ್ಟಪಟ್ಟು ಬೆಳೆದ ರೈತರು

ಕಷ್ಟಪಟ್ಟು ಬೆಳೆದ ರೈತರು

ಪ್ರವಾಹದ ಬಳಿಕ ರೈತರು ಕಷ್ಟ ಪಟ್ಟು, ಪುನಃ ಗುಳ್ಳ ಬೆಳೆದಿದ್ದರು. ಆದರೆ ಉಪ್ಪು ನೀರು ನುಗ್ಗಿದ ಪರಿಣಾಮ, ಇನ್ನೇನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಾಟ ಆಗಬೇಕಿದ್ದ ಮಟ್ಟುಗುಳ್ಳ ಸರ್ವನಾಶವಾಗಿದೆ. ಹೀಗಾಗಿ ಈ ಭಾಗದ ಕೃಷಿಕರ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಪವಾದ ಉಪ್ಪು ನೀರು

ಶಾಪವಾದ ಉಪ್ಪು ನೀರು

ಮಟ್ಟುಗುಳ್ಳಕ್ಕೆ ಈ ಸಮಸ್ಯೆಯೇನೂ ಇಂದು ನಿನ್ನೆಯದೇನಲ್ಲ. ಕಳೆದ ಹಲವು ವರ್ಷಗಳಿಂದಲೂ ಈ ಭಾಗದ ಗುಳ್ಳ ಕೃಷಿಕರಿಗೆ ಉಪ್ಪು ನೀರೇ ಶಾಪವಾಗಿ ಪರಿಣಮಿಸಿದೆ. ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಈ ಸಮಸ್ಯೆ ತಲೆದೋರಿದೆ.

ತಡೆಗೋಡೆ ನಿರ್ಮಾಣ ಮಾಡಿ

ತಡೆಗೋಡೆ ನಿರ್ಮಾಣ ಮಾಡಿ

ಬಹಳ ವರ್ಷಗಳಿಂದ ಈ ಭಾಗದ ಕೃಷಿಕರು ಪಿನಾಕಿನಿ ನದಿಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ನದಿಯ ಮಧ್ಯದಲ್ಲಿ ಇರುವ ಕುದ್ರು ಜಾಗವನ್ನು ತೆರವುಗೊಳಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬುದು ಇವರ ಬೇಡಿಕೆಯಾಗಿದೆ. ಆದರೆ ಸ್ಥಳೀಯ ಆಡಳಿತಕ್ಕೆ, ಜನಪ್ರತಿನಿಧಿಗಳಿಗೆ ಈ ಭಾಗದ ಕೃಷಿಕರ ಕೂಗು ಕೇಳಿಸುತ್ತಲೇ ಇಲ್ಲ.

Recommended Video

    Kumba Mela 2021 : ಎಷ್ಟು ಹೇಳಿದ್ರು ಜನ ಬುದ್ದಿ ಕಲಿತಿಲ್ಲ! | Oneindia Kannada
    ಮಾರುಕಟ್ಟೆ ವ್ಯವಸ್ಥೆ ಭರವಸೆ

    ಮಾರುಕಟ್ಟೆ ವ್ಯವಸ್ಥೆ ಭರವಸೆ

    ವಿಧಾನಸಭೆ ಅಧಿವೇಶನದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜಿಎ ಟ್ಯಾಗ್ ಹೊಂದಿದ ಉತ್ಪನ್ನಗಳಿಗೆ ವಿಮಾನ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಮಳಿಗೆ ತೆರೆದು ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದರು. ಈ ಉತ್ಪನ್ನಗಳ ಪಟ್ಟಿಯಲ್ಲಿ ಚನ್ನಪಟ್ಟಣದ ಬೊಂಬೆ, ನವಲಗುಂದ ಜಮಖಾನ, ಉಡುಪಿಯ ಮಲ್ಲಿಗೆ, ಮಟ್ಟುಗುಳ್ಳ ಬದನೆಕಾಯಿ ಸೇರಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+