ಮಣಿಪಾಲ ವಿದ್ಯಾರ್ಥಿಗಳ ಸೋಲಾರ್ ಕಾರು ಸೆ.14ರಂದು ಅನಾವರಣ

Posted By:
Subscribe to Oneindia Kannada
   Manipal college : MIT students design solar powered car named as SM- S1

   ಉಡುಪಿ, ಸೆಪ್ಟೆಂಬರ್ 13: ಮಾನವನ ಆವಿಷ್ಕಾರಗಳಿಗೆ ಅಂತ್ಯವೇ ಇಲ್ಲ. ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿದಿದ್ದರಿಂದ ಹಿಡಿದು ಇಲ್ಲಿಯ ತನಕ ಅದೆಷ್ಟು ಆವಿಷ್ಕಾರಗಳು ನಡೆದಿವೆ ಅನ್ನೋದಿಕ್ಕೆ ಲೆಕ್ಕವೇ ಇಲ್ಲ.

   ಅಂತೆಯೇ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಮೊಟ್ಟ ಮೊದಲ ಬಾರಿಗೆ ಸೌರಶಕ್ತಿಯಿಂದ ಚಲಿಸುವ ಕಾರೊಂದನ್ನು ನಿರ್ಮಿಸಿದ್ದಾರೆ.

   ಮಣಿಪಾಲದ ಎಂಐಟಿಯ 'ಸೋಲಾರ ಮೊಬಿಲ್' ತಂಡ ಈ 'ಎಸ್‌ಎಂ-ಎಸ್1' ಸೋಲಾರ್ ಕಾರನ್ನು ಸ್ಥಳೀಯವಾಗಿ ತಯಾರಿಸಿದೆ.

   ಕಾರಿಗೆ ಬೇಕಾದ ಸೋಲಾರ್ ಪ್ಯಾನೆಲ್‌ನ್ನು ಟಾಟಾ ಸೋಲಾರ್ ನೀಡಿದ್ದು, ಎಲ್ಲಾ ಖರ್ಚುಗಳು ಸೇರಿ ಈ ಕಾರಿನ ತಯಾರಿಗೆ ಒಟ್ಟು ಸುಮಾರು 30 ರಿಂದ 35 ಲಕ್ಷ ರೂ.ವೆಚ್ಚ ಬಂದಿದೆ. ಇದರಲ್ಲಿ ಮಣಿಪಾಲ ವಿವಿ 10 ಲಕ್ಷ ರೂ. ನೀಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

   ಸೆಪ್ಟೆಂಬರ್ 14ರಂದು ಅನಾವರಣ

   ಸೆಪ್ಟೆಂಬರ್ 14ರಂದು ಅನಾವರಣ

   'ಎಸ್‌ಎಂ-ಎಸ್1' ಹೆಸರಿನ ಈ ಕಾರನ್ನು ಸೆ.14ರಂದು ಅನಾವರಣಗೊಳಿಸಲಾಗುವುದು. ಎಂಐಟಿಯ ವಜ್ರ ಮಹೋತ್ಸವ ಹಾಗೂ ಸೆ.15ರಂದು ನಡೆಯುವ ಇಂಜಿನಿಯರ್ಸ್ ಡೇಗೆ ಪೂರ್ವಭಾವಿಯಾಗಿ ಈ ಕಾರನ್ನು ಸೆ.14ರಂದು ಅನಾವರಣಗೊಳಿಸಲಾಗುತ್ತದೆ.

   ಮಣಿಪಾಲ ವಿವಿಯ ಚಾನ್ಸಲರ್ ಪ್ರೊ. ಎಚ್.ಎಸ್.ಬಲ್ಲಾಳ್ ಅವರು ಕಾರನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪ್ರೊ.ಜಿ.ಕೆ.ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.

   ಗಂಟೆಗೆ 80 ಕಿಲೋ ಮೀಟರ್ ವೇಗ

   ಗಂಟೆಗೆ 80 ಕಿಲೋ ಮೀಟರ್ ವೇಗ

   ಸೌರಶಕ್ತಿ ಚಾಲಿತ ವಾಹನಗಳ ವಿಷಯದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳನ್ನೊಳಗೊಂಡ ‘ಸೋಲಾರ ಮೊಬಿಲ್'ತಂಡ ಕಳೆದ ಹಲವು ತಿಂಗಳುಗಳಿಂದ ಹಗಲು-ರಾತ್ರಿ ಎನ್ನದೇ ನಡೆಸಿದ ಪ್ರಯತ್ನ ಫಲವಾಗಿ ಈ ಕಾರು ನಿರ್ಮಾಣಗೊಂಡಿದೆ. ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ತಂಡ ಶ್ರಮಿಸುತ್ತಿದೆ.

   ಸೂರ್ಯನ ಬೆಳಕಿನಲ್ಲಿ ಸುಮಾರು 4ರಿಂದ 5ಗಂಟೆಗಳ ಕಾಲ ಚಾರ್ಜ್ ಆದ ಕಾರು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ 180 ಕಿ.ಮೀ. ಕ್ರಮಿಸಲಿದೆ. ಒಳ್ಳೆಯ ಸೂರ್ಯನ ಬೆಳಕಿನಲ್ಲಿ ಇದು 200-220ಕಿ.ಮೀ. ದೂರವನ್ನು ಕ್ರಮಿಸುತ್ತದೆ.

   4 ಸೀಟಿನ ಕಾರು

   4 ಸೀಟಿನ ಕಾರು

   ಕಳೆದ ವರ್ಷ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಮೊದಲ ಬಾರಿ ನಿರ್ಮಿಸಲಾದ ಈ ಸೋಲಾರ್ ಕಾರನಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ನಾಲ್ವರು ಪ್ರಯಾಣಿಕರು ಆಸೀನರಾಗಬಹುದಾದ ಕಾರನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಂಪೂರ್ಣವಾಗಿ ಸೌರ ಶಕ್ತಿಯಿಂದ ಚಲಿಸುವ ಈ ಕಾರು, ಎಸಿ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನೂ ಒಳಗೊಂಡಿದೆ.

   ಮಧ್ಯಮ ವರ್ಗದ ಕನಸಿನ ಕಾರು

   ಮಧ್ಯಮ ವರ್ಗದ ಕನಸಿನ ಕಾರು

   ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಕಾರು ಮಧ್ಯಮ ವರ್ಗದ ಕನಸಿನ ಕಾರಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂಬುದು ವಿದ್ಯಾರ್ಥಿಗಳ ಮಾತು.

   "ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪೆಟ್ರೋಲ್, ಡೀಸೆಲ್ ನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಈ ಪರಿಸರ ಸ್ನೇಹಿ ಮಾದರಿ ಕಾರನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾರಿಗೆ ಶೆಲ್ಟರ್ ಅವಶ್ಯಕತೆ ಇಲ್ಲ. ಪಾರ್ಕಿಂಗ್ ಸಮಯದಲ್ಲೂ ಬ್ಯಾಟರಿ ಚಾರ್ಜ್ ಆಗುವ ವ್ಯವಸ್ಥೆ ಇದೆ," ಎನ್ನುತ್ತಾರೆ ಮಣಿಪಾಲ ವಿವಿಯ ವೈಸ್ ಚಾನ್ಸಲರ್ ಪ್ರೊ. ಜಿ.ಕೆ.ಪ್ರಭು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Manipal Institute of Technology (MIT) students designed a unique solar powered car named SM-S1 for the first time in India. The car can travel for about 170-180km if it is charged for about 5 hours and if the sun light is more powerful it can move up to 200-220KPH said the chancellor of MIT Prof J.K Prabhu to Oneindia Kannada

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ