ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಮಾದರಿಯ ರಕ್ತದ ಗುಂಪನ್ನು ಕಂಡುಹಿಡಿದ ಮಣಿಪಾಲ ವೈದ್ಯರು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ. 27: ಮಣಿಪಾಲದ ಕೆಎಂಸಿಯ ರಕ್ತ ನಿಧಿ ವಿಭಾಗದ ಮುಖ್ಯಸ್ಥೆ ಡಾ. ಶಮೀ ಶಾಸ್ತ್ರಿ ನೇತೃತ್ವದಲ್ಲಿ ವೈದ್ಯರ ತಂಡವೊಂದು ಅಪರೂಪದ ಹೊಸ ರಕ್ತದ ಗುಂಪೊಂದನ್ನು ಪತ್ತೆ ಹಚ್ಚಿದೆ. ಪತ್ತೆ ಹಚ್ಚಿದ ಹೊಸ ರಕ್ತ ಗುಂಪಿಗೆ 'ಪಿಪಿ' ಅಥವಾ 'ಪಿ ನಲ್ ' ಎಂದು ಹೆಸರಿಸಿದೆ.

ಎ.ಬಿ.ಓ ಹಾಗೂ ಎಚ್ ಆರ್ ಡಿ ಈಗ ರಕ್ತ ಗುಂಪುಗಳಲ್ಲಿ ಸಾಮಾನ್ಯವಾಗಿರುವ ವರ್ಗೀಕರಣಗಳು. ಆದರೆ ಸುಮಾರು 200 ಕ್ಕೂ ಅಧಿಕ ಸಣ್ಣ ಸಣ್ಣ ರಕ್ತ ಗುಂಪುಗಳ ಪ್ರತಿಜನಕಗಳನ್ನು ಈಗಾಗಲೇ ಗುರುತಿಸಲಾಗಿದೆ. ಒಂದು ಸಾವಿರಕ್ಕಿಂತಲೂ ಕಡಿಮೆ ಜನರಲ್ಲಿ ಗುರುತಿಸಲಾಗುವ ವಿಶೇಷ ರಕ್ತದ ಗುಂಪನ್ನು ಅಪರೂಪದ ರಕ್ತ ಎಂದು ಕರೆಯುಲಾಗುತ್ತದೆ.

ನಿಪಾಹ್ ವೈರಸ್ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರುನಿಪಾಹ್ ವೈರಸ್ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರು

ವ್ಯಕ್ತಿಯೊಬ್ಬರಿಗೆ ತುರ್ತಾಗಿ ರಕ್ತ ನೀಡುವುದಕ್ಕೆ ಕೆಎಂಸಿಯ ರಕ್ತ ಬ್ಯಾಂಕ್ ಗೆ ಆ ವ್ಯಕ್ತಿಯ ರಕ್ತದ ಸ್ಯಾಂಪಲ್ ಅನ್ನು ಬ್ರಿಟನ್ ನ ಬ್ರಿಸ್ಟಾಲ್ ನಲ್ಲಿರುವ ಅಂತರಾಷ್ಟ್ರೀಯ ಬ್ಲಡ್ ಗ್ರೂಪ್ ರಫರೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

Manipal doctors have discovered a new type of blood group

ಪರೀಕ್ಷೆಗೆ ಒಳಪಡಿಸಿದ ಬಳಿಕ ಅದೊಂದು 'ಪಿಪಿ' ಟೈಪ್ ರಕ್ತದ ಗುಂಪೆಂದು ಖಚಿತವಾಯಿತು. ಭಾರತದಲ್ಲಿ ಪಿನಲ್ಲ ಮಾದರಿ ರಕ್ತ ಗುಂಪನ್ನು ಹೊಂದಿದ್ದು, ದಾನಿಗಳಂದ ರಕ್ತ ಸಗ್ರಹಿಸುವ ಅಗತ್ಯವಿದೆ ಎಂದರು. ತುರ್ತು ಸಂದರ್ಭಗಳಲ್ಲಿ ಈ ರಕ್ತ ಅತೀ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಡಾ. ಶಮೀ ಶಾಸ್ತ್ರೀ ಸ್ಪಷ್ಟನೆ ನೀಡಿದ್ದಾರೆ.

English summary
Manipal doctors have discovered a new type of blood group. New blood group detected is called "PP" or "P nul".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X