ಕುಂದಾಪುರ:ಲಾರಿ ಡಿಕ್ಕಿ-ಆಕ್ವಿವಾ ಸವಾರ ಸ್ಥಳದಲ್ಲೇ ಸಾವು
ಕುಂದಾಪುರ, ಜೂ.21: ದ್ವಿಚಕ್ರವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆಕ್ವಿವಾ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ಸಮೀಪದ ಬೀಜಾಡಿಯಲ್ಲಿ ನಡೆದಿದೆ.
ಕೋಟಾ ಸಮೀಪದ ಹಿರಿ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ನಿವಾಸಿ ಮಹಾಬಲೇಶ್ವರ ಭಟ್(52) ಮೃತಪಟ್ಟ ದುರ್ದೈವಿ.[ತಪ್ಪಿತು ಮತ್ತೊಂದು ದುರಂತ: ವಿದ್ಯಾರ್ಥಿಗಳು ಬಚಾವ್]

ಘಟನೆಯಾದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಡುಗೆ ವೃತ್ತಿ ಮಾಡುತ್ತಿದ್ದ ಮಹಾಬಲೇಶ್ವರ ಭಟ್ ರವರು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಂದಾಪುರ ಸಂಚಾರ ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Click it and Unblock the Notifications
