ಯಕ್ಷಗಾನಕ್ಕೂ ಬಂತು "ಮಗನೇ ಎಲ್ಲಿದ್ದೀಯಪ್ಪ"? ಡೈಲಾಗ್

ಉಡುಪಿ, ಮಾರ್ಚ್ 17: ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಾಳಯಗಳಲ್ಲಿ ನಡೆಯುವ ಘಟನಾವಳಿಗಳು ಯಕ್ಷಗಾನ ಪ್ರಸಂಗಗಳಲ್ಲಿ ವ್ಯಕ್ತವಾಗುತ್ತಿವೆ. ಇದಕ್ಕೆ ಇನ್ನೊಂದು ಸೇರ್ಪಡೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಪ್ರವೇಶ ಪ್ರಸಂಗ.

ಮಂಡ್ಯದಲ್ಲಿ ಆಯೋಜಿಸಲಾಗಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಜಾಗ್ವಾರ್' ಚಿತ್ರದ ಆಡಿಯೋ ರಿಲೀಸ್ ಸಂದರ್ಭ ಕುಮಾರಸ್ವಾಮಿ "ಮಗನೇ ಎಲ್ಲಿದ್ದೀಯಾ?" ಅಂತ ವೇದಿಕೆ ಮೇಲಿಂದ ಕರೆಯುತ್ತಾರೆ. ಈ ಸಂದರ್ಭದಲ್ಲಿ ನಿಖಿಲ್ ಜನಗಳ ಮಧ್ಯೆ ಎದ್ದು ನಿಂತು "ನಾನಿಲ್ಲಿದ್ದೀನಪ್ಪಾ" ಅಂತ ಹೇಳಿದ್ದಾರೆ. ಮಂಡ್ಯಕ್ಕೆ ನಿಖಿಲ್ ಅಭ್ಯರ್ಥಿ ಆದ್ಮೇಲೆ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Kumarswamy and Nikhil dialogue emitted in Yakshagana Prasanga

ಇದೀಗ ಯಕ್ಷಗಾನದಲ್ಲೂ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರ ಸ್ವಾಮಿ ಅವರ ನಡುವಿನ ಈ ಡೈಲಾಗ್ ಹರಿದಾಡುತ್ತಿದೆ. ಬಪ್ಪನಾಡು ಕ್ಷೇತ್ರದ ಯಕ್ಷಗಾನ ಪ್ರಸಂಗ ಕಾಪುವಿನ ಪಳ್ಳಿಯಲ್ಲಿ ಆಯೋಜಿಸಲಾಗಿತ್ತು.

Kumarswamy and Nikhil dialogue emitted in Yakshagana Prasanga

ಈ ಸಂದರ್ಭದಲ್ಲಿ ಹಾಸ್ಯ ಪಾತ್ರಧಾರಿ ಕುಮಾರಸ್ವಾಮಿ ಡೈಲಾಗ್ ಹೇಳಿ ನೆರೆದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. "ಮಗನೇ ಎಲ್ಲಿದ್ದೀಯಪ್ಪಾ"?ಅಂದಾಗ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಬಂದಿದೆ. ಹಲವಾರು ವೀಡಿಯೋಗಳಿಗೆ ನಿಖಿಲ್- ಕುಮಾರಸ್ವಾಮಿ ವೀಡಿಯೋ ಎಡಿಟ್ ಮಾಡಿ ಜನ ಟ್ರೋಲ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+