Karnataka Assembly Elections 2023: ಉಡುಪಿ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬುಧವಾರ ( ಏ 12) ಬಿಡುಗಡೆಗೊಳಿಸಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹಾಲೀ ಶಾಸಕರಿಗೆ ಟಿಕೆಟ್ ತಪ್ಪಿದಂತೆ ಎರಡನೇ ಪಟ್ಟಿಯಲ್ಲೂ ಆರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಹಾಗಾಗಿ, ಬಿಜೆಪಿಯಲ್ಲಿ ಬಂಡಾಯ/ಭಿನ್ನಮತ ತಾರಕಕ್ಕೇರಿದೆ. ಮೂಡಿಗೆರೆಯ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

Karnataka Polls 2023 : Udupi District Assembly Constituencies Party-wise Candidates List

ಮೊದಲ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ, ಬೈಂದೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನು ಮಾಡಿರಲಿಲ್ಲ. ಎರಡನೇ ಪಟ್ಟಿಯಲ್ಲಿ ಅಲ್ಲಿಗೂ ಅಭ್ಯರ್ಥಿಯನ್ನು ಘೋಷಿಸಲಾಗಿದೆ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಐದಕ್ಕೆ ಐದೂ ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಈ ಬಾರಿ ಗೆದ್ದ ಐದು ಶಾಸಕರಲ್ಲಿ ನಾಲ್ವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಹೊಸ ರಾಜಕೀಯ ಹಾದಿ ಹಿಡಿಯಲು ಮುಂದಾಗಿದೆ.

ಕುಂದಾಪುರದಲ್ಲಿ ಹಾಲೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ತಮ್ಮ ರಾಜಕೀಯ ಗುರುವಿನ ಪುತ್ರ ಕಿರಣ್ ಕೂಡ್ಗಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದರು. ಜಿಲ್ಲೆಯ ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳು ಯಾರು?

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು
ಉಡುಪಿ ಯಶಪಾಲ್ ಸುವರ್ಣ ಪ್ರಸಾದ್ ರಾಜ್ ಕಾಂಚನ್ ಘೋಷಣೆಯಾಗಿಲ್ಲ ಪ್ರಭಾಕರ್ ಪೂಜಾರಿ (ಆಪ್)
ಕಾಪು ಗುರ್ಮೆ ಸುರೇಶ್ ಶೆಟ್ಟಿ ವಿನಯ್ ಕುಮಾರ್ ಸೊರಕೆ ಘೋಷಣೆಯಾಗಿಲ್ಲ ಘೋಷಣೆಯಾಗಿಲ್ಲ
ಕಾರ್ಕಳ ವಿ.ಸುನೀಲ್ ಕುಮಾರ್ ಘೋಷಣೆಯಾಗಿಲ್ಲ ಘೋಷಣೆಯಾಗಿಲ್ಲ ಡೇನಿಯಲ್ (ಆಪ್)
ಕುಂದಾಪುರ ಕಿರಣ್ ಕುಮಾರ್ ಕೋಡ್ಗಿ ಎಂ.ದಿನೇಶ್ ಹೆಗ್ಡೆ ಘೋಷಣೆಯಾಗಿಲ್ಲ ಘೋಷಣೆಯಾಗಿಲ್ಲ
ಬೈಂದೂರು ಗುರುರಾಜ್ ಗಂಟಿಹೊಳಿ ಕೆ.ಗೋಪಾಲ ಪೂಜಾರಿ ಘೋಷಣೆಯಾಗಿಲ್ಲ ಘೋಷಣೆಯಾಗಿಲ್ಲ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+