ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಲತಾಣಗಳಲ್ಲಿ ಯುವತಿರೊಂದಿಗಿನ ಸೆಲ್ಫಿ ವೈರಲ್, ಹೋಮ್ ಗಾರ್ಡ್ ಪರಾರಿ

|
Google Oneindia Kannada News

ಉಡುಪಿ, ಮಾರ್ಚ್ 16: ಯುವಕನೋರ್ವ ಹತ್ತಾರು ಯುವತಿಯರೊಂದಿಗೆ ತೆಗೆಸಿಕೊಂಡ ಸೆಲ್ಪಿ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಕಾರ್ಕಳ ತಾಲೂಕಿನ ಹೋಮ್ ಗಾರ್ಡ್ ಎಂದು ಹೇಳಲಾಗಿದ್ದು ಈತ 10ಕ್ಕೂ ಹೆಚ್ಚು ಯುವತಿಯರನ್ನು ಯಾಮಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಈ ಪ್ರಸಂಗದ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.

ಯುವತಿಯರೊಂದಿಗೆ ಸೆಲ್ಫಿ ಪೋಟೋಗಳಲ್ಲಿ ಇರುವ ಯುವಕ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಮಂಜರಪಲ್ಕೆ ನಿವಾಸಿ ಸುಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ಹೋಮ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಎಂದು ಹೇಳಲಾಗಿದೆ.

Karkala home guards selfie with lots of girls goes viral

ಪರಿಸರದ ಹಲವಾರು ಯುವತಿಯರಿಗೆ ತಾನು ಪೊಲೀಸ್ ಎಂದು ಸುಳ್ಳು ಹೇಳಿ ಸ್ನೇಹ ಸಂಪಾದಿಸಿ ಸಂಬಂಧ ಬೆಳೆಸುತ್ತಿದ್ದ. ನಂತರ ಯುವತಿಯರನ್ನು ಯಾಮಾರಿಸಿ ಅಜ್ಞಾತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ಮಜಾ ಮಾಡುತ್ತಿದ್ದ. ಹಾಗೂ ಈ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಈತನ ಶೋಕಿ ಎಂದು ಹೇಳಲಾಗಿದೆ.

ಈತನ ಮೋಡಿ ಮಾತಿನ ಬಲೆಗೆ ಹಲವಾರು ಯುವತಿಯರು ಸಿಲುಕಿದ್ದು, ಅವರನ್ನು ರಕ್ಷಿಸಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.

ತನ್ನ ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸುಜಿತ್ ಶೆಟ್ಟಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಉಡುಪಿ ಪೊಲೀಸರು ಈ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಿದ್ದು, ಸುಜಿತ್ ಶೆಟ್ಟಿ ಬಂಧನಕ್ಕೆ ಉಡುಪಿ ಎಸ್.ಪಿ ಆದೇಶಿಸಿದ್ದಾರೆ.

English summary
A bundle of selfie photos of Sujeeth Shetty with different girls in lodges and remote areas has now gone viral on social media. It was said that the person was a police constable but later it has come to light that he is a home guard at Karkala. He has cheated many of the girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X