ಲಾಕ್ ಡೌನ್ ವಿಸ್ತರಣೆ; ಮುಂಬೈನಲ್ಲಿ ಉಡುಪಿ ಅರ್ಚಕ ಆತ್ಮಹತ್ಯೆ
ಉಡುಪಿ, ಏಪ್ರಿಲ್ 15: ನಿನ್ನೆ ಮೇ 3ರವರೆಗೂ ಲಾಕ್ ಡೌನ್ ಅನ್ನು ವಿಸ್ತರಿಸಿದ್ದು, ಊರಿಗೆ ಬರಲಾಗದೇ ಮುಂಬೈನಲ್ಲಿ ಉಡುಪಿ ಮೂಲದ ಅರ್ಚಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Recommended Video
ಆರೋಗ್ಯ ಸೇತು ಆಪ್ ನಿಂದ ಆಗುವ ಪ್ರಯೋಜನಗಳ ಬಗ್ಗೆ ಜಗದೀಶ್ ಶೆಟ್ಟರ್ ಏನ್ ಹೇಳಿದ್ದಾರೆ | Arogya setu | Stay home
ಕಾರ್ಕಳ ತಾಲೂಕಿನ ನೀರೆಬೈಲೂರಿನ ಕೃಷ್ಣ ಶಾಂತಿ (37) ಎಂಬುವರು ಮುಂಬೈನ ಕಾಂದಿವಿಲಿಯಲ್ಲಿನ ಭದ್ರಕಾಳಿ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಪೂಜೆಗೆ ತೆರಳಿದ್ದರು. ಆದರೆ ಮಾನಸಿಕ ಖಿನ್ನತೆಯಿಂದ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 3ರವರೆಗೂ ಲಾಕ್ ಡೌನ್ ಅನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅತ್ತ ದೇವಸ್ಥಾನದಲ್ಲಿ ಪೂಜೆ ನಡೆಯದೇ, ಇತ್ತ ಊರಿಗೂ ಬರಲಾಗದೇ ಅವರು ಸಂಕಟ ಪಡುತ್ತಿದ್ದುದಾಗಿ ತಿಳಿದುಬಂದಿದೆ. ಊರಿಗೆ ಬರಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತಗೊಂಡಿದೆ. ಇವರು ಮಾ.17 ರಂದು ಮುಂಬೈಗೆ ತೆರಳಿದ್ದರು.












Click it and Unblock the Notifications