ಯಕ್ಷಗಾನ ಕಲೆಯ ತಪ್ಪಾದ ಬಳಕೆ; "ರಂಗನಾಯಕ"ನ ವಿರುದ್ಧ ಕರಾವಳಿಗರು ಗರಂ

ಉಡುಪಿ, ಅಕ್ಟೋಬರ್ 11: ಮಠ, ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮೇಲೆ ಕರಾವಳಿಗರು ಗರಂ ಆಗಿದ್ದಾರೆ.

ಹತ್ತು ವರ್ಷದ ಬಳಿಕ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ರಂಗನಾಯಕ ಚಿತ್ರದ ಟೀಸರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿತ್ತು. ಬಡಗುತಿಟ್ಟು ಯಕ್ಷಗಾನದ ಹಿಮ್ಮೇಳದಲ್ಲಿ ಕಮಲ‌ ಮತ್ತು ಕೈ ಪಕ್ಷದ ನಡುವೆ ಜಗ್ಗೇಶ್ ನಾಟಕೀಯವಾಗಿ ವರ್ತಿಸುವ ಸನ್ನಿವೇಶದೊಂದಿಗೆ ಆರಂಭವಾಗಿರುವ ಟೀಸರ್ ಉದ್ದಕ್ಕೂ ಕರಾವಳಿಯ ಗಂಡು ಕಲೆಯ ತಪ್ಪಾದ ಬಳಕೆ ಮಾಡಿದ್ದಾರೆಂಬುದು ಯಕ್ಷ ಪ್ರೇಮಿಗಳಿಗೆ ಬೇಸರ ತಂದಿದೆ.

Karavali People Angry Over Ranganayaka Teaser

ಅದರಲ್ಲೂ ಹಿಮ್ಮೇಳದ ಭಾಗವತಿಕೆಯಲ್ಲಿ ಇಂಗ್ಲೀಷ್ ಪ್ರಯೋಗ ಮಾಡಿರುವ ಕುರಿತು ಕರಾವಳಿಗರು ಕೆಂಡಾಮಂಡಲವಾಗಿದ್ದಾರೆ. ಇದೇ ವಿಚಾರವಾಗಿ ಕರಾವಳಿಯ ನೂರಾರು ವರ್ಷ ಇತಿಹಾಸವಿರುವ ಯಕ್ಷಗಾನ ಕಲೆಯನ್ನು ಕರ್ಮಶಿಯಲ್ ಉದ್ದೇಶಕ್ಕೆ ತಿರುಚಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+