ಆರ್ಥಿಕ ಸುಭದ್ರ ರಾಷ್ಟ್ರವಾಗುತ್ತಿರುವ ಭಾರತದ ಜನರಿಗೆ ಭದ್ರ ನೆಲೆ ಬೇಕು

Posted By: Nayana
Subscribe to Oneindia Kannada

ಉಡುಪಿ, ನವೆಂಬರ್ 22 : ಭಾರತವು 2030ರ ವೇಳೆಗೆ ತೃತೀಯ ಅತಿದೊಡ್ಡ ಆರ್ಥಿಕ ಸುಭದ್ರ ರಾಷ್ಟ್ರವಾಗಲಿದ್ದು, ಎಲ್ಲರಿಗೂ ಶೀಕ್ಷಣ, ಸೂರು, ಮೂಲಸೌಲಭ್ಯ ನೀಡುವತ್ತ ಗಮನಹರಿಸಬೇಕು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಟಿ.ವಿ ಮೋಹನ್ ದಾಸ್ ಪೈ ಹೇಳಿದರು.

ಪ್ರವೀಣ್ ರಾವ್ ಸಂಬಳ ವಿವಾದ: ಇನ್ಫಿ ಮೂರ್ತಿ ಬೆಂಬಲಕ್ಕೆ ನಿಂತ ಪೈ

ಉಡುಪಿಯ ಕಲ್ಸಂಕ ರಾಯಲ್ ಗಾರ್ಡನ್ ನಲ್ಲಿ ನಡೆಯುವ ಧರ್ಮ ಸಂಸತ್ ಅಂಗವಾಗಿ ಸಂಪರ್ಕ ಕಾರ್ಯಾಲಯವನ್ನು ಮಂಗಳವಾರ(ನ.21)ರಂದು ಉದ್ಘಾಟಿಸಿ ಮಾತನಾಡಿದರು. ಆಯಾ ದೇಶಗಳಲ್ಲಿ ಬಹುಸಂಖ್ಯಾತ ಧರ್ಮ ಮೆರೆದರೆ, ಭಾರತದಲ್ಲಿ ಹಿಂದೂ ಎಂದರೆ ಕೋಮುವಾದಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ಹಿಂದೂ ಸಮಾಜದಲ್ಲಿ ಎಲ್ಲರೂ ಒಂದಾದರೆ ರಾಜಕೀಯ ಒಡೆದು ಆಳುವ ನೀತಿಯನ್ನು ಮೆಟ್ಟಿ ನಿಲ್ಲಬಹುದು ಎಂದರು.

India will be World's third biggest economy by 2030: Mohandas pai

ಸಮಾಜದ ಸಮಸದಯೆಗಳಿಗೆ ಪ್ರಶನೆ, ಪರಿಹಾರ ಜತೆಗೆ ಯುವಜನರಲ್ಲಿ ಧರ್ಮದ ಅರಿವು ಮೂಡಿಸಬೇಕು. ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಪ್ರಮಾಣ ಸ್ವಾತಂತ್ರ್ಯ ಬಂದ ಸಂದರ್ಭ ಶೇ.85ರಷ್ಡಿದ್ದರೆ ಈ ಶೇ. 77ಕ್ಕೆ ಇಳಿದಿದೆ. ಮತಾಂತರದ ಪರಿಣಾಮ ಕ್ರೈಸ್ತರ ಸಂಖ್ಯೆ 3.50 ಕೋಟಿ ಇದ್ದರೂ 7.5ಕೋಟಿಗೇರಿದೆ. ಮತಾಂತರಕ್ಕೆ ಅಮೆರಿಕ, ಯುರೋಪ್ 17,500 ಕೋಟಿ ರೂ. ಹರಿದುಬರುತ್ತಿದೆ ಎಂದು ಹೇಳಿದರು.

'ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು'

ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥರು, ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ ಕೇಂದ್ರೀಯ ಪರಿಷತ್ ನ ಕಾರ್ಯದರ್ಶಿ ರಾಜೇಂದ್ರ ಪಂಕಜ್, ವಿಹಿಂಪ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್, ವಿಹಿಂಪ ಜಿಲ್ಲಾಧ್ಯಕ್ಷ ಪಿ. ವಿಲಾಸ್ ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manipal Global Education chairman Mohandas pai opined that India will emerge as World's third biggest econimic power by 2030,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ