'ಲಿಕ್ಕರ್ ದಂಧೆಯ ಸಂತ್ರಸ್ತೆ ನಾನು' - ಅನುಪಮಾ ಶೆಣೈ

Subscribe to Oneindia Kannada

ಉಡುಪಿ, ಫೆಬ್ರವರಿ 13: "ನೀವು ಮದ್ಯವ್ಯಸನಿಗಳ ಸಂತ್ರಸ್ತರಾದರೆ, ನಾನು ಲಿಕ್ಕರ್ ದಂಧೆಯ ಸಂತ್ರಸ್ತೆ. ಹೀಗಾಗಿ ನಾನು ಹುದ್ದೆಯನ್ನು ಕಳೆದುಕೊಂಡಿದ್ದೇನೆ," ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ.

ಅವರು ಉಡುಪಿಯ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹವನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.[ರೋಚಕ ಕಥೆಗೆ ಎಂಥ ತಿರುವು?! ಅಂದಹಾಗೆ, ಯಾರೀ ಅನುಪಮ?]

‘I am the victim of liquor lobby’ - Former DYSP Anupama Shenoy

'ಕೂಡ್ಲಿಗಿಯಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಲಿಕ್ಕರ್ ಲಾಬಿ ವಿರುದ್ಧ ಸಮರ ಸಾರಿದ್ದೆ. ಹೀಗಾಗಿ ನಾನು ವರ್ಗಾವಣೆ ಶಿಕ್ಷೆ ಅನುಭವಿಸಬೇಕಾಯಿತು. ಆದರೂ ಅದರ ವಿರುದ್ಧ ಹೋರಾಟ ಮುಂದುವರೆಸಿದೆ. ಬಳಿಕ ಎರಡು ರಾಜೀನಾಮೆ ಪತ್ರ ಬರೆದೆ. ಅದರಲ್ಲಿ ಒಂದು ಪತ್ರ ಎಲ್ಲಿಗೆ ಹೊಯಿತು ಎಂಬುದರ ಬಗ್ಗೆ ಸುದ್ದಿಯೇ ಇಲ್ಲ' ಎಂದರು.[ಕಾಮಗಾರಿ ಮುನ್ನ ಟೋಲ್ ಸಂಗ್ರಹ: ಇಂದು (ಫೆ. 13) ಉಡುಪಿ ಬಂದ್]

'ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ಮುಖ್ಯಮಂತ್ರಿಗಳೇ ಗುರಿಯನ್ನು ನೀಡುತ್ತಾರೆ. ಆ ಮೂಲಕ ಮದ್ಯ ಸೇವಿಸುವುದಕ್ಕೆ ಸರಕಾರವೇ ಉತ್ತೇಜನ ನೀಡುತ್ತಿದೆ. ಹೀಗಿರುವಾಗ ಜನ ಮದ್ಯ ವ್ಯಸನಿಗಳಾಗದೆ ಇರುತ್ತಾರೆಯೇ..? ಎಂದು ಅವರು ಪ್ರಶ್ನಿಸಿದರು.

ಮದ್ಯ ಮಾರಾಟಕ್ಕೆ ತೋರುವ ಕಾಳಜಿ ಉದ್ಯೋಗ ಖಾತ್ರಿಯಂತಹ ಯೋಜನೆಗಳಲ್ಲಿ ತೋರಿಸಲ್ಲ ಎಂದು ಶೆಣೈ ಆಕ್ರೋಶ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
“I had fight against liquor lobby. So that I lost my job,” said former Kudligi DYSP Anupama shenoy in her speech at alcoholic addict awareness program in Udupi.
Please Wait while comments are loading...