ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವುದು ಅಶಿಸ್ತು; ಶಿಕ್ಷಣ ಸಚಿವ ಬಿ. ಸಿ. ನಾಗೇಶ್

ಬೆಂಗಳೂರು, ಜನವರಿ 20; ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ತರಗತಿಯ ಸಮಯದಲ್ಲಿಯೂ ಸ್ಕಾರ್ಫ್ (ಹಿಜಾಬ್) ಧರಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಡಲಾಗಿದೆ. ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಈ ಕುರಿತು ಬೇಡಿಕೆ ಇಟ್ಟು ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿದಿದ್ದಾರೆ.

ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ಕಾಲೇಜು ಗೇಟ್‌ ಬಳಿ 'ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ' ಎಂಬ ಫಲಕಗಳೊಂದಿಗೆ ಪ್ರತಿಭಟನೆ ನಡೆಸಿದರು. ಈ ಬಳಿಕ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಈಗ ಶಿಕ್ಷಣ ಸಚಿವರು ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರವೂ ಕೂಡಾ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದರು. ತರಗತಿಗೆ ಪ್ರವೇಶ ಇಲ್ಲದ ಕಾರಣ ಹೊರಗುಳಿದರು. ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿದಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಈ ರೀತಿ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.

Hijab Row: Wearing Hijab Is Indiscipline Says Education Minister BC Nagesh on Students’ Protest

"ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದೇವೆ. ಆದರೆ, ತರಗತಿಗಳಿಗೆ ಹಾಜರಾಗದಂತೆ ಮತ್ತೊಮ್ಮೆ ನಮ್ಮನ್ನು ನಿರ್ಬಂಧಿಸಲಾಗಿದೆ" ಎಂದು ವಿದ್ಯಾರ್ಥಿನಿ ಅಲಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

"ಹಿಜಾಬ್ ಧರಿಸಿದ್ದಕ್ಕಾಗಿ ನಮಗೆ 20 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ನಮಗೆ ನ್ಯಾಯ ಬೇಕು. ಸಂವಿಧಾನ ನಮಗೆ ಹಿಜಾಬ್ ಧರಿಸುವ ಹಕ್ಕು ನೀಡಿದೆ, ಕಾಲೇಜು ಅದನ್ನು ಏಕೆ ತಡೆಯುತ್ತಿದೆ? ಎಂದು ವಿದ್ಯಾರ್ಥಿನಿ ಮುಸ್ಕಾನ್ ಜೈನಾಬ್ ಪ್ರಶ್ನಿಸಿದ್ದಾರೆ.

"ನಮ್ಮ ಮನೆಯವರು ತುಂಬಾ ಮನವಿ ಮಾಡಿದ್ದಾರೆ. ನಮಗೆ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನಾನು ಪ್ರಥಮ ಪಿಯುಸಿಯಲ್ಲಿಯೂ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬಂದಿದ್ದೇವೆ. ಆಗ ಬಲವಂತದಿಂದ ಸ್ಕಾರ್ಫ್ ತೆಗೆಸಿದರು. ನಾವು ಈಗ ಹೋರಾಟ ಮಾಡುತ್ತಿರುವುದರಿಂದ ಪ್ರಾಂಶುಪಾಲರು ನಮಗೆ ಹಿಂಸೆ ನೀಡುತ್ತಿದ್ದಾರೆ" ಎಂದು ವಿದ್ಯಾರ್ಥಿನಿ ಆಲಿಯಾ ಅಸದಿ ಹೇಳಿದ್ದಾರೆ.

ಶಿಕ್ಷಣ ಸಚಿವರ ಹೇಳಿಕೆ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು ಮಾತನಾಡಿದ್ದು, "ಈ ಅಭ್ಯಾಸವು ಅಶಿಸ್ತು ಆಗಿದೆ ಮತ್ತು ಶಾಲೆಗಳು ಮತ್ತು ಕಾಲೇಜುಗಳು ಧರ್ಮವನ್ನು ಆಚರಿಸುವ ಸ್ಥಳವಲ್ಲ" ಎಂದು ತಿಳಿಸಿದ್ದಾರೆ.

"ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಕೆಲವು ಜನರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. 2023ರಲ್ಲಿ ಚುನಾವಣೆ ಹಿನ್ನಲೆಯಲ್ಲಿ ಅನಗತ್ಯವಾಗಿ ಗೊಂದಲ ಎಬ್ಬಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈಗ ಸಾಂವಿಧಾನಿಕ ಹಕ್ಕುಗಳನ್ನು ಏಕೆ ಅಭ್ಯಾಸ ಮಾಡಲು ಬಯಸುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಆದರೆ ವಿದ್ಯಾರ್ಥಿಗಳು ನಾವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಪ್ರಭಾವಿತರಾಗಿಲ್ಲ. ನಾವು ಅದರ ಭಾಗವಾಗಿಲ್ಲ. ನಮಗೆ ಸಕಾರಾತ್ಮಕವಾದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ನಾವು ಸಿಎಫ್ಐ ಸಂಪರ್ಕಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಚಿವ ಬಿ. ಸಿ. ನಾಗೇಶ್, "ಕಾಲೇಜಿನಲ್ಲಿನಲ್ಲಿನ ವಸ್ತ್ರ ಸಂಹಿತೆ ನಿಯಮಗಳು 1985ರಿಂದ ಜಾರಿಯಲ್ಲಿದೆ ಮತ್ತು ಈ ಪ್ರತಿಭಟನೆಗಳು ಕೇವಲ 15-20 ದಿನಗಳ ಹಿಂದೆ ಆರಂಭವಾಗಿವೆ" ಎಂದು ಹೇಳಿದ್ದಾರೆ.

"ಕಾಲೇಜಿನಲ್ಲಿ ದಾಖಲಾದ 100ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಮತ್ತು ಈ ವಿದ್ಯಾರ್ಥಿಗಳು ಮಾತ್ರ ವಸ್ತ್ರ ಸಂಹಿತೆ ಪಾಲಿಸಲು ಬಯಸುವುದಿಲ್ಲ. ಶಾಲೆಯು ಧರ್ಮವನ್ನು ಅಭ್ಯಾಸ ಮಾಡುವ ಸ್ಥಳವಲ್ಲ" ಎಂದರು.

"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ. ವಿದ್ಯಾರ್ಥಿಗಳು ನಿಯಮವನ್ನು ಅನುಸರಿಸಿದ್ದರು. ಆದರೆ ಈಗ ಅವರಿಗೆ ಸಮಸ್ಯೆ ಆಗಿದೆ. ಈಗ ಸಾಂವಿಧಾನಿಕ ಹಕ್ಕುಗಳನ್ನು ಪಾಲಿಸಲು ಅವರು ಬಯಸುತ್ತಾರೆ. ಅಶಿಸ್ತು ಹಕ್ಕಾಗುವುದಿಲ್ಲ" ಎಂದು ಸಚಿವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+