ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಜಾಬ್‌ ನಿಷೇಧಕ್ಕೆ ವಿರೋಧ ಮಾಡಿದ ಹುಡುಗಿಯರು ಭಯೋತ್ಪಾದನಾ ಸಂಸ್ಥೆಯ ಸದಸ್ಯರು: ಬಿಜೆಪಿ ನಾಯಕ

|
Google Oneindia Kannada News

ಉಡುಪಿ, ಮಾರ್ಚ್ 17: ಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ನೀಡಿದೆ. ಈ ನಡುವೆ ಹಿಜಾಬ್ ನಿಷೇಧಕ್ಕೆ ಸವಾಲು ಹಾಕಿದ ಹುಡುಗಿಯರು ಭಯೋತ್ಪಾದನಾ ಸಂಸ್ಥೆಯ ಸದಸ್ಯರು ಎಂದು ಬಿಜೆಪಿ ನಾಯಕರೋರ್ವರು ಹೇಳಿದ್ದಾರೆ.

ಹಿಜಾಬ್ ನಿಷೇಧದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿರುವ ಹುಡುಗಿಯರು 'ದೇಶ ವಿರೋಧಿಗಳು' ಮತ್ತು 'ಭಯೋತ್ಪಾದಕ ಸಂಘಟನೆಯ ಸದಸ್ಯರು' ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶಪಾಲ್ ಸುವರ್ಣ ಎಂದಿದ್ದಾರೆ.

ಕುರಾನ್ ಹೇಳಿದಂತೆ ನಡೆಯುತ್ತೇವೆ, ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ; ಉಡುಪಿ ವಿದ್ಯಾರ್ಥಿನಿಯರುಕುರಾನ್ ಹೇಳಿದಂತೆ ನಡೆಯುತ್ತೇವೆ, ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ; ಉಡುಪಿ ವಿದ್ಯಾರ್ಥಿನಿಯರು

"ತಾವು ವಿದ್ಯಾರ್ಥಿಗಳಲ್ಲ, ಆದರೆ ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಹುಡುಗಿಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ," ಎಂದು ಹೈಕೋರ್ಟ್ ತೀರ್ಪಿನ ಬಳಿಕ ವಿದ್ಯಾರ್ಥಿನಿಯರ ಅಸಮಾಧಾನವನ್ನು ಉಲ್ಲೇಖ ಮಾಡಿ ಬಿಜೆಪಿ ನಾಯಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

Hijab Row: Girls Who Challenged Hijab Ban Are Members of Terror Body Says BJP Leader

ವಿದ್ಯಾರ್ಥಿಗಳ ಹೇಳಿಕೆಯಿಂದ ನ್ಯಾಯ ನಿಂದನೆ

"ತಾವು ವಿದ್ಯಾರ್ಥಿಗಳಲ್ಲ, ಆದರೆ ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಹುಡುಗಿಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೈಕೋರ್ಟ್ ತೀರ್ಪಿನ ವಿರುದ್ಧ ಹೇಳಿಕೆ ನೀಡುವ ಮೂಲಕ ವಿದ್ವಾಂಸ ನ್ಯಾಯಮೂರ್ತಿಗಳನ್ನು ಕಡೆಗಣಿಸುತ್ತಿದ್ದಾರೆ. ಅವರ ಹೇಳಿಕೆ ನ್ಯಾಯಾಂಗ ನಿಂದನೆಗೆ ಸಮಾನವಾಗಿದೆ," ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುವರ್ಣ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Karnataka Bandh : ಹೈಕೋರ್ಟ್ ತೀರ್ಪಿಗೆ ಬೇಸರ; ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ ಮುಸ್ಲಿಂ ಸಂಘಟನೆKarnataka Bandh : ಹೈಕೋರ್ಟ್ ತೀರ್ಪಿಗೆ ಬೇಸರ; ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ ಮುಸ್ಲಿಂ ಸಂಘಟನೆ

"ಈ ವಿದ್ಯಾರ್ಥಿಗಳು ವಿದ್ವಾಂಸ ನ್ಯಾಯಾಧೀಶರು ನೀಡಿದ ತೀರ್ಪನ್ನು ರಾಜಕೀಯ ಪ್ರೇರಿತ ಮತ್ತು ಕಾನೂನಿಗೆ ವಿರುದ್ಧವೆಂದು ಕರೆಯುವಾಗ ನಾವು ಅವರಿಂದ ದೇಶಕ್ಕಾಗಿ ಏನನ್ನು ನಿರೀಕ್ಷಿಸಬಹುದು," ಎಂದು ಪ್ರಶ್ನಿಸಿದ ಬಿಜೆಪಿ ನಾಯಕ, ಅವರು ದೇಶವಿರೋಧಿಗಳು ಎಂಬುದನ್ನು ಮಾತ್ರ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ವಿದ್ಯಾರ್ಥಿನಿಯರ ಹೇಳಿಕೆ

ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು, ಕುರಾನ್ ಹೇಳಿದಂತೆ ನಾವು ನಡೆಯುತ್ತೇವೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಜಾಬ್ ವಿದ್ಯಾರ್ಥಿನಿ ಆಲಿಯಾ ಅಸಾದಿ, "ಹೈಕೋರ್ಟ್‌ನಲ್ಲಿ ನಮಗೆ ಹಕ್ಕು ಸಿಗುತ್ತದೆ ಅನ್ನುವ ‌ನಂಬಿಕೆ ಇತ್ತು. ಆದರೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯ ಸಿಗುವವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ. ಕುರಾನ್‌ನಲ್ಲಿ ಹೇಳಿರುವುದರಿಂದ ನಾವು ಹಿಜಾಬ್‌ಗೆ ಶಿಕ್ಷಣ ತ್ಯಾಗ ಮಾಡುತ್ತಿದ್ದೇವೆ. ನಾವು ಇನ್ನು ಮುಂದೆ ನ್ಯಾಯಕ್ಕಾಗಿ ಹೋರಾಟ ‌ಮಾಡುತ್ತೇವೆ,'' ಎಂದು ತಿಳಿಸಿದ್ದಾರೆ.

ಇನ್ನು ಹೈಕೋರ್ಟ್ ತೀರ್ಪಿನ ಬಳಿಕ ವಿದ್ಯಾರ್ಥಿನಿಯರು ನೀಡಿದ್ದ ಹೇಳಿಕೆಗೆ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ವರ್ತನೆ ಸರಿ ಅಲ್ಲ, ಅವರಿಗೆ ಮಾರ್ಗದರ್ಶನ ಅಗತ್ಯವಿದೆ. ಸುದ್ದಿಗೋಷ್ಠಿಗೆ ಉತ್ತೇಜಿಸಿದ್ದು ಸರಿ ಅಲ್ಲ ಎಂದಿದ್ದಾರೆ.

ಹೈಕೋರ್ಟ್ ತೀರ್ಪಿನಿಂದ ಆತಂಕ ಪಡುವ ಅಗತ್ಯವಿಲ್ಲ. ಸಮವಸ್ತ್ರ ಇರುವಲ್ಲಷ್ಟೇ ಆದೇಶ ಪಾಲನೆ ಮಾಡಲು ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಹೋಗಲು ಸಹ ನಮಗೆ ಅವಕಾಶ ಇದೆ. ಈಗಾಗಲೇ ಕಪಿಲ್ ಸಿಬಲ್ ಜೊತೆ ಮಾತನಾಡಲಾಗಿದೆ. ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ ಎಂದು ಎಲ್ಲ ನಾಯಕರಿಗೆ ಅಮಿರ್ ಎ ಷರಿಯಾತ್ ಸೂಚನೆ ನೀಡಿದ್ದಾರೆ.

ಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಂಗಳವಾರ (ಮಾ. ​15) ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ನೀಡಿದೆ. ಆದರೆ ಕೋರ್ಟ್ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿರುವ​ ಮುಸ್ಲಿಂ ಸಂಘಟನೆ ಮುಖಂಡರು, ನಾಳೆ (ಗುರುವಾರ) ಕರ್ನಾಟಕ ಬಂದ್​ಗೆ ಕರೆ ನೀಡಿದ್ದಾರೆ. ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್​ಗೆ ಘೋಷಣೆ ಮಾಡಿದ್ದಾರೆ. ಮಾರ್ಚ್​ 17 ಇಡೀ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ವ್ಯಾಪಾರ, ವಹಿವಾಟು ಬಂದ್ ಮಾಡಲು ಸೂಚನೆ ನೀಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಅಪ್ಪುಗಾಗಿ ಅಭಿಮಾನಿಗಳು ಇವತ್ತು ಏನೇನ್ ಮಾಡಿದ್ದಾರೆ ಗೊತ್ತಾ? | Oneindia Kannada

English summary
Hijab Row: Girls who challenged hijab ban are members of terror body Says BJP leader Yashpal Suvarna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X