5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ

Recommended Video

      ಎಚ್ ಡಿ ಕುಮಾರಸ್ವಾಮಿ ಇನ್ನು 5 ದಿನಗಳ ಕಾಲ ಯಾರಿಗೂ ಸಿಗೋದಿಲ್ಲ | Oneindia Kannada

      ಉಡುಪಿ, ಏಪ್ರಿಲ್ 29 : ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಪುವಿಗೆ ಆಗಮಿಸಿದ್ದಾರೆ. 5 ದಿನಗಳ ಕಾಲ ಅವರು ಆಯುರ್ವೇದ ಚಿಕಿತ್ಸೆ ಪಡೆಯಲು ಅವರು ಭಾನುವಾರ ರಾತ್ರಿ ಆಗಮಿಸಿದರು.

      ಬೆಂಗಳೂರಿನಲ್ಲಿ ಭಾನುವಾರ ಹಲವು ಸಭೆಗಳಲ್ಲಿ ಪಾಲ್ಗೊಂಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ರಾತ್ರಿ ಉಡುಪಿಯ ಕಾಪುವಿಗೆ ಆಗಮಿಸಿದರು. ಕಾಪು ಸಮೀಪದ ಆಯುರ್ವೇದ ಚಿಕಿತ್ಸಾಲಯದಲ್ಲಿ ಅವರು ಚಿಕಿತ್ಸೆಯನ್ನು ಪಡೆಯಲಿದ್ದಾರೆ.

      ಬೆಂಗಳೂರಿನಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕಾಪುವಿಗೆ ಆಗಮಿಸಿದ್ದಾರೆ. ಇಬ್ಬರು ಸಹ ಆಯುರ್ವೇದ ಚಿಕಿತ್ಸಾಲಯದಲ್ಲಿ 5 ದಿನಗಳ ಕಾಲ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಚಿಕಿತ್ಸಾಲಯದ ಸುತ್ತಮುತ್ತ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ.

      vHD Kumaraswamy

      ಏಪ್ರಿಲ್ 23ರಂದು ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ಮುಗಿದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಕಾಪುವಿನ ಆಯುರ್ವೇದ ಚಿಕಿತ್ಸಾಲಯಕ್ಕೆ ದಾಖಲಾಗಿದ್ದರು.

      ಆದರೆ, ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಜೆಡಿಎಸ್ ನಾಯಕರು ಮೃತಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಈಗ ಪುನಃ ಚಿಕಿತ್ಸೆ ಮುಂದುವರೆಸಲು ಕಾಪುವಿಗೆ ಆಗಮಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+