ಉಡುಪಿಯಲ್ಲಿ ಜನ್ಮಾಷ್ಠಮಿ ಸಂಭ್ರಮದಲ್ಲಿ ಪಾಲ್ಗೊಂಡ ಶಿವರಾಜ್ ಕುಮಾರ್

Posted By:
Subscribe to Oneindia Kannada

ಉಡುಪಿ, ಸೆಪ್ಟೆಂಬರ್ 14: ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಚ್ಚರಿ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಪಾಲ್ಗೊಂಡರು.

ಮಂಗಳೂರಿನ ಕದ್ರಿಯಲ್ಲಿ ಸೃಷ್ಟಿಯಾದ ನಂದಗೋಕುಲ

ಉಡುಪಿಯಲ್ಲಿ ಶ್ರೀಕೃಷ್ಣನ ಜನ್ಮಾಷ್ಠಮಿ , ವಿಟ್ಲಪಿಂಡಿ ಸಂಭ್ರಮ ಮನೆ ಮಾಡಿದ್ದು, ಇಲ್ಲಿಯೇ ಸುತ್ತ ಮುತ್ತ ಸಿನೆಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ಹ್ಯಾಟ್ರೀಕ್ ಹೀರೋ ಶಿವರಾಜ್ ಕುಮಾರ್ ಮಠಕ್ಕೆ ದಿಢೀರ್ ಭೇಟಿ ನೀಡಿ ಸಂಭ್ರಮದಲ್ಲಿ ಪಾಲ್ಗೊಂಡರು.

Hat-Trick hero Shivarajkumar visits Udupi Krishna Matt for Janmashtami celebrations

ಶ್ರೀಕೃಷ್ಣನ ದರ್ಶನ ಪಡೆದು ಪೂಜೆ ಸಲ್ಲಿಸಿದ ಶಿವಣ್ಣ ತದನಂತರ ಪೇಜಾವರ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಉಡುಪಿಯಲ್ಲಿ ಬುಧವಾರ ಕೃಷ್ಣಾಷ್ಟಮಿ, ಗುರುವಾರ ವಿಟ್ಲಪಿಂಡಿ ಉತ್ಸವ

ಈ ವೇಳೆ ಮಠದ ಆವರಣದಲ್ಲಿ ನಡೆಯುತ್ತಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯ ಪುಟಾಣಿಗಳ ಜೊತೆ ಕೆಲಕಾಲ ಬೆರೆತು ಸಂಭ್ರಮಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶಿವಣ್ಣರನ್ನು ಕಂಡು ಸೆಲ್ಫಿಗಾಗಿ ಮುಗಿಬಿದ್ದರು.

Hat-Trick hero Shivarajkumar visits Udupi Krishna Matt for Janmashtami celebrations

ಉಡುಪಿ ಜಿಲ್ಲೆಯ ವಿವಿದೆಡೆ ಭರದಿಂದ ಸಾಗುತ್ತಿರುವ ಟಗರು ಚಿತ್ರೀಕರಣದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಜಿಲ್ಲೆಯಲ್ಲಿ ತಂಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hat-Trick Hero Shivarajkumar visited Udupi Krishna Matt for Sri Krishna Janmashtami celebrations here on Sep 13. Special pooja was offered at Krishna Math and also took the blessings of Pejawar Shree.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ