ಹಾಲಾಡಿಯೇ ನಮ್ಮ ನಾಯಕ: ಕಾರ್ಯಕರ್ತರ ವಿರುದ್ಧ ಹರಿಹಾಯ್ದ ಬಿಎಸ್ ವೈ
Recommended Video

ಉಡುಪಿ, ನವೆಂಬರ್ 13: ಬಿಜೆಪಿಯ ಪರಿವರ್ತನಾ ಯಾತ್ರೆ ಇಂದು(ನ.13) ಕುಂದಾಪುರದಲ್ಲಿದ್ದು, ಬಿಜೆಪಿ ನಾಯಕರ ನೇತೃತ್ವದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಹೈಡ್ರಾಮಾ ನಡೆದು ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು.
ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಸೇರುವುದನ್ನು ವಿರೋಧಿಸಿ ಕೆಲ ಬಿಜೆಪಿ ಕಾರ್ಯಕರ್ತರಿಂದ ಬಹಿರಂಗ ಆಕ್ರೋಶ ವ್ಯಕ್ತವಾಯಿತು. ಹಾಲಾಡಿ ಬಣ ಮತ್ತುಮೂಲ ಬಿಜೆಪಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಲಾಡಿ ವಿರೋಧಿಗಳ ವಿರುದ್ಧ ಕಿಡಿಕಾರಿದರು. "ಹಾಲಾಡಿಯೇ ನಮ್ಮ ನಾಯಕ, ಮುಂದಿನ ಶಾಸಕ, ಒಪ್ಪದವರು ಪಕ್ಷ ಬಿಟ್ಟು ಹೋಗಿ" ಎಂದು ಯಡಿಯೂರಪ್ಪ ವೇದಿಕೆಯಲ್ಲೇ ಹರಿಹಾಯ್ದರು. ಈ ಘಟನೆಯಿಂದಾಗಿ ಗೆಲಕಾಲ ಸಮಾವೇಶದಲ್ಲಿ ಗೊಂದಲದ ವಾತಾವರಣ ಏರ್ಪಟ್ಟಿತ್ತು.
ಹಾಲಾಡಿಯವರು ಬಿಜೆಪಿ ಸೇರ್ಪಡೆಯನ್ನು ವಿರೋಧಿಸಿ ಕೆಲವೊಂದು ಬಿಜೆಪಿ ಕಾರ್ಯಕರ್ತರು ಬ್ಯಾನರ್ ಹಿಡಿದು ಪರಿವರ್ತನಾ ಯಾತ್ರೆಯ ಬಹಿರಂಗ ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿಜೆಪಿ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆಗೂ ಮುಂದಾಗಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೊಗುತ್ತಿರುವುದನ್ನು ಮನಗಂಡ ಪೊಲೀಸ್ ಅಧಿಕಾರಿಗಳು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.












Click it and Unblock the Notifications