ಜರ್ಮನಿಯ ಹುಡುಗಿ-ಹೆಜಮಾಡಿಯ ಹುಡುಗನಿಗೆ ಲವ್ವು, ಮದುವೆ...

By: ಐಸಾಕ್ ರಿಚರ್ಡ್
Subscribe to Oneindia Kannada

ಉಡುಪಿ, ಜೂನ್ 19: ಬೆಟ್ಟದ ನೆಲ್ಲಿಕಾಯಿ ಹಾಗೂ ಸಮುದ್ರದ ಉಪ್ಪಿಗೂ ಎಲ್ಲಿಂದ ಎಲ್ಲಿಗೆ ನಂಟು? ಅದೇ ರೀತಿ ಉದಾಹರಣೆ ಆಗಬಲ್ಲಂಥ ವರದಿಯೊಂದು ನಿಮ್ಮೆದುರಿಗಿದೆ. ಕನ್ನಡಿಗರೊಬ್ಬರು ಜರ್ಮನಿಯ ಹುಡುಗಿಯೊಂದಿಗೆ ಭಾನುವಾರ ಮದುವೆಯಾಗಿದ್ದಾರೆ. ಉಡುಪಿಯ ಶಾಮಿಲಿ ಸಭಾಂಗಣದಲ್ಲಿ ಶುಭ ಮುಹೂರ್ತ ಕೂಡಿಬಂದಿದೆ.

ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಭಾರತ್ ಕುಮಾರ್ ಎಂಬವರು ಜರ್ಮನ್ ಮೂಲದ ಚೆಲುವೆ ರೆಬೆಕಾ ಮರಿಯಾ ಅವರನ್ನು ಭಾನುವಾರ ಹಿಂದೂ ಸಂಪ್ರದಾಯದಂತೆ ಕೈ ಹಿಡಿದಿದ್ದಾರೆ.

ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ

ಉಡುಪಿ ಜಿಲ್ಲೆಯ ಹೆಜಮಾಡಿ ಕರ್ಕೇರ ಕಾಂಪೌಂಡ್ ಮಾತಾ ಅದ್ಭುತ ಕೃಪಾ ವಾಸಿಗಳಾದ ಕರುಣಾಕರ್ ಕರ್ಕೇರ - ಶಾರದಾ ದಂಪತಿ ಪುತ್ರ ಭಾರತ್ ಕುಮಾರ್ ವಿದೇಶಿ ಮೂಲದ ಪ್ರವಾಸಿ ಹಡಗಿನಲ್ಲಿ ಫುಡ್ ಅಂಡ್ ಬೆವರೇಜ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ಅದೇ ಹಡಗಿನಲ್ಲಿ ರೆಬೆಕಾ ಆರ್ಟ್ ಗ್ಯಾಲರಿ ಮಾಲಕಿ.

ಕುಂದಾಪುರದಲ್ಲಿ "ಸಿಂಪಲ್ಲಾಗ್ ಒಂದು ಮದುವೆ ಸ್ಟೋರಿ"

ಭವಿಷ್ಯದಲ್ಲಿ ಭಾರತದಲ್ಲೇ ವಾಸ್ತವ್ಯ ಹೂಡುವ ಹಾಗೂ ತುಳು ಕಲಿಯುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ರೆಬೆಕಾ. ಪ್ರೀತಿಯ ಸಲುವಾಗಿ ಏನೆಲ್ಲ ಮಾರ್ಪಾಡುಗಳು ಆಗುತ್ತವೆ ಅಥವಾ ಆಗಬಹುದು ಎಂಬುದಕ್ಕೆ ಈ ಮದುವೆಗಿಂತ ಮತ್ತೊಂದು ಉದಾಹರಣೆ ಬೇಡ ಅನಿಸುತ್ತದೆ. ಈ ದಂಪತಿಗೆ ನಿಮ್ಮದೂ ಶುಭ ಹಾರೈಕೆ ಇರಲಿ.

ಮೊದಲ ಭೇಟಿಯಲ್ಲೇ ಮದುವೆ ಪ್ರಸ್ತಾವ

ಮೊದಲ ಭೇಟಿಯಲ್ಲೇ ಮದುವೆ ಪ್ರಸ್ತಾವ

ಜರ್ಮನಿ ಮೂಲದ ಐಡಾ ಕಂಪನಿಯ ಬೆಲ್ಲಾ ಹಡಗಿನಲ್ಲಿ ದುಡಿಯುತ್ತಿರುವ ಅವರಿಬ್ಬರೂ ಎರಡು ವರ್ಷದ ಹಿಂದೆ ತಮ್ಮ ಅನಿಸಿಕೆಗಳನ್ನು ಪರಸ್ಪರ ಹಂಚಿಕೊಂಡು, ಮೊದಲ ಭೇಟಿಯಲ್ಲಿಯೇ ಮದುವೆ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಭಾರತ್ ನಾಲ್ಕು ವರ್ಷದಿಂದ, ರೆಬೆಕಾ ಮೂರು ವರ್ಷದಿಂದ ಅದೇ ಹಡಗಿನಲ್ಲಿ ಉದ್ಯೋಗದಲ್ಲಿದ್ದಾರೆ.

ತುಳು ಕಲಿಯಲಿದ್ದಾರೆ ರೆಬೆಕಾ

ತುಳು ಕಲಿಯಲಿದ್ದಾರೆ ರೆಬೆಕಾ

ಮದುವೆ ಬಳಿಕ ಎರಡ್ಮೂರು ವರ್ಷ ಹಡಗಿನಲ್ಲಿ ಇಬ್ಬರೂ ದುಡಿದು, ಬಳಿಕ ಭಾರತದಲ್ಲಿ ವಾಸ್ತವ್ಯ ಹೂಡಲಿರುವುದಾಗಿ ಭಾರತ್ ಹಾಗೂ ರೆಬೆಕಾ ತಿಳಿಸಿದ್ದಾರೆ. ಇನ್ನು ಇಲ್ಲೇ ನೆಲೆಸಲು ನಿರ್ಧರ ಮಾಡಿರೋ ಕಾರಣ ನನಗೆ ತುಳು ಕಲಿಯಬೇಕಿದೆ. ತುಳು ಲಿಪಿ ಇಲ್ಲದ ಕಾರಣ ಕಲಿಕೆಗೆ ತುಂಬಾ ಕಷ್ಟವಾಗಿದೆ. ಆದರೂ ಭಾರತ್ ಸಹಾಯದಿಂದ ಆದಷ್ಟು ಬೇಗ ತುಳು ಕಲಿಯುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ರೆಬೆಕಾ.

ಹರಿದಾಸ್ ಭಟ್ ಪುರೋಹಿತರ ತಂಡ

ಹರಿದಾಸ್ ಭಟ್ ಪುರೋಹಿತರ ತಂಡ

ಹೆಜಮಾಡಿಯ ಭಾರತ್ ಮನೆಯಲ್ಲಿ ಜೂನ್ ಹದಿನಾರರಂದು ಮೆಹೆಂದಿ ಕಾರ್ಯಕ್ರಮ ಆಚರಿಸಿದ್ದು, ರೆಬೆಕಾ ಮೆಹೆಂದಿ ಹಚ್ಚಿಕೊಂಡಿದ್ದಾರೆ. ತುಳುನಾಡಿನ ಪದ್ಧತಿಯಂತೆ ಸೆರೆ ಹಾಗೂ ಕರಿಮನಿತಳಿ ಕಟ್ಟಿ ಮದುವೆ ನಡೆದಿದೆ. ಹೆಜಮಾಡಿಯ ಹರಿದಾಸ್ ಭಟ್ ನೇತೃತ್ವದ ಪುರೋಹಿತರ ತಂಡ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಿಕೊಟ್ಟಿದೆ.

ಮದುವೆಗೆ ಸಾಕ್ಷಿಯಾದ ರೆಬೆಕಾ ಸಂಬಂಧಿಕರು

ಮದುವೆಗೆ ಸಾಕ್ಷಿಯಾದ ರೆಬೆಕಾ ಸಂಬಂಧಿಕರು

ರೆಬೆಕಾ ಅವರ ಅಕ್ಕ, ಭಾವ, ಸಂಬಂಧಿಗಳು ಹಾಗೂ ಸುಮಾರು ಹನ್ನೊಂದು ಮಂದಿ ಜರ್ಮನಿ ಅತಿಥಿಗಳು ಆಗಮಿಸಿ, ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A German girl and a India boy entered in to wedlock as per Hindu marriage customs. They tied nuptial knots in Udupi, Karnataka. Bride Rebecca Maria Opitz from Frankfurt, groom Bharat Kumar Karkera from Hejamady. Maria expressed her keen interest to learn local language, Tulu.
Please Wait while comments are loading...