ಉಟ್ಟ ಬಟ್ಟೆಯಲ್ಲೇ ಅಂತ್ಯಕ್ರಿಯೆ ಆಗಬೇಕೆಂದು ನೇಣಿಗೆ ಶರಣಾದಳು!
ಉಡುಪಿ, ಮಾರ್ಚ್. 17 : ''ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆ ಬಂದು ಬದುಕಲಿಕ್ಕೆ ಇಷ್ಟವಿಲ್ಲದೆ ಸಾಯುವ ನಿರ್ಧಾರ ಮಾಡಿದ್ದೇನೆ.
ನಾನು ಹಾಕಿಕೊಂಡಿರುವ ಉಡುಗೆಯಲ್ಲೇ ನನ್ನ ಅಂತ್ಯಕ್ರಿಯೆ ನಡೆಸಬೇಕು'. ಹೀಗೆಂದು ಕಾಲೇಜು ವಿದ್ಯಾರ್ಥಿನಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಈ ಘಟನೆ ಗುರುವಾರ ಕುಂದಾಪುರ ಸಮೀಪದ ತೆಗ್ಗರ್ಸೆಯಲ್ಲಿ ನಡೆದಿದೆ. ಮುಳುವಾಡಿಮನೆ ನಿವಾಸಿ ಮಂಜುನಾಥ ಪೂಜಾರಿಯವರ ಪುತ್ರಿ ಅಶ್ವಿನಿ (20) ಆತ್ಮಹತ್ಯೆ ಮಾಡಿಕೊಂಡು ದುರ್ದೈವಿ.

ಈಕೆ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಅಶ್ವಿನಿ ಡೆತ್ ನೋಟ್ ಬರೆದು ಸಹಿ ಹಾಕಿ ಟೇಬಲ್ ಮೇಲೆ ಇಟ್ಟು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೋಣೆಯ ಪಕ್ಕಾಸಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications