ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾಪುರದ ಕೋಡಿ ಸಮುದ್ರ ತೀರಕ್ಕೆ ಹಾರಿಬಂದ ಲೆಕ್ಕವಿಲ್ಲದಷ್ಟು ಮೀನುಗಳು

|
Google Oneindia Kannada News

ಉಡುಪಿ, ನವೆಂಬರ್. 15: ಬಾನಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಅದೇ ರೀತಿ ಕೆಲವು ದೈತ್ಯ ಮೀನುಗಳನ್ನು ಹೊರತುಪಡಿಸಿ ಚಿಕ್ಕ ಮೀನುಗಳು ಸಹ ಸಮುದ್ರದಲ್ಲಿ ಹಾರಾಡುವುದನ್ನು ನೋಡಿದ್ದೀರಾ?.

ಕರ್ನಾಟಕ ಸೇರಿದಂತೆ ಹೊರ ರಾಜ್ಯದ ಮೀನುಗಳಿಗೆ ಗೋವಾ ನಿರ್ಬಂಧಕರ್ನಾಟಕ ಸೇರಿದಂತೆ ಹೊರ ರಾಜ್ಯದ ಮೀನುಗಳಿಗೆ ಗೋವಾ ನಿರ್ಬಂಧ

ಈ ಪ್ರಶ್ನೆ ಕೇಳಲು ಕಾರಣವೇನೆಂದರೆ ಉಡುಪಿಯ ಕುಂದಾಪುರದ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜಾಡುವ ಮೀನುಗಳು ಇದೀಗ ಗಾಳಿಯಲ್ಲಿ ಹಾರಾಡಿ ಜನರಲ್ಲಿ ಕೌತುಕ ಹುಟ್ಟಿಸಿವೆ. ಹೌದು, ನೀರಿನಲ್ಲಿ ಈಜುವ ಮೀನುಗಳು ಭೂಮಿಯತ್ತ ತೂರಿ ಬಂದು ಮೀನುಗಾರರಿಗೆ ಸುಗ್ಗಿಯ ವಾತಾವರಣ ಸೃಷ್ಟಿಸಿವೆ.

Fish harvesting again at Kundapura Kodi beach

ಸಮುದ್ರದಿಂದ ಭೂಮಿಯತ್ತ ಚಿಮ್ಮುತ್ತಿರುವ ಮೀನುಗಳು ಬೆಳ್ಳಿ ಬಣ್ಣದ ಬಾಣಗಳಂತೆ ಭಾಸವಾಗುತ್ತಿವೆ. ಈ ದೃಶ್ಯ ನಿನ್ನೆ ಸಂಜೆ (ನ.14) ಕುಂದಾಪುರದ ಕೋಡಿ ಸಮುದ್ರ ತೀರದಲ್ಲಿ ಕಂಡುಬಂದಿದ್ದು, ಅರಬ್ಬೀ ಸಮುದ್ರದಲ್ಲಿ ಸಿಗುವ ರುಚಿಕರ ಭೂ ತಾಯಿ ಮೀನುಗಳು ಕುಂದಾಪುರದ ಕೋಡಿ ತೀರಕ್ಕೆ ಚಿಮ್ಮಿ ಬಂದಿವೆ.

 ಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬ ಎರ್ಮಾಳು ಕಡಲತೀರದಲ್ಲಿ ರಾಶಿ ರಾಶಿ ಮೀನು:ಕರಾವಳಿಗರಿಗೆ ಹಬ್ಬವೋ ಹಬ್ಬ

ಈ ಸಲುವಾಗಿ ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ನಿನ್ನೆ ಕೈರಂಪಣಿ ಎಂಬ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆಗೂ ಮೀರಿ ನೂರು ಪಟ್ಟು ಹೆಚ್ಚು ಮೀನುಗಳು ಬಲೆಗೆ ಬಿದ್ದಿದೆ. ಸಾಲದೆಂಬಂತೆ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿವೆ.

Fish harvesting again at Kundapura Kodi beach

 ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್: ಏನುಂಟು, ಏನಿಲ್ಲ

ಕುಂದಾಪುರ ಕೋಡಿಯ ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಭೂತಾಯಿ ಸಿಕ್ಕಿದೆ. ಮೀನಿನ ರಭಸಕ್ಕೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಸೇರಿದೆ. ಕೈರಂಪಣಿ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದರು.

Fish harvesting again at Kundapura Kodi beach

ಮೀನಿನ ರಾಶಿ ಕಂಡ ಸ್ಥಳೀಯರು 50 ಗಟ್ಟುಮುಟ್ಟು ಯುವಕರನ್ನು ಬಲೆ ಎಳೆಯಲು ಕರೆತಂದಿದ್ದರು. ಮೀನುಗಾರರು 50 ಬಾಕ್ಸ್ ಗಳಲ್ಲಿ ಮೀನು ತುಂಬಿಕೊಂಡರೆ ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಹಿಡಿದು ಚೀಲದಲ್ಲಿ ತುಂಬಿಸಿಕೊಳ್ಳಲು ಮುಗಿಬಿದ್ದರು.

English summary
Fish harvesting again at Kundapura Kodi beach. Local fishermen have the largest number of fish Yesterday evening on November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X