ಉಡುಪಿಯ ಬಾರ್ಕೂರು ಮಹಾಸಂಸ್ಥಾನದ ಮೊರೆ ಹೋದ ಮೇಟಿ
ಉಡುಪಿ, ಸೆಪ್ಟೆಂಬರ್ 18 : ಮಹಿಳೆಯೊಂದಿಗಿನ ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ಶಾಸಕ ಎಚ್ .ವೈ ಮೇಟಿ ದೇವರ ಮೊರೆ ಹೋಗಿದ್ದಾರೆ.
ಮಹಿಳೆಯೊಂದಿಗಿನ ರಾಸಲೀಲೆಯ ಅಶ್ಲೀಲ ವಿಡಿಯೋ ಬಹಿರಂಗಗೊಂಡ ಬಳಿಕ ತಮ್ಮ ಸಚಿವ ಸ್ಥಾನ ಕಳೆದುಕೊಂಡು ಭಾರೀ ಮುಜುಗರಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಎಚ್ .ವೈ ಮೇಟಿ ಇಂದು (ಸೋಮವಾರ) ಉಡುಪಿಯ ಬಾರ್ಕೂರು ಮಹಾಸಂಸ್ಥಾನಕ್ಕೆ ರಹಸ್ಯವಾಗಿ ಭೇಟಿ ನೀಡಿದರು.

ಪಾಂಡ್ಯ ಅರಸರ ಕಾಲದಲ್ಲಿ ಯಾರೇ ತಪ್ಪು ಮಾಡಿದ್ದರೂ ಅಥವಾ ಸಂಕಷ್ಟದಲ್ಲಿದ್ದರೆ ದೈವದೆದುರು ಬಂದು 3 ಗಂಟೆ ಬಾರಿಸುವ ಕ್ರಮವಿತ್ತು.
ಆದರೆ ಅರಸೊತ್ತಿಗೆ ಅಳಿದ ಬಳಿಕ ಜನ ಕುಂಡೋದರ ದೈವದೆದುರು ಬಂದು ತಮ್ಮ ಸಂಕಷ್ಟಗಳ ನಿವಾರಣೆಗೆ ಗಂಟೆ ಬಾರಿಸುತ್ತಾರೆ. ಈ ಪ್ರತೀತಿ ಇಂದಿಗೂ ಮುಂದುವರೆದಿದೆ.

ಎಚ್.ವೈ ಮೇಟಿ ಅವರು ವಿಜಯಲಕ್ಷ್ಮಿ ಎಂಬುವರೊಂದಿಗೆ ಇದ್ದ ಅಶ್ಲೀಲ ವಿಡಿಯೋ ಬಹಿರಂಗಗೊಂಡಿತ್ತು .ಇದಾದ ಬಳಿಕ ಎಚ್ .ವೈ .ಮೇಟಿ ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಆಗಸ್ಟ್ ನಲ್ಲಿ ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ರಾಸಲೀಲೆ ಸಿಡಿ ಪ್ರಕರಣ ಮತ್ತೆ ಸದ್ದು ಮಾಡಿತ್ತು. ರಾಸಲೀಲೆ ಪ್ರಕರಣರದಲ್ಲಿ ಮೇಟಿಗೆ ಈಗಾಗಲೇ ಕ್ಲೀನ್ ಚೀಟ್ ಸಿಕ್ಕಿದೆ.












Click it and Unblock the Notifications