• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಕ್ಕುಟೋದ್ಯಮದಲ್ಲಿ ಕ್ರಾಂತಿ ಮಾಡಿದ ಇಂಜಿನಿಯರಿಂಗ್ ಓದಿದ ಮಹಿಳೆ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 29; ವೈಟ್ ಕಾಲರ್ ಕೆಲಸ ಬೇಕು, ಕೈ ತುಂಬಾ ಹಣಗಳಿಸಬೇಕು, ಸುಖ ಜೀವನ ಮಾಡಬೇಕು ಅನ್ನೋದು ಎಲ್ಲರ ಆಸೆ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಓದಿ ಕೆಲಸ ಸಂಪಾದಿಸಿ ಜೀವನ ಗುರಿ ಮುಟ್ಟಲು ಶ್ರಮ ಹಾಕುತ್ತಾರೆ. ಆದರೆ ಖುಷಿ ಅನ್ನೋದು ಕೇವಲ ವೈಟ್ ಕಾಲರ್ ಜಾಬ್‌ನಲ್ಲಿ ಮಾತ್ರ ಅಲ್ಲ ಕೃಷಿಯಲ್ಲೂ ಇದೇ ಅನ್ನೋದನ್ನು ಉಡುಪಿಯ ಮಹಿಳೆಯೋರ್ವರು ಸಾಧಿಸಿ ತೋರಿಸಿದ್ದಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಪದವಿ ಪಡೆದರೂ ಮಹಿಳೆ ಸಿಲಿಕಾನ್ ಸಿಟಿಯ ಮಾಯಾ ಲೋಕದಿಂದ ದೂರ ಬಂದು ಉಡುಪಿಯಲ್ಲಿ ಕೃಷಿ ಮಾಡಿ ಸಾಧಿಸಿ ತೋರಿಸಿದ್ದಾರೆ. ಪೌಲ್ಟ್ರಿ ಫಾರಂನಲ್ಲಿ ಯಶಸ್ಸು ಕಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಮೂಲಕ ಸ್ವ ಉದ್ಯೋಗದ ಕನಸನ್ನು ಹೊತ್ತ ಯುವ ಜನರಿಗೆ ಮಾದರಿಯಾಗಿದ್ದಾರೆ.

ಲಾಕ್‌ಡೌನ್; ಚಾಕೊಲೇಟ್ ಮಾಡಿ ಉದ್ಯಮಿಗಳಾದ ಸಾಫ್ಟ್‌ವೇರ್ ದಂಪತಿ! ಲಾಕ್‌ಡೌನ್; ಚಾಕೊಲೇಟ್ ಮಾಡಿ ಉದ್ಯಮಿಗಳಾದ ಸಾಫ್ಟ್‌ವೇರ್ ದಂಪತಿ!

ಉಡುಪಿಯ ಜಿಲ್ಲೆ ಯಡ್ತಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಪೌಲ್ಟ್ರಿ ಉದ್ಯಮದಲ್ಲಿ ಕ್ರಾಂತಿ ಬರೆದ ಮಹಿಳೆ ಸುಪ್ರೀಯಾ ಕಾಮತ್. ಇವರ ಹುಟ್ಟೂರು ಬೆಂಗಳೂರು, ಬೆಳೆದದ್ದೂ ರಾಜಧಾನಿಯಲ್ಲೇ. ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು. ಗ್ರಾಮೀಣ ಭಾಗದ ಹೆಣ್ಣು ಮಕ್ಕಳು, ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗ ಅರಸಿದರೇ, ಸುಪ್ರೀಯಾ ಕಾಮತ್ ಅವರದ್ದು ಮಾತ್ರ ಪಕ್ಕಾ ರಿವರ್ಸ್ ಕೇಸ್.

ಹಲಸಿನ ಹಣ್ಣಿನಿಂದ ಚಾಕಲೇಟ್ ತಯಾರಿಸಿದ ಕ್ಯಾಂಪ್ಕೋ ಹಲಸಿನ ಹಣ್ಣಿನಿಂದ ಚಾಕಲೇಟ್ ತಯಾರಿಸಿದ ಕ್ಯಾಂಪ್ಕೋ

ಸುಪ್ರೀಯಾ ಕಾಮತ್ ಅವರು ಮದುವೆಯಾಗಿ ಬಂದದ್ದು ಉಡುಪಿಯ ಯಡ್ತಾಡಿಯ ಮನೆಯೊಂದಕ್ಕೆ. ಪೇಟೆ ಮಗಳಾದರೂ ಯಡ್ತಾಡಿಯ ಹಳ್ಳಿ ಜೀವನಕ್ಕೆ ಸುಪ್ರೀಯಾ ಬಹುಬೇಗ ಒಗ್ಗಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವಿ ಮುಗಿಸಿ ಮತ್ತೆ ಬೆಂಗಳೂರು ಕಡೆಗೆ ಹೋಗಬಹುದಾಗಿದ್ದರೂ, ಸುಪ್ರೀಯಾ ಅವರು ಮಾತ್ರ ಬೆಂಗಳೂರಿನ ಬ್ಯುಸಿ ಲೈಫ್ ನತ್ತ ಆಸಕ್ತಿ ತೋರಿಸಲಿಲ್ಲ.

ಮಂಡ್ಯ: ಊರಿಗೆ ಕೊರೊನಾ ಬಾರದಿರಲಿ ಎಂದು ಕುರಿ, ಕೋಳಿ ಬಲಿ ನೀಡಿದ ಗ್ರಾಮಸ್ಥರು ಮಂಡ್ಯ: ಊರಿಗೆ ಕೊರೊನಾ ಬಾರದಿರಲಿ ಎಂದು ಕುರಿ, ಕೋಳಿ ಬಲಿ ನೀಡಿದ ಗ್ರಾಮಸ್ಥರು

ಕೋಳಿ ಆಹಾರ ಉತ್ಪಾದನಾ ಘಟಕ

ಕೋಳಿ ಆಹಾರ ಉತ್ಪಾದನಾ ಘಟಕ

ಸುಪ್ರೀಯಾ ಕಾಮತ್ ಗಂಡನ ಮನೆಯವರು ನಡೆಸುತ್ತಿದ್ದ ಕೋಳಿ ಆಹಾರ ಉತ್ಪಾದನಾ ಘಟಕದಲ್ಲೇ ಕೈಲಿಂದಾಗುವ ಕೆಲಸವನ್ನು ಮಾಡುತ್ತಿದ್ದರು. 2000 ಇಸವಿಯಿಂದಲೇ ಸುಪ್ರೀಯಾ ಕಾಮತ್ ಮನೆಯವರು ಉತ್ತಮ್ ಆಗ್ರೋ ಇಂಡಸ್ಟ್ರಿ ಯನ್ನು ತೆರೆದು ಉದ್ಯಮ ನಡೆಸುತ್ತಿದ್ದರು. ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ವೇಳೆ ಹೆಚ್ಚಿನ ರೈತರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ಅವೈಜ್ಞಾನಿಕ ರೀತಿಯಲ್ಲಿ ಕುಕ್ಕುಟ ಉದ್ಯಮ ಆರಂಭಿಸಿ ಕೈಸುಟ್ಟುಕೊಳ್ಳುತ್ತಿರುವ ಘಟನೆಗಳು ಇವರ ಗಮನಕ್ಕೆ ಬಂದವು. ಹೀಗಾಗಿ ಕರಾವಳಿಯ ವಾತಾವರಣಕ್ಕೆ ಮಾದರಿಯಾಗುವಂತಹ ಒಂದು ಕೋಳಿ ಫಾರ್ಮ್ ನಾವೇ ಯಾಕೆ ಮಾಡಬಾರದು? ಎಂದು ಯೋಚಿಸಿ,ಒಂದು ಸುಸಜ್ಜಿತ ಕೋಳಿ ಫಾರ್ಮ್ ಕೆಲಸಕ್ಕೆ ಇಳಿದರು. ಈ ಫಾರ್ಮ್ ಮಾಡಬೇಕಾದರೆ ಸುಮಾರು ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ.

2018ರಿಂದ ಉದ್ಯಮ ಆರಂಭ

2018ರಿಂದ ಉದ್ಯಮ ಆರಂಭ

2018ರಲ್ಲಿ ಕೋಳಿ ಫಾರ್ಮ್ ಉದ್ಯಮಕ್ಕೆ ಸುಪ್ರೀಯಾ ಈ ಉದ್ಯಮ ಆರಂಭಿಸಿದರು. 400 ಅಡಿ ಉದ್ದ ಶೆಡ್ ನಿರ್ಮಿಸಿರುವ ಅವರು ಸದ್ಯ 24 ಸಾವಿರ ಕೋಳಿಗಳನ್ನು ಸಾಕುತ್ತಿದ್ದಾರೆ. ಈ 24 ಸಾವಿರ ಕೋಳಿಗಳನ್ನು ಓರ್ವ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಾರೆ. ‌ಅಷ್ಟರ ಮಟ್ಟಿಗೆ ಫಾರ್ಮ್ ಅನ್ನು ಸುಪ್ರೀಯಾ ಹೈಜೆನಿಕ್ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು, ಎರಡು ಸಾವಿರ ಕೋಳಿಗಳಿಗೆ ಓರ್ವ ಕೆಲಸದಾಳು ಅಗತ್ಯವಿರುವ ಸಂದರ್ಭದಲ್ಲಿ ಸುಪ್ರೀಯಾ ಕಾಮತ್ ಅವರ ಶೆಡ್ ಓರ್ವನಿಂದಲೇ ನಿರ್ವಹಣೆ ಯಾಗುತ್ತದೆ.

ಈ ಫಾರ್ಮ್ ನಲ್ಲಿ ಕೋಳಿಗಳಿಗೆ ಆಹಾರವನ್ನು ಬಕೆಟ್‌ನಲ್ಲಿ ತಂದು ಸುರಿಯ ಬೇಕಾಗಿಲ್ಲ. ಇಲ್ಲಿ ಆಟೋಮ್ಯಾಟಿಕ್ ಫೀಡಿಂಗ್ ಮಷೀನ್ ಇದೆ. ತಟ್ಟೆಯಲ್ಲಿ ಆಹಾರ ಖಾಲಿಯಾಗುತ್ತಿದ್ದಂತೆ ಸೆನ್ಸಾರ್ ಮೂಲಕ ಅದು ಪತ್ತೆಯಾಗಿ ಫೀಡ್ ತನ್ನಿಂದ ತಾನೇ ಬಂದು ತುಂಬುತ್ತದೆ. 400ಅಡಿ ಉದ್ದದ ಶೆಡ್‌ನಲ್ಲಿ 350 ಫುಡ್ ಫೀಡರ್ ಗಳಿದ್ದು, ಎಲ್ಲಾ ಫೀಡರ್ ಗಳಿಗೆ ಏಕಕಾಲದಲ್ಲಿ ಮೋಟಾರ್ ಮೂಲಕ ಫುಡ್ ರವಾನೆಯಾಗುತ್ತದೆ. ಹೀಗೆ ಎಲ್ಲಾ ಫೀಡರ್‌ಗಳಿಗೆ ಫುಡ್ ಭರ್ತಿಯಾದ ಬಳಿಕ ಕೊನೆಯ ಫೀಡರ್ ನಲ್ಲಿರುವ ಸೆನ್ಸಾರ್ ನಿಂದ ಮೋಟಾರ್ ಆಟೋಮ್ಯಾಟಿಕ್ ಆಗಿ ಬಂದ್ ಆಗುತ್ತದೆ.

ನೀರು ಪೂರೈಕೆಯಲ್ಲಿಯೂ ಆಧುನಿಕತೆ

ನೀರು ಪೂರೈಕೆಯಲ್ಲಿಯೂ ಆಧುನಿಕತೆ

ಕೋಳಿಗಳಿಗೆ ನೀರು ಪೂರೈಕೆಯಲ್ಲೂ ಆಧುನಿಕತೆಯನ್ನು ತರಲಾಗಿದೆ. ಈ ಹೊಸ ತಂತ್ರಜ್ಞಾನದಲ್ಲಿ ಒಂದು ಹನಿ ನೀರು ಕೂಡ ನೆಲಕ್ಕೆ ಬೀಳುವುದಿಲ್ಲ. ಕೋಳಿಗಳು ಕೊಕ್ಕು ಇಟ್ಟ ಕೂಡಲೇ ಒಂದೆರಡು ಹನಿ ನೀರು ಅವುಗಳಿಗೆ ಸಿಗುತ್ತದೆ. ನಿಪ್ಪಲ್ ಸಿಸ್ಟಮ್ ನಿಂದಾಗಿ ನೀರಿನ ಉಳಿತಾಯದ ಜೊತೆಗೆ ಫಾರ್ಮ್ ಒಳಗೆ ಕೊಚ್ಚೆಯಾಗದಂತೆ ಶುಚಿತ್ವವನ್ನು ಕೂಡ ಕಾಪಾಡಿಕೊಂಡಿದ್ದಾರೆ.

ಫ್ಯಾನ್ ಮತ್ತು ನೀರಿನ ಸ್ಪ್ರೇ ವ್ಯವಸ್ಥೆ

ಫ್ಯಾನ್ ಮತ್ತು ನೀರಿನ ಸ್ಪ್ರೇ ವ್ಯವಸ್ಥೆ

ಕೋಳಿಗಳು ತಿಂಗಳ ಒಳಗೆ ಎರಡರಿಂದ ನಾಲ್ಕು ಕೆಜಿ ಯವರೆಗೆ ತೂಕ ಬರುತ್ತದೆ. ಇದರಿಂದ ಉತ್ತಮ ಆದಾಯವನ್ನು ಸುಪ್ರೀಯಾ ಗಳಿಸುತ್ತಿದ್ದಾರೆ. ಇನ್ನು ಕೋಳಿಗಳ ಮಾರಾಟವಾದ ಬಳಿಕ ಗ್ಯಾಸ್ ಬೆಂಕಿಯಿಂದ ಇಡೀ ಶೆಡ್ ನ್ನು ಶುಚಿ ಮಾಡಲಾಗುತ್ತದೆ. ವೈರಾಣುಗಳಿಂದ ಕೋಳಿಗಳನ್ನು ರಕ್ಷಣೆ ಮಾಡಲು ಈ ಉಪಾಯ ಮಾಡಲಾಗಿದೆ‌.ಕೋಳಿಗಳಿಗೆ ಕರಾವಳಿಯ ಅತೀ ತಾಪಮಾನದಿಂದ ರಕ್ಷಣೆ ಕೊಡಲು ಫ್ಯಾನ್ ಮತ್ತು ನೀರಿನ ಸ್ಪ್ರೇ ವ್ಯವಸ್ಥೆಯನ್ನು ಮಾಡಲಾಗಿದೆ.

  ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada
  1 ಕೋಟಿಗೂ ಅಧಿಕ ಬೆಲೆ

  1 ಕೋಟಿಗೂ ಅಧಿಕ ಬೆಲೆ

  ಸುಪ್ರೀಯಾ ಕಾಮತ್ ಅವರ ಎರಡು ಶೆಡ್‌ಗಳು ಒಂದು ಕೋಟಿಗೂ ಅಧಿಕ ಬೆಲೆ ಬಾಳುತ್ತವೆ. ಇನ್ನು ಕೋಳಿ ಮರಿಗಳನ್ನು ಕೂಡ ತಾವೇ ಸ್ವತಃ ತಂದು ಸಾಕಿ ಬಳಿಕ ವ್ಯಾಪಾರ ಮಾಡುತ್ತಾರೆ. ಒಟ್ಟಿನಲ್ಲಿ ಯಾವುದೇ ಉದ್ಯಮವಿರಲಿ ಕೀಳರಿಮೆ ಬಿಟ್ಟು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡರೆ ಅದು ನಮ್ಮ ಕೈ ಹಿಡಿಯುತ್ತದೆ ಎನ್ನುವುದಕ್ಕೆ ಸುಪ್ರೀಯಾ ಕಾಮತ್ ಸಾಕ್ಷಿಯಾಗಿದ್ದಾರೆ. ಕಲಿತ ಶಿಕ್ಷಣಕ್ಕೆ ತಕ್ಕ ಕೆಲಸ ಬೇಕು ಅಂತ ಕಾದು ಕುಳಿತುಕೊಳ್ಳುವ ಬದಲು ಸ್ವತಃ ಉದ್ಯೋಗ ಮಾಡಿದರೆ ಲಾಭದ ಜೊತೆಗೆ ನೆಮ್ಮದಿ ಅನ್ನೋದನ್ನು ಸುಪ್ರೀಯಾ ನಿರೂಪಿಸಿದ್ದಾರೆ.

  English summary
  Here are the success story of poultry farm. Supriya Kamath who studied engineering in Bengaluru now running poultry farm in husband house at Udupi.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X