ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ(79) ನಿಧನ
ಉಡುಪಿ, ಡಿಸೆಂಬರ್ 7: ಕರಾವಳಿ ಭಾಗದ ಹಿರಿಯ ರಂಗಭೂಮಿ ಕಲಾವಿದ ಉದ್ಯಾವರ ಮಾಧವ ಆಚಾರ್ಯ ಅವರು (79) ಸೋಮವಾರ ನಿಧನರಾದರು.
ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಅವರು ರಂಗ ನಿರ್ದೇಶಕರಾಗಿ, ಕಥೆಗಾರರಾಗಿ, ಕವಿಯಾಗಿ, ನಟರಾಗಿ ಜನಾನುರಾಗಿಯಾಗಿದ್ದರು.
ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯಲ್ಲಿ ಉದ್ಯಾವರ ಮಾಧವ ಆಚಾರ್ಯರು ನಟರಾಗಿ ಅಭಿನಯಿಸಿದ್ದಾರೆ. ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕರಾಗಿ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಸಾಧಕರಾಗಿದ್ದರು.

ನಾಡಿನಾದ್ಯಂತ ಸುಮಾರು 50 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಮಾಧವ ಆಚಾರ್ಯ ಅವರದು. ಕರ್ನಾಟಕ ರಾಜ್ಯೋತ್ಸವ, ರಂಗ ವಿಷಾರದ ಪ್ರಶಸ್ತಿಗೆ ರಂಗಭೂಮಿ ಕಲಾವಿದ ಉದ್ಯಾವರ ಮಾಧವ ಆಚಾರ್ಯ ಅವರು ಭಾಜನರಾಗಿದ್ದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕರೂ ಆಗಿದ್ದ ಇವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಡಿ.೭ರ ಸೋಮವಾರ ಮಧ್ಯಾಹ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.












Click it and Unblock the Notifications